ಮಾರ್ಚ್ 11 ರಂದು ಅಂಗವಿಕಲರ ಜಿಲ್ಲಾ ಸಮ್ಮೇಳನ!!

ತುಮಕೂರು:

       ಸಕ್ಷಮ ಜಿಲ್ಲಾ ಘಟಕವು ಮಾರ್ಚ್ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಾಲಭವನದಲ್ಲಿ ಸಕ್ಷಮ ತುಮಕೂರು ಜಿಲ್ಲಾ ಘಟಕದ ದ್ವಿತೀಯ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಂಡಿದೆ.

        ಕಾರ್ಯಕ್ರಮದ ಉದ್ಘಾಟನೆಯನ್ನು ಸಕ್ಷಮ ಅಖಿಲ ಭಾರತೀಯ ಕಾರ್ಯದರ್ಶಿ ಕಮಲಾ ಕಾಂತ್ ಪಾಂಡೆ ನೆರವೇರಿಸುವರು. ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದೇಶ್ವರಸ್ವಾಮೀಜಿಯವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಬಿ.ಆರ್.ಚಂದ್ರಿಕಾ, ಅಂಗವಿಕಲರ ಹಕ್ಕುಗಳ ಕಾಯಿದೆ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜು ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

      ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ 9 ಗಂಟೆಗೆ ಟೌನ್‍ಹಾಲ್ ವೃತ್ತದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಐಕ್ಯತಾ ನಡಿಗೆಗೆ ಚಾಲನೆ ನೀಡುವರು. ಐಕ್ಯತಾ ನಡಿಗೆಯು ಬಾಲಭವನದಲ್ಲಿ ಸಮವೇಶಗೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸಮಾವೇಶದಲ್ಲಿ 350ಕ್ಕೂ ಹೆಚ್ಚು ವಿಕಲ ಚೇತನರು ಭಾಗವಹಿಸಲಿದ್ದಾರೆ.

(Visited 5 times, 1 visits today)

Related posts

Leave a Comment