ಮಧುಗಿರಿ:

     ತಾಲೂಕಿನಲ್ಲಿ ಕರೊನಾ ಕಾಟ ಮುಂದುವರೆದಿದ್ದು ಶುಕ್ರವಾರವೂ ಸಹ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇಲ್ಲಿಯವರೆಗೂ 84ಮಂದಿಗೆ ಸೋಂಕು ದೃಢಪಟ್ಟು ಶತಕದ ಹಂಚಿಗೆ ತಲುಪಿದೆ.

     ಈ ಪೈಕಿ ಶುಕ್ರವಾರ ಒಬ್ಬರು ಅಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು,ಇಲ್ಲಿಯವರೆಗೂ 84ಸೋಂಕಿತರಲ್ಲಿ 46 ಸೋಂಕಿತರು ಅಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಒಬ್ಬರು ಮೃತಪಟ್ಟಿದ್ದು, 37ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶುಕ್ರವಾರದ ವರದಿ:

      ತಾಲೂಕಿನ ರಂಗನಹಳ್ಳಿ ಗ್ರಾಮದ ಇಬ್ಬರಿಗೆ, ಮತ್ತು ಐ.ಡಿ.ಹಳ್ಳಿ ಹೋಬಳಿ ಹೊಸಇಟಕಲೋಟಿ,ದೊಡ್ಡೇರಿ ಹೋಬಳಿ ಎಂ.ಗೊಲ್ಲರಹಟ್ಟಿಯ ಯುವಕನೊಬ್ಬನಿಗೆ ಸೋಂಕು ತಗುಲಿದೆ. ಪಟ್ಟಣದ ಕೆ.ಹೆಚ್ ರಸ್ತೆಯ ದಿನಸಿ ಅಂಗಡಿಯ ದಂಪತಿಗಳಿಗೆ ಸೋಂಕು ತಗುಲಿದ್ದು ಆತಂಕ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ 84 ಕ್ಕೇರಿದ್ದು ಶತಕದ ಗಡಿ ಸಮೀಪಿಸಿದ್ದು ಸಹಜವಾಗಿ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.

       ಗುರುವಾರದ ವರದಿ:

     ಗುರುವಾರದಂದು7ಸೋಂಕಿತರು ಪತ್ತೆಯಾಗಿದ್ದವು.ಪಟ್ಟಣದ ಪಿಎಲ್ಡಿ ಬ್ಯಾಂಕ್ ರಸ್ತೆ ಎಂಟು ವರ್ಷದ ಬಾಲಕಿ ,ಕೆ.ಆರ್.ಬಡಾವಣೆಯ ಎಪ್ಪತ್ತು ವರ್ಷದ ವ್ಯಕ್ತಿ ಸೇರಿದಂತೆ ತಾಲ್ಲೂಕಿನ ಕಾಟ ಗೊಂಡನಹಳ್ಳಿ ,ಗರಣಿ, ಸಿದ್ದಾಪುರ ಗೇಟ್, ರಂಗನಹಳ್ಳಿ, ಹೊಸಕೆರೆ ಗೊಲ್ಲರಹಟ್ಟಿ ಹಾಗೂ ತಿಮ್ಮನಹಳ್ಳಿಯಲ್ಲಿ ಅರುವತ್ತು ಒಂದು ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

    ಇಲ್ಲೆ ಪರೀಕ್ಷೆ:

     ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಕರೋನ ಪರೀಕ್ಷೆ ನಡೆಯುತ್ತಿದ್ದು ಅರ್ಧಗಂಟೆಯಲ್ಲಿಯೇ ವರದಿ ಬರುತ್ತಿದೆ.

(Visited 13 times, 1 visits today)