ತುಮಕೂರು:

      ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ) ಪ್ರವೇಶಾತಿ ಪಡೆದಿದ್ದ ಪ್ರಥಮ ಮತ್ತು ದ್ವಿತೀಯ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಸಂಪರ್ಕ ತರಗತಿಗಳು ಪ್ರಾರಂಭವಾಗಿವೆ ಎಂದು ಪ್ರಾದೇಶಿಕ ನಿರ್ದೇಶಕ ದಿಲೀಪ ಡಿ. ಅವರು ತಿಳಿಸಿದ್ದಾರೆ.

      ವೇಳಾಪಟ್ಟಿಯನ್ನು ಈಗಾಗಲೇ www.ksoumyuru.ac.in ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಞsousಣuಜeಟಿಣ ಂಠಿಠಿ ಅನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಆನ್‍ಲೈನ್ ಸಂಪರ್ಕ ಕಾರ್ಯಕ್ರಮಕ್ಕೆ ಲೈವ್ ಆಗಿ ಸೇರಿಕೊಳ್ಳಬಹುದಾಗಿದೆ.

      www.ksoumyuru.ac.in  ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

       ವಿದ್ಯಾರ್ಥಿಗಳು ಆನ್‍ಲೈನ್ ಸಂಪರ್ಕ ತರಗತಿಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಸಿ.ಎ-07, ಟೂಡಾ ಲೇಔಟ್, ಮೇಳೆಕೋಟೆ-ವೀರಸಾಗರೆ, ತುಮಕೂರು-572105 ಅಥವಾ ದೂರವಾಣಿ ಸಂಖ್ಯೆ: 9108808219 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 9 times, 1 visits today)