ಮಧುಗಿರಿ : ಎಟಿಎಂ ಕಾರ್ಡ್ ಅದಲು-ಬದಲು : 22 ಸಾವಿರ ದೋಚಿ ಪರಾರಿ!!

ಮಧುಗಿರಿ: 

      ಎಟಿಎಂ ಕಾರ್ಡ್ ಅನ್ನು ಅದಲು- ಬದಲು ಮಾಡಿ ಗಾರ್ಮೆಂಟ್ಸ್ ಮಹಿಳೆಯ ಖಾತೆಯಲ್ಲಿದ್ದ 22ಸಾವಿರ ರೂ ಗಳನ್ನು ಅನ್ ಲ್ಯೆನ್ ಮೂಲಕ ಲಪಟಾಯಿಸಿರುವ ಘಟನೆ ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ಎಟಿಎಂ ಕೇಂದ್ರ ದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

      ಆಚೇನಹಳ್ಳಿ ಗ್ರಾಮದ ಗಾರ್ಮೆಂಟ್ಸ್ ಉದ್ಯೋಗಿಯಾಗಿರುವ ರೂಪ ರವರಿಗೆ ಸೇರಿರುವ ಎಸ್ ಬಿಐ ಬ್ಯಾಂಕಿನ ಎಟಿಎಂ ಕಾರ್ಡ್‍ನಲ್ಲಿದ್ದ ಹಣವನ್ನು ಡ್ರಾ ಮಾಡಿಕೊಂಡು ಬರುವಂತೆ ಅವರ ತಂದೆಯವರಿಗೆ ಕೊಟ್ಟು ಕಳುಹಿಸಿದ್ದಾರೆ.

      ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಾರದ ತಂದೆ ಬೇರೊಬ್ಬರ ಸಹಾಯವನ್ನು ಕೇಳಿದ್ದಾರೆ. ಕರ್ನಾಟಕ ಬ್ಯಾಂಕಿನ ಎಟಿಎಂನಲ್ಲಿ ಡ್ರಾ ಮಾಡಲು ಮುಂದಾಗಿ ಪಿನ್ ನಂಬರ್ ತಿಳಿದುಕೊಂಡ `ಆಸಾಮಿ’ ಆ ಸಮಯದಲ್ಲಿ ತಪ್ಪು ಪಿನ್ನನ್ನು ಒಡೆದು ನಂತರ ಈ ಎಟಿಎಂನಲ್ಲಿ ಹಣ ಬರುವುದಿಲ್ಲ ಎಸ್.ಬಿ.ಐ ಬ್ಯಾಂಕಿನ ಎಟಿಎಂ ಕರೆದೊಯ್ಯುವ ವೇಳೆ ಕಾರ್ಡನ್ನು ಬದಲಾಯಿಸಿದ್ದಾನೆ.

      ಎಸ್‍ಬಿಐ ಎಟಿಎಂನಲ್ಲಿ ಆಸಾಮಿ ನೀಡಿದ ಕಾರ್ಡನ್ನು ಬಳಸಿದ್ದಾನೆ. ನಾಟಕವಾಡಿ ಹಣ ಬರುತ್ತದೆ ಕಾಯಿರಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಎಷ್ಟೊತ್ತು ಕಾದರೂ ಹಣ ಮಾತ್ರ ಎಟಿಎಂನಲ್ಲಿ ಬರಲೇ ಇಲ್ಲ. ಆದರೆ 11:40 ರಲ್ಲಿ 22 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ದೂರವಾಣಿಗೆ ಮೆಸೇಜ್ ಬಂದಿದೆ. ಈ ಹಣ ಗಾರ್ಮೆಂಟ್ಸ್ನ ನೌಕರಿಯ ಪಿಎಫ್ ಹಣವಾಗಿದ್ದು, ಡ್ರಾ ಮಾಡಿ ಗಿರವಿ ಇಟ್ಟಿದ್ದ ಒಡವೆ ಬಿಡಿಸಿಕೊಂಡು ಬರುವಂತೆ ಮಗಳು ತಂದೆಗೆ ಜವಾಬ್ದಾರಿ ನೀಡಿದ್ದಾರೆ ಎಂಬ ಮಾಹಿತಿ. ಈ ಪ್ರಕರಣವನ್ನು ತುಮಕೂರಿನಲ್ಲಿರುವ ಸೈಬರ್ ಕ್ರೆಂ ದೂರು ನೀಡಲು ದೂರು ನೀಡಿರುವುದಾಗಿ ಪೋಷಕರು ತಿಳಿದಿದ್ದಾರೆ.

(Visited 7 times, 1 visits today)

Related posts