ಮಧುಗಿರಿ:

      ತಾಲ್ಲೂಕಿನಲ್ಲಿ ಒಂದೊಂದೇ ಕಂಟಕಗಳು ಜನತೆಗೆ ಸಂಕಟವನ್ನು ತಂದಿಟ್ಟಿದ್ದು, ಗುರುವಾರ ಒಂದು ಪ್ರಕರಣ ಧೃಢವಾಗಿದೆ. ಇತ್ತೀಚಿಗೆ ತುಮಕೂರಿನಲ್ಲಿ ಕರೊನಾ ಸೋಂಕಿನಿಂದ ಮಧುಗಿರಿ ಮೂಲದ ಟೈಲರ್ ಒಬ್ಬರು ಮೃತಪಟ್ಟಿದ್ದರು .

      ಅವರ ಸಂಪರ್ಕದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಪಟ್ಟಣದ ಕೆ.ಹೆಚ್ ರಸ್ತೆಯಲ್ಲಿರುವ ಮೆಡಿಕಲ್ ಸ್ಟೋರ್ ನ 56ವರ್ಷದ ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆ. ಈ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇದನ್ನು ಸರಿಯಾಗಿ ಪಾಲಿಸಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆತ ವಾಸವಿದ್ದ ಜಾಮಿಯಾ ಮಸೀದಿ ಮುಂಭಾಗದ ರಸ್ತೆ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.

      ಸೋಂಕಿತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ವಿಶ್ವನಾಥ್, ತಾಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು, ಪಿಎಸ್ಸೈ ಕಾಂತರಾಜು ಭೇಟಿ ನೀಡಿದ್ದರು.

 ಬುಧವಾರ 4 ಪ್ರಕರಣ :

      ತಾಲ್ಲೂಕಿನಲ್ಲಿ ಇಂದು ನಾಲ್ಕು ಪ್ರಕರಣಗಳು ಕೂವೀಡ್ ಸೋಂಕೀತ ಪ್ರಕರಣಗಳು ದಾಖಲಾಗಿದ್ದು ನಾಲ್ಕು ತಿಂಗಳ ಮಗುವಿಗೆ ಕೂಡ ಕರೋನಾ ವೈರಸ್ ಸೋಂಕು ತಗಲಿದೆ.

      ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿದ್ದ ತಮಿಳುನಾಡಿನಿಂದ ಆಗಮಿಸಿದ್ದ ಕುಟುಂಬದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು .ಈ ಕುಟುಂಬದ ನಾಲ್ಕು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. ಕೆರೆಗಳಪಾಳ್ಯದ ಮೂವತ್ತಾರು ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ .ಕಡಗತ್ತೂರು ಗ್ರಾಮದಲ್ಲಿ ಸೌದಿ ಅರೇಬಿಯದಿಂದ ಆಗಮಿಸದಂತ ವ್ಯಕ್ತಿಗೆ ಸೋಂಕು. ಗೂಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕೋರೋನಾ ಸೋಂಕು ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

      ಕ್ಷೌರಿಕ ವೃತ್ತಿಗೆ ಮಧುಗಿರಿಯಲ್ಲಿ ಒಂದು ವಾರ ರಜೆ : ಬುಧವಾರ ದಂದು ಕೆರೆಗಳಪಾಳ್ಯದ ಕ್ಷೌರಿಕ ವೃತ್ತಿ ಮಾಡುತ್ತಿದ್ದವರಿಗೆ ಕರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮಧುಗಿರಿ ಪಟ್ಟಣದಲ್ಲಿರುವ ಸುಮಾರು ಅರುವತ್ತೈದು ಅಂಗಡಿಗಳ ವೃತ್ತಿ ನಿರತರು ಒಂದು ವಾರದ ಕಾಲ ಸ್ವಯಂ ರಜೆಯನ್ನು ಘೋಷಿಸಿದ್ದಾರೆಂದು ಪುರಸಭಾ ಮಾಜಿ ಸದಸ್ಯ ಎಂ.ವಿ. ಮಂಜುನಾಥ್ ಪತ್ರಿಕೆಗೆ ತಿಳಿಸಿದರು.

      ಪುರಸಭೆಯವರು ಕ್ಷೌರಿಕ ವೃತ್ತಿ ನಡೆಸುವವರನ್ನು ಕರೆದು ಸಭೆ ನಡೆಸಿ ವೃತ್ತಿ ಆರಂಭಕ್ಕೂ ಮುನ್ನವೇ ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ ಹಾಗೂ ಸ್ಯಾನಿಟೈಸನ್ರ್ನ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು. ಇದಕ್ಕೆ ಮಾಜಿ ಸದಸ್ಯ ಮಂಜುನಾಥ್ ನಿಮ್ಮ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ ಅದೇ ರೀತಿ ಬೆಂಗಳೂರು ಬಿಬಿಎಂಪಿಯಲ್ಲಿ ನೀಡಿರುವಂತಹ ಗ್ಲಾಸಿನ ಮಾಸ್ಕ್ಗಳನ್ನು ವೃತ್ತಿಯವರಿಗೆ ನೀಡಿ ಎಂದು ಒತ್ತಾಯಿಸಿದರು. ಇವರ ಮನವಿಯನ್ನು ಸ್ವೀಕರಿಸಿದ ಆರೋಗ್ಯ ನಿರೀಕ್ಷಕ ಬಾಲಾಜಿ ಬಾಬು ಮುಖ್ಯಾಧಿಕಾರಿ ಅಮರ್ ನಾರಾಯಣ್ ಅವರೊಡನೆ ಚರ್ಚಿಸಿ ಮಾಸ್ಕ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

(Visited 12 times, 1 visits today)