ಮಧುಗಿರಿ:

      ಹಿಂದಿನ ಸಂಪ್ರದಾಯದಂತೆ ಕೋಣವನ್ನು ದೇವಿಗೆ ದೇವಸ್ಥಾನದ ಮುಂದೆಯೇ ಬಲಿ ಕೊಡ ಬೇಕು ಎಂದು ಶ್ರೀ ದಂಡಿನ ಮಾರಮ್ಮ ದೇವಾಲಯದ ಬಾಗಿಲಿಗೆ ಬೀಗ ಹಾಕಿ ಕೆಲ ಗಂಟೆಗಳ ಕಾಲ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗ ಇಟ್ಟು ಬುಧವಾರ ಭಕ್ತಾದಿಗಳು ಪ್ರತಿಭಟನೆ ನಡೆಸಿದರು.

      ಪಟ್ಟಣದ ಪುರಾತನ ಪ್ರಸಿದ್ದ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಆಡಳಿತಾಧಿಕಾರಿ ಡಾ.ನಂದಿನಿ ದೇವಿ ಚಾಲನೆ ನೀಡಿದರು, ನಂತರ ಬುಧವಾರ ಬೆಳಗಿನ ಜಾವ ಹಿಂದಿನ ಧಾರ್ಮಿಕ ಕಾರ್ಯಗಳ ನಿಯಮಾವಳಿಯಂತೆ ಕೋಣದ ಬಲಿ ಹಾಗೂ ಪ್ರಥಮ ದಿನದ ಅಂಗವಾಗಿ ಆರತಿ ಸೇವೆಯನ್ನು ನೆಡೆಸಿ ಕೊಡುವ ನಿಯಮ ಹಲವು ವರ್ಷಗಳಿಂದ ಸಾಗುತ್ತ ಬಂದಿದ್ದು. ಅದರಂತೆ ಕೋಣವನ್ನು ಬಲಿ ಕೊಡಲು ಮುಂದಾದಾಗ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಅಡ್ಡಿಪಡಿಸಿದ್ದರಿಂದ ಭಕ್ತಾದಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ಜರುಗಿತು.

      ಸ್ಥಳಕ್ಕೆ ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ ಹಾಗೂ ಡಿವೈಎಸ್ಪಿ ಸೂರ್ಯನಾರಾಯಣ್ ಅವರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೊಜನವಾಗಲಿಲ್ಲ, ಮಂಗಳವಾರ ರಾತ್ರಿಯಿಂದಲೇ ಆರಂಭವಾದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಪುರಸಭಾ ಸದಸ್ಯರ ಹೆಸರನ್ನು ಮುದ್ರಿಸಿಲ್ಲಾ, ಜಾತ್ರಾ ಮಹೋತ್ಸವಕ್ಕೆ ಇದೂವರೆವಿಗೂ ಕಮಿಟಿಯನ್ನು ನೇಮಕ ಮಾಡಿಲ್ಲ ದೇವಾಲಯಕ್ಕೆ ಸುಣ್ಣ ಬಣ್ಣ ಮಾಡಿಸಿಲ್ಲ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ ಎಂಬ ಆರೋಪಗಳು ತಾಲ್ಲೂಕು ಆಡಳಿತದ ವಿರುದ್ಧ ಕೇಳಿ ಬಂದವು.

      ಬೆಳಗಿನ ಜಾವ ಬಲಿಗೆಂದು ಕರೆ ತರಲಾಗಿದ್ದು ಕೋಣವನ್ನು ಕಡೆಯಲು ಮುಂದಾದಗ ಸ್ಥಳದಲ್ಲಿದ್ದ ಕಂದಾಯಾಧಿಕಾರಿಗಳು ಮತ್ತು ಪೋಲೀಸರು ಪ್ರಾಣಿ ಬಲಿ ನಿಷೇಧ ವಿರುತ್ತದೆ ಎಂದು ತಿಳಿಸಿ ಕೋಣವನ್ನು ಬಿಡುಗಡೆ ಮಾಡುವಾಗ ಗುಂಪಿನಲ್ಲಿದ್ದ ಕಿಡಿಗೇಡಿಗಳು ಕೋಣವನ್ನು ಗಲಿಬಿಲಿ ಗೊಳಿಸಿದಾಗ ಗಾಬರಿಗೊಂಡ ಕೋಣವು ಬದುಕಿದೆಯಾ ಬಡ ಜೀವವೇ ಎಂದು ಯಾರಿಗೂ ಸಿಗದೆ ಓಡಿ ಹೋಗುವಾಗ ಸೇರಿದ್ದ ಸಾವಿರಾರು ಜನರಲ್ಲಿ ನೂಕಾಟ ತಳ್ಳಾಟ ನಡೆಯಿತು.

      ಕೋಣವನ್ನು ತಾಯಿಗೆ ಬಲಿಕೊಡದೆ ಹೋದರೆ ನಮ್ಮ ಇಡೀ ಪಟ್ಟಣಕ್ಕೆ ತೊಂದರೆ ಉಂಟಾಗುತ್ತದೆ ಎಂದು ಭಕ್ತಾದಿಗಳು ಪಟ್ಟು ಹಿಡಿದು ರಸ್ತೆಯಲ್ಲಿದ್ದ ಉತ್ಸವ ಮೂರ್ತಿಯನ್ನು ತುಮಕೂರು ರಸ್ತೆಯ ಸಮೀಪ ತೆಗೆದು ಕೊಂಡು ಹೋಗಿದ್ದರು ನಂತರ ಪ್ರಭಾರ ಪೋಲೀಸ್ ನಿರೀಕ್ಷಕ ನದಾಫ್, ಪಿಎಸ್‍ಐಗಳಾದ ಕಾಂತರಾಜು, ಪಾಲಾಕ್ಷ ಪ್ರಭು, ಗಂಗಾಧರ್ ಮತ್ತಿತರ ಅಧಿಕಾರಿಗಳು ಮನವೊಲಿಸಿದ ಮನವೂಲಿಕೆಯಿಂದಾಗಿ ಉತ್ಸವ ಮೂರ್ತಿಯು ಮತ್ತೆ ಇದ್ದಂತಹ ಸ್ಥಳಕ್ಕೆ ವಾಪಸ್ಸು ತರಲಾಯಿತು. ಪ್ರತಿಭಟನೆಯನ್ನು ಕೈ ಬಿಟ್ಟು ಉತ್ಸವ ಮೂರ್ತಿಯನ್ನು ಗುಡಿ ತುಂಬಿಸಲು ಮುಂದಾದರು.

      ಜನರ ಗದ್ದಲದಿಂದಾಗಿ ದೇವಿಯ ಉತ್ಸವ ಮೂರ್ತಿಯು ನಸುಕಿನ ಜಾವವೇ ಗುಡಿ ಸೇರಬೇಕಾಗಿತ್ತು. ಸುಮಾರು ಬೆಳಗ್ಗೆ 10.45ಕ್ಕೆ ಉತ್ಸವ ಮೂರ್ತಿಯು ಅಧಿಕಾರಿಗಳ ಮಾತುಕತೆಯಿಂದಾಗಿ ಗುಡಿ ಸೇರಿತು. ಜಾತ್ರಾ ಮಹೋತ್ಸವದ ವಿಚಾರದಲ್ಲಿ ಕೆಲವರು ಇಲ್ಲ ಸಲ್ಲದ ಗದ್ದಲ ಸೃಷ್ಟಿಸುತ್ತಿದ್ದು ಭಕ್ತಾಧಿಗಳ ಮುಂದೆ ನಾಯಕರಾಗಲು ಹೊರಟಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳು ಹಾಗೂ ಮುಖಂಡರು ವಿಫಲರಾಗಿದ್ದಾರೆ. ಇವರ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಹೊಸದಾಗಿ ಬರುವಂತಹ ಅಧಿಕಾರಿ ವರ್ಗದವರಿಗೆ ವಿಧಿ ವಿಧಾನಗಳು ತಮ್ಮ ಊರಿನ ಸಂಪ್ರಾದಾಯಗಳನ್ನು ತಿಳಿ ಹೇಳುವ ಪ್ರಯತ್ನಗಳನ್ನು ಸಹ ಆಗುತ್ತಿಲ್ಲ ಕೆಲ ಭ್ರಷ್ಟ ಕಂದಾಯಾಧಿಕಾರಿಗಳಿಂದಾಗಿ ಜಾತ್ರಾ ಮಹೋತ್ಸವವು ಕಳೆಗುಂದುತ್ತಿದೆ ಎಂಬ ಆರೋಪಗಳು ಕೇಳಿ ಬಂದವು.

      bಪುರಸಭಾ ಸದಸ್ಯರಾದ ಚಂದ್ರಶೇಖರ್, ಗೋವಿಂದರಾಜು, ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಎಸ್.ಬಿ.ಟಿ.ರಾಮು, ತಿಮ್ಮೇಗೌಡ, ಡೋಲಿಬಾಬು, ಎಂ.ಬಿ.ಶಿವಕುಮಾರ್ ಹಾಗೂ ಇನ್ನಿತರ ಪಟ್ಟಣದ ಮುಖಂಡರು ಪ್ರತಿಭಟನೆ ನೇತೃತ್ವವಹಿಸಿದ್ದರು.

(Visited 15 times, 1 visits today)