ಮಧುಗಿರಿ:

      ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ಹೇಮಾವತಿ ನೀರು ಜಲ ಸಂಗ್ರಹ ಕೇಂದ್ರದಿಂದ ಬೆಸ್ಕಾಂ ಮುಂಭಾಗವಿರುವ ಓವರ್ ಟ್ಯಾಂಕ್ಗೆ ಸರಬರಾಜಾಗುವ ಹೇಮಾವತಿ ನೀರು ಚರಂಡಿ ಪಾಲಾಗುತ್ತಿದ್ದು ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.

      ಲಕ್ಷಾಂತರ ರೂ ಬೆಸ್ಕಾಂ ಕಚೇರಿಗೆ ಹಣ ಕಟ್ಟಿ ಈ ನೀರನ್ನು ಬಳ್ಳಾಪುರ ಪಂಪ್ ಹೌಸ್ ನಿಂದ ಮಧುಗಿರಿ ಸಿದ್ದಾಪುರ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತಿದೆ.

      ಮಧುಗಿರಿಯ ಸಿದ್ದಾಪುರ ಗೇಟ್ ಬಳಿ ಇರುವ ಕುರುಬರ ಸಂಘದ ಹಾಸ್ಟೆಲ್ ಸಮೀಪ ಪೈಪ್ ಒಡೆದು ಹೋಗಿ ನೀರು ಚರಂಡಿ ಪಾಲಾಗುತ್ತಿದೆ.

       ಈ ಬಗ್ಗೆ ದುರಸ್ತಿ ಮಾಡುವಂತೆ ಸಿದ್ದಾಪುರ ಗೇಟ್ ಹಾಗೂ ಮಧುಗಿರಿ ನಾಗರಿಕರು ಪುರಸಭೆಗೆ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವೆಂದು ನಾಗರಿಕರ ಆರೋಪವಾಗಿದೆ.

(Visited 16 times, 1 visits today)