ಕೊರಟಗೆರೆ:

      ಕೊರೊನಾ ವೈರೇಸ್ ಹರಡುವಿಕೆ ತಡೆಯಲು ಪ್ರತಿನಿತ್ಯ ಸೈನಿಕರಂತೆ ಕೆಲಸ ಮಾಡುತ್ತೀರುವ ಕೋಳಾಲ ಜಿಪಂ ಕ್ಷೇತ್ರದ ಆಸ್ಪತ್ರೆ, ಪೊಲೀಸ್, ಗ್ರಾಪಂ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ 3 ಸಾವಿರ ಸಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ತಿಳಿಸಿದರು.

      ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕರ್ತವ್ಯನಿರತ ಕೊರೊನಾ ಸೈನಿಕರಿಗೆ ಉಚಿತವಾಗಿ ಇತ್ತೀಚಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ ವೇಳೆ ಮಾತನಾಡಿದರು.

      ಕೋಳಾಲ ಜಿಪಂ ಕ್ಷೇತ್ರದಲ್ಲಿ ಕೊರೊನಾ ಸೈನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ್ದೇನೆ. ನನ್ನ ಮತಕ್ಷೇತ್ರದ ಪ್ರತಿಮನೆಯ ಸದಸ್ಯರಿಗೂ ಉಚಿತವಾಗಿ 30ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವರ ಮನೆಯ ಬಳಿಯೇ ಹೋಗಿ ವಿತರಣೆ ಮಾಡುತ್ತೇನೆ. ಈಗಾಗಲೇ ಜನಸಂಖ್ಯೆಯ ಅಂಕಿಅಂಶ ಕಳೆಹಾಕಿದ್ದೇನೆ ನಮ್ಮ ಕ್ಷೇತ್ರದ ಜನರ ಆರೋಗ್ಯ ರಕ್ಷಣೆ ನನಗೆ ಬಹುಮುಖ್ಯವಾಗಿದೆ ಎಂದು ಹೇಳಿದರು.

      ನಮ್ಮ ದೇಶದಲ್ಲಿ ಕೊರೋನಾ ವೈರೆಸ್ ಹರಡುವಿಕೆ ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಆರೋಗ್ಯ, ಗ್ರಾಪಂ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಮಹತ್ವವಾಗಿದೆ. ಗ್ರಾಮೀಣ ಪ್ರದೇಶಕ್ಕೆ ಪರಿಶೀಲನೆಗೆ ಅಧಿಕಾರಿವರ್ಗ ಬಂದಾಗ ಪ್ರತಿಯೊಬ್ಬರು ಸಹಕಾರ ನೀಡಿ ವೈದ್ಯರಿಗೆ ಮತ್ತು ಸರಕಾರಿ ಸಿಬ್ಬಂಧಿಗಳಿಗೆ ಗೌರವಿಸಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ನಮ್ಮೇಲ್ಲರದಾಗಿದೆ ಎಂದು ಸೂಚಿಸಿದರು.

      ಕೋಳಾಲ ಹೋಬಳಿಯ ಕಾಲೋನಿ, ದೊಡ್ಡಸಾಗ್ಗೆರೆ, ಕೋಳಾಲ ಗಡಿಭಾಗದಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಮತ್ತು ಗ್ರಾಪಂಯಿಂದ ವಿಶೇಷ ಚೇಕ್‍ಪೂಸ್ಟ್ ತೆರೆಯಲಾಗಿದೆ. ಪ್ರತಿನಿತ್ಯ ರಾತ್ರಿಹಗಲು ಅಧಿಕಾರಿವರ್ಗ ತಪಾಸಣೆ ನಡೆಸಿ ಕೊರೊನಾ ರೋಗ ಹರಡದಂತೆ ಕೆಲಸ ನಿರ್ವಹಣೆ ಮಾಡುತ್ತೀದ್ದಾರೆ. ಸಾರ್ವಜನಿಕರು 21ದಿನ ಮನೆಯಲ್ಲಿಯೇ ಇದ್ದು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

      ಎಲೆರಾಂಪುರ, ನೀಲಗೊಂಡನಹಳ್ಳಿ, ಕೋಳಾಲ, ಪಾತಗಾನಹಳ್ಳಿ, ವಜ್ಜನಕುರಿಕೆ, ಚಿನ್ನಹಳ್ಳಿ ಗ್ರಾಪಂಯ ಪಿಡಿಓ, ಕಾರ್ಯದರ್ಶಿ ತಮ್ಮ ಕಾರ್ಯಪಡೆಯ ಜೊತೆಗೂಡಿ ಪ್ರತಿ ಮನೆಯ ಮಾಹಿತಿ ಕಲೆಹಾಕಬೇಕು. ವಿದೇಶ ಮತ್ತು ದೇಶದ ವಿವಿಧ ಕಡೆಗಳಿಂದ ಬಂದಿರುವ ಕಾರ್ಮಿಕರ ಬಗ್ಗೆ ಜಾಗೃತಿ ವಹಿಸಿ ಆರೋಗ್ಯ ಇಲಾಖೆಗೆ ತಕ್ಷಣ ಮಾಹಿತಿ ರವಾನಿಸಬೇಕಾಗಿದೆ. ಸಮಸ್ಯೆ ಎದುರಾದರೇ ನನ್ನನ್ನು ಸಂಪರ್ಕಿಸಿ ನಾನೇ ಖುದ್ದಾಗಿ ಬಂದು ಪರಿಶೀಲನೆ ನಡೆಸುವ ಕೆಲಸಕ್ಕೆ ಕೈಜೊಡಿಸುತ್ತೇನೆ ಎಂದು ಮನವಿ ಮಾಡಿದರು.

 

(Visited 7 times, 1 visits today)