ಮಧುಗಿರಿ :

      ತಾಲೂಕಿನ 39 ಗ್ರಾ.ಪಂಗಳ 600 ಸದಸ್ಯ ಸ್ಥಾನಗಳಿಗೆ 1794 ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

       ಬೆಳಗ್ಗೆ 7 ಗಂಟೆಗೆ ಚುನಾವಣಾ ಮತ ಎಣೆಕೆ ಸಿಬ್ಬಂದಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ಬಿಡಲಾಯಿತು. ನಂತರ ಅಭ್ಯರ್ಥಿಗಳು ಮತ್ತು ಏಜೆಂಟರನ್ನು ಬಿಡಲಾಯಿತು.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ ಮೊದಲಿಗೆ 78 ಏಕ ಸದಸ್ಯ ಸ್ಥಾನಗಳು, 124 ದ್ವಿ ಸದಸ್ಯ ಕ್ಷೇತ್ರಗಳು, 67 ಮೂರು ಸದಸ್ಯ ಕ್ಷೇತ್ರಗಳು ಮತ್ತು 22 ನಾಲ್ಕು ಸದಸ್ಯ ಕ್ಷೇತ್ರಗಳಂತೆ ಹಂತ ಹಂತವಾಗಿ 25 ಟೇಬಲ್ ಗಳಲ್ಲಿ ಗ್ರಾ.ಪಂಗೆ 2 ಕ್ಷೇತ್ರಗಳಂತೆ ಮತ ಎಣಿಕೆ ಕಾರ್ಯ ಕೈಗೊಳ್ಳಲಾಯಿತು.

     ಗೆದ್ದ ಮೊದಲ ಅಭ್ಯರ್ಥಿ:

       ತಾಲೂಕಿನ ಬ್ಯಾಲ್ಯ ಗ್ರಾ.ಪಂ ವ್ಯಾಪ್ತಿಯ ಹನುಮಂತಪುರ ಕ್ಷೇತ್ರದ ಪಿಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಬೈರಪ್ಪನವರ ಪತ್ನಿ ಗಂಗರತ್ನಮ್ಮ ಪ್ರಥಮ ವಿಜೇತೆಯನ್ನಾಗಿ ಘೋಷಿಸಲಾಯಿತು.

       ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದಾಪುರ ಗ್ರಾ.ಪಂ ಕ್ಷೇತ್ರದ ವ್ಯಾಪ್ತಿಯ ಕಸಬಾ ವಿಎಸ್.ಎಸ್.ಎನ್ ಅಧ್ಯಕ್ಷ ವೀರಣ್ಣನವರನ್ನು ಸೋಲಿಸಲು ಪಟ್ಟಣದ ಕೆಲ ರಾಜಕೀಯ ಮುಖಂಡರು ಟೊಂಕ ಕಟ್ಟಿದ್ದು, ಇವೆಲ್ಲವನ್ನೂ ಮೆಟ್ಟಿ ನಿಂತ ವೀರಣ್ಣ 300 ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದು, ಅದೇ ರೀತಿ ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷೆಯ ಪತಿ ಅಶ್ವತ್ಥಪ್ಪ ಮತ್ತು ಪದ್ಮಾವತಿ ಕೃಷ್ಣಮೂರ್ತಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದು ಪದ್ಮಾವತಿ ಕೃಷ್ಣಮೂರ್ತಿ 480 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ಕೇಕೆ ಹಾಕಿದರು. ಗೆದ್ದ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ವಿಶೇಷ.

      5 ಬಾರಿ ಜಯ ಗಳಿಸಿದ ಕುಟುಂಬ:

     ಇನ್ನು ಚಂದ್ರಗಿರಿ ಗ್ರಾ.ಪಂ ಸೋದೇನಹಳ್ಳಿ ಕ್ಷೇತ್ರದಿಂದ ಸತತವಾಗಿ 5 ಬಾರಿ ಒಂದೇ ಕುಟುಂಬದ ಅಭ್ಯರ್ಥಿಗಳು ಆಯ್ಕೆಯಾಗಿರುವುದು ವಿಶೇಷವಾಗಿದ್ದು, ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ 3 ಬಾರಿ ಮತ್ತು ಇವರ ಗ್ರಾ.ಪಂ ಮಾಜಿ ಅಧ್ಯಕ್ಷೆ ಪತ್ನಿ ಲಕ್ಷ್ಮೀದೇವಮ್ಮ 2 ಬಾರಿ ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿರುವುದು ವಿಶೇಷ.

      ಡಿ.ವಿ. ಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಆರ್.ಟಿ.ಪ್ರಭು, ಗುತ್ತಿಗೆದಾರ ಡಿ.ಹೆಚ್. ನಾಗರಾಜುರವರ ಪತ್ನಿ ಸರೋಜಮ್ಮ ದೊಡ್ಡಹಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪುರವರ ಗ್ರಾ.ಪಂ ಸಂಕಾಪುರ ಕ್ಷೇತ್ರದಿಂದ ಪುಟ 2 ಕ್ಕೆ

(Visited 6 times, 1 visits today)