ಮಧುಗಿರಿ : 280 ಗ್ರಾಂ ಗಾಂಜಾ ವಶ

 ಮಧುಗಿರಿ :

     ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಪೋಲೀಸರು ದಾಳಿ ನಡೆಸಿ 280 ಗ್ರಾಂ ಗಾಂಜಾ ವಶ ಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

    ತಾಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮುಂಭಾಗದ ರಸ್ತೆಯ ಬಳಿ ಗಾಂಜಾ ಸಾಗಿಸುತ್ತಿದ್ದ ಡಿ.ಎಸ್. ಅಮರ್ ಎಂಬ ವ್ಯಕ್ತಿಯನ್ನು ತಡೆದು ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

      ಅಬಕಾರಿ ಉಪ ಅಧೀಕ್ಷಕ ಆರ್. ಸುರೇಶ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಹೆಚ್. ನಾಗರಾಜು, ಸಿಬ್ಬಂದಿಗಳಾದ ಯೋಗಾನಂದ, ರಾಜೇಶ್, ಶ್ರೀ ಶೈಲ ಪೂಜಾರಿ, ಮಹಂತೇಶ್, ಜಗದೀಶ್ ಭಾಗವಹಿಸಿದ್ದರು

(Visited 4 times, 1 visits today)

Related posts