ಮಧುಗಿರಿ :

      ಸರ್ಕಾರ ನೀರು ಬಿಡಲು ಒಪ್ಪಿದ್ದು, ಶೀಘ್ರದಲ್ಲಿಯೇ ಮಧುಗಿರಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ಪಟ್ಟಣದ ತಾ.ಪಂ.ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು ಎರಡನೇ ಅವಧಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು, ತಹಶೀಲ್ದಾರ್ ಡಾ. ವಿಶ್ವನಾಥ್ ರವರು ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಪಿಡಿಓಗಳು ಶಾಸಕರ ಗಮನಕ್ಕೆ ತಂದಾಗ, ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ಸರ್ಕಾರಕ್ಕೆ ನೀರು ಕೊಡುತ್ತಾರೆ. ನೀವು ಹಣ ಬಿಡುಗಡೆ ಮಾಡದಿದ್ದರೆ ಪಿಡಿಓಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ ನಮಗೂ ಕೆಟ್ಟ ಹೆಸರು ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಕೆಲ ಗ್ರಾ.ಪಂ ಗಳು ಹಿಂದಿನ ವರ್ಷ ನೀರು ಪೂರೈಕೆಯಾದ ಬಿಲ್ಲುಗಳನ್ನು ಈ ವರ್ಷವೂ ಸಹ ನೀಡಿದ್ದು, ಇದರ ಬಗ್ಗೆ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕಿದೆ ಎಂದು ತಹಶೀಲ್ದಾರ್ ಶಾಸಕರ ಗಮನಕ್ಕೆ ತಂದರು. ಶಾಸಕರು ಸಭೆಯಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲೇ ಮಾತನಾಡಿ, ಹಣ ಬಿಡುಗಡೆಗೆ ಒಪ್ಪಿಗೆ ಪಡೆದು ಅಂತಹ ಬಿಲ್ಲುಗಳನ್ನು ಹೊರತು ಪಡಿಸಿ ಈ ವರ್ಷ ನೀರು ಪೂರೈಕೆ ಮಾಡಿದ ಬಿಲ್ಲುಗಳನ್ನು ಮಂಜೂರು ಮಾಡಿ ಎಂದು ತಹಶೀಲ್ದಾರ್‍ಗೆ ಸೂಚಿಸಿದರು.

      ನರೇಗಾದಲ್ಲಿ ಮಧುಗಿರಿ ಪ್ರಥಮ ಸ್ಥಾನದಲ್ಲಿದ್ದು, ಕೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 40 ಸಾವಿರ ಹಣ ಬಿಡುಗಡೆಯಾಗಿದ್ದು ಪಿಡಿಓಗಳು ಕಷ್ಟದಲ್ಲಿರುವ ರೈತರ, ಬಡವರಿಗೆ ಇದರಿಂದ ನೆರವಾಗಬೇಕು. ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಜೊತೆಗಿರಲಿದ್ದು, ಯಾರೊಂದಿಗೂ ರಾಜಕೀಯ ಮಾಡಬೇಡಿ. ಸ್ಥಳೀಯ ನಾಯಕರ ಹಾಗೂ ರೈತರ, ಬಡವರನ್ನು ನಮ್ಮವರಂತೆ ಕಾಣಬೇಕು. 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಶೇ.50 ರಷ್ಟು ಹಣ ಮೀಸಲಿಟ್ಟಿದ್ದು, ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಜನಪರ ಕೆಲಸ ಮಾಡಬೇಕು ಎಂದರು. 45 ಹಳ್ಳಿಯಲ್ಲಿ ಕೊಳವೆಬಾವಿ ವಿಫಲವಾಗಿದ್ದು, ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದೇವೆ. ಮತ್ತಷ್ಟೂ ಕೊಳವೆಬಾವಿಗೆ ಅನುಮತಿ ಪಡೆದು ಕೆಲಸ ಮಾಡುವುದಾಗಿ ತಾ.ಪಂ.ಇಓ ದೊಡ್ಡಸಿದ್ದಯ್ಯ ತಿಳಿಸಿದರು.
ಈ ಸಂದಭರ್Àದಲ್ಲಿ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಹಾಗೂ ಎಲ್ಲಾ ಗ್ರಾ.ಪಂ ಪಿಡಿಓಗಳು ಇದ್ದರು.

(Visited 229 times, 1 visits today)