ತುಮಕೂರು:

       ರಾಷ್ಟ್ರಪಿತ ಮಹಾತ್ಮಗಾಂಧಿಜೀಯವರ 150ನೇ ಜನ್ಮ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿ ಹಾಗೂ ತುಮಕೂರು ನಗರದ ಎನ್.ಆರ್.ಕಾಲೋನಿಯಲ್ಲಿ ‘ಸ್ವಚ್ಚತಾ ಅರಿವು’ ಎಂಬ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ರಾಮಕೃಷ್ಣರವರು ಮಾತನಾಡುತ್ತಾ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಧುರೀಣ ವ್ಯಕ್ತಿಗಳಲ್ಲಿ ಗಾಂಧೀಜಿಯವರ ಕೊಡುಗೆ ಅಪಾರವೆಂದರು, ಅವರಿಗೆ ಮಿಗಿಲಾದವರು ಯಾರು ಇಲ್ಲ. ತಮ್ಮ ಬದುಕಿನ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮುಡಿಪಿಟ್ಟು ಕೊನೆಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸತ್ಯ ಹಾಗೂ ಅಹಿಂಸಾ ತತ್ವ ಬಳಸಿ ಆಂಗ್ಲರನ್ನು ಕಟ್ಟಿ ಹಾಕಿದ ಗಾಂಧಿಜೀಯವರು ಭ್ರಿ‍ಟಿ‍‍ಷರ ವಿರುದ್ದ ದಂಡಿ ಸತ್ಯಾಗ್ರಹವನ್ನೊಳಗೊಂಡಂತೆ ಅನೇಕ ಬಾರಿ ಸೆರೆವಾಸವನ್ನು ಅನುಭವಿಸಿದ್ದಾರೆ. ಇವರ ಪ್ರಯತ್ನದಿಂದ ಭಾರತ ಸ್ವತಂತ್ರಗೊಂಡಿತು. ಇವರ ತ್ಯಾಗಕ್ಕಾಗಿ ವಿಶ್ವಸಂಸ್ಥೆಯು ಗಾಂಧಿಯವರ ಜನ್ಮದಿನವನ್ನು `ವಿಶ್ವ ಅಹಿಂಸಾ ದಿನ’ವೆಂದು ಘೋಷಿಸಿದೆ. ದೀನದಲಿತರ ಬಡವರ ಪರವಾಗಿ ಹೋರಾಡಿದ ಬಾಪೂಜಿಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲೆಂದೇ ದಲಿತರ ಕಾಲೋನಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು. ಇದೇ ದಿನದಲ್ಲಿ ಜನ್ಮ ತಾಳಿದ ಸ್ವತಂತ್ರ ಹೋರಾಟಗಾರರಾದ ಲಾಲ್‍ಬಹದ್ದೂರ್ ಶಾಸ್ತ್ರಿಯವರನ್ನು ಸ್ಮರಿಸಿ ‘ಜೈ ಜಾವಾನ್ ಜೈ ಕಿಸಾನ್’ ಉದ್ಘೋಶದೊಂದಿಗೆ ಬ್ರೀಟಿಷರ ವಿರುದ್ದ ಹೋರಾಡಿದ ಶಾಸ್ತ್ರಿಯವರ ಕೊಡುಗೆಯು ಅಮೂಲ್ಯವೆಂದರು. ದೇಶಕ್ಕಾಗಿ ನಡೆದ ಬಲಿದಾನಗಳಲ್ಲಿ ಕಾಂಗ್ರೇಸ್ ಧುರೀಣರೇ ಹೆಚ್ಚು, ಅದರಲ್ಲಿಯೂ ನೆಹರೂ ಕುಟುಂಬ ಅಗ್ರ ಸ್ಥಾನದಲ್ಲಿದೆ ಎಂದರು.

       ರಾಜ್ಯ ಚುನಾವಣೆ ಹತ್ತಿರದಲ್ಲಿರುವ ಸಂಭವವಿರುವುದರಿಂದ ಪಕ್ಷ ಸಂಘಟನೆಗೆ ಮುಂದಾಗಿ ರಾಜ್ಯದಲ್ಲೂ, ಕೇಂದ್ರದಲ್ಲೂ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶ್ರಮಿಸಬೇಕು. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದ ಕೊರತೆಯಿದೆ, ಪಕ್ಷದಲ್ಲಿಯೇ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ದೂರವಿಟ್ಟು ಎಲ್ಲಾ ಬಿನ್ನಭಿಪ್ರಾಯಗಳನ್ನೂ ಮರೆತು ಎಲ್ಲರೂ ಸೇರಿ ಪಕ್ಷ ಕಟ್ಟೋಣ, ಮುಂದಿನ ದಿನಮಾನಗಳಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು. ಜಿಲ್ಲೆಯಲ್ಲಿ ತಾಲ್ಲೂಕುವಾರು ಸಂಘಟನೆ ಪ್ರಾರಂಭವಾಗುತ್ತದೆ. ಇದಕ್ಕಾಗಿ ಎಲ್ಲಾ ಕಾರ್ಯಕರ್ತರು ಮುಖಂಡರು, ಕೈಗೂಡಿಸಬೇಕು ಎಂದು ಕೇಳಿಕೊಂಡರು.

      ಹಿರಿಯ ಮುಖಂಡರಾದ ಕೆಂಚಮಾರಯ್ಯನವರು ಮಾತನಾಡುತ್ತಾ ಸ್ವತಂತ್ರಕ್ಕಾಗಿ ಮುಂಚೂಣಿಯ ಹೋರಾಟಕ್ಕೆ ಕಾಂಗ್ರೇಸ್ ಪಕ್ಷವೇ ಮೂಲ ಕಾರಣ ಭಾರತ ಬ್ರಿಟಿಷರ ದಬ್ಬಾಳಿಕೆಯಿಂದ ಜರ್ಝರಿತವಾದಗ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹೋರಾಟವನ್ನು ಪ್ರಾರಂಭಮಾಡಿದರು. ಆಗರ್ಭ ಶ್ರೀಮಂತರಾದ ಗಾಂಧಿಜೀಯವರು ಕಾನೂನು ಪದವಿ ಪಡೆದು ವಿದೇಶ ಪ್ರಯಾಣ ಮಾಡುವಾಗ ಸೌತ್ ಆಫ್ರಿಕಾದಲ್ಲಿ ‘ವರ್ಣಭೇದನೀತಿ’ಯನ್ನು ಅನುಸರಿಸಿ ಅವರನ್ನು ರೈಲು ಬೋಗಿಯಿಂದ ಹೊರತಳ್ಳಲಾಯಿತು. ಇದರಿಂದ ತೀವ್ರ ನೊಂದ ಗಾಂಧೀಜಿಯವರು ಅಂದೇ ದೇಶಕ್ಕೆ ಸ್ವತಂತ್ರ ತಂದು ಕೊಡುವ ತೀರ್ಮಾನ ಕೈಗೊಂಡರು. ಗಾಂಧಿಯವರ ಕೊಡುಗೆ ಭಾರತ ದೇಶಕ್ಕೆ ಅಮೂಲ್ಯವಾಗಿದೆ. ಒಮ್ಮೆ ಬ್ರೀಟಿಷರು ಗಾಂಧೀಜಿಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆತಂದಾಗ ಬ್ರಿಟನ್ ನ್ಯಾಯಾಧೀಶರೇ ಎದ್ದು ನಿಲ್ಲುತ್ತಾರೆ, ಇಂತಹ ಉನ್ನತ ವ್ಯಕ್ತಿತ್ವ ಗಾಂಧೀಜಿಯವರಾದಾಗಿತ್ತು.

      ಅಸ್ಪೃಶ್ಯತೆಯನ್ನು ಬೆಂಬಲಿಸುವ ವ್ಯಕ್ತಿಗಳು, ಬ್ರಾಹ್ಮಣಶಾಹಿಗಳು ನಾಥೂರಾಮ್ ಗೂಡ್ಸೆಯ ಮೂಲಕ ರಾಷ್ರಪಿತರನ್ನು ಕೊಲ್ಲಿಸಿದರು. ಇಂತಹ ದೇಶ ದ್ರೋಹಿ ಗೋಡ್ಸೆಯ ದೇವಾಲಯ ಕಟ್ಟಿಸಿ ಪೂಜೆ ಮಾಡುವ ಜಾತಿವಾದಿಗಳು ಇನ್ನು ಈ ದೇಶದಲ್ಲಿರುವುದು ನಮ್ಮ ದುರ್ದೈವವೆಂದರು. ಇದಕ್ಕೆಲ್ಲಾ ಕುಮ್ಮಕ್ಕು ಕೊಡುವ ಬಿ.ಜೆ.ಪಿ ಸರ್ಕಾರವನ್ನು ದಮನ ಮಾಡಬೇಕೆಂದರು. ಇಂದಿನ ಯುವ ಪೀಳಿಗೆಗೆ ಗಾಂಧೀತತ್ವವನ್ನು ಸಾರದೆ ಇದ್ದರೆ ದೇಶ ನಾಶವಾಗುತ್ತದೆ ಎಂದರು. ಕಳೆದ 70 ವರ್ಷಗಳಿಂದ ದೇಶದಲ್ಲಿ ಕಾಂಗ್ರೇಸ್ ಪಕ್ಷ ಮಾಡಿರುವ ಅಭಿವೃದ್ದಿ ಪಂಚವಾರ್ಷಿಕ ಯೋಜನೆ, ಡ್ಯಾಂಗಳ ನಿರ್ಮಾಣ, ಶಿಕ್ಷಣಕ್ಕೆ ಉತ್ತೇಜನ ಕಾಂಗ್ರೇಸ್ ಪಕ್ಷದಿಂದ ಆಗಿದ್ದು ಈಗಿನ ಬಿ.ಜೆ.ಪಿ. ಮೋದಿ ಸರ್ಕಾರ ದೇಶವನ್ನು ಗಂಭೀರ ಆರ್ಥಿಕ ಕುಸಿತ ಹಾಗೂ ಅವ್ಯವಸ್ಥೆಗೆ ಇಳಿಸಿದೆ. ಇಂತಹ ಪಕ್ಷವನ್ನು ಎಷ್ಟು ಮಾತ್ರಕ್ಕೂ ಕಿತ್ತೋಗೆಯಬೇಕೆಂದರು.

      ಇದೇ ದಿನದಲ್ಲಿ ಜನ್ಮ ತಾಳಿದ ಲಾಲ್‍ಬಹದ್ದೂರ್‍ಶಾಸ್ತ್ರಿಯವರ ಬಗ್ಗೆ ಹೇಳುತ್ತಾ ಗೃಹವಿಲ್ಲದ `ಗೃಹ ಮಂತ್ರಿಯಾಗಿದ್ದ ಏಕೈಕ ವ್ಯಕ್ತಿ ಲಾಲ್‍ಬಹದ್ದೂರ್‍ಶಾಸ್ರ್ತಿಯವರು ಎಂದರು. ಇವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು. ದೇಶಕ್ಕಾಗಿ ಹೋರಾಡಿದ ಇಂತಹ ದುರೀಣರನ್ನು ಅನುಸರಿಸಿ ನಡೆದರೆ ಮಾತ್ರ ಅವರ ಜನ್ಮ ದಿನ ಸಾರ್ಥಕವಾಗುತ್ತದೆ ಎಂದರು.

      ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಡಾ. ಷಫೀ ಅಹಮ್ಮದ್‍ರವರು ಮಾತನಾಡುತ್ತಾ ಎನ್.ಆರ್. ಕಾಲೋನಿಗೂ ಪೂಜ್ಯ ಗಾಂಧಿಜಿಯವರಿಗೂ ಅವಿನಾಭಾವ ಸಂಭಂಧವಿದೆ. ಇಲ್ಲಿನ ಪ್ರಾಥಮಿಕ ಪಾಠಶಾಲೆ ಅವರ ನೆನಪಿನಲ್ಲೆ ಪ್ರಾರಂಭವಾದುದ್ದು, ಪೂಜ್ಯರು ಸ್ವತಂತ್ರಕ್ಕಾಗಿ ಹೋರಾಟ ಮಾಡಿದವರಲ್ಲಿ ಅಗ್ರಗಣ್ಯರಾಗಿದ್ದಾರೆ. ಶಾಂತಿಯಿಂದ ಸ್ವತಂತ್ರ ತಂದು ಕೊಟ್ಟ ಇವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಸಂವಿಧಾನದ ಅನುಸರಣೆ ಕಾಂಗ್ರೇಸ್‍ನಿಂದ ಮಾತ್ರ ಆಗಿದೆ ಇಂತಹ ಪಕ್ಷ ಆಡಳಿತ ಕಳೆದುಕೊಡಿದ್ದು ನಾಚಿಕೆಗೇಡಿನ ಸಂಗತಿ ಎಂದರು. ಇದಕ್ಕೆಲ್ಲಾ ಮೂಲ ಕಾರಣವಾದ ಆರ್.ಎಸ್.ಎಸ್ ಮತ್ತು ಬಿಜೆಪಿಯಂತಹ ಕೋಮುವಾದಿ ಸಂಘಟನೆಯನ್ನು ದಮನ ಮಾಡಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕೇಳಿಕೊಂಡರು.

      ಮಾಜಿ ಶಾಸಕರಾದ ರಫೀಕ್ ಅಹ್ಮದ್‍ರವರು ಮಾತಾನಾಡುತ್ತಾ, ದೇಶದ ಅಗ್ರಗಣ್ಯ ಹೋರಾಟಗಾರರಾದ ಗಾಂಧೀಜಿ ಮತ್ತು ಶಾಸ್ರ್ತಿಜೀಯವರ ಜನ್ಮದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆಯು ಗಾಂಧಿಜಿಯವರಿಗೆ ಅತಿ ದೊಡ್ಡ ಮಾನ್ಯತೆ ನೀಡಿದೆ. ಅಹಿಂಸೆ ಮತ್ತು ಸತ್ವ ತತ್ವ ಸಿದ್ದಾಂತಗಳು ನಮಗೆ ಮಾದರಿಯಾಗಿವೆ.

      1947 ರಲ್ಲಿ ಸ್ವತಂತ್ರ ಭಾರತ ಸಂಕಷ್ಟದಲ್ಲಿತ್ತು. ಭಾರತೀಯ ಕಾಂಗ್ರೇಸ್ ಪಕ್ಷ 57 ವರ್ಷ ಆಧಿಕಾರದಲ್ಲಿದ್ದು ಭರತ ಖಂಡವನ್ನು ಅಭಿವೃದ್ದಿ ಪಥಕ್ಕೆ ಕೊಂಡೊಯ್ಯಲು ಶ್ರಮಿಸಿತು. ಈ ದಿನಮಾನಗಳಲ್ಲಿ ಬಿ.ಜೆ.ಪಿ. ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ತಮ್ಮದೆಂದು ಬೊಗಳೆ ಬಿಡುತ್ತಿದೆ ಇದು ಶೋಚನೀಯವೆಂದರು. ಕಾಂಗ್ರೇಸ್ ಸ್ಥಾಪನೆಯಾದ ದಿನದಿಂದ ದೀನದಲಿತರ ಮತ್ತು ಹಿಂದುಳಿದ ವರ್ಗಗಳಿಗೆ ಮಾಡಿದ ಅಭಿವೃದ್ದಿ ಹಾಗೂ ಕಳೆದ 5 ವರ್ಷಗಳಲ್ಲಿ ಕಾಂಗ್ರೇಸ್ ಪಕ್ಷ ಕರ್ನಾಟಕಕ್ಕೆ ಕೊಟ್ಟ ಅನುಧಾನಗಳನ್ನು ಬೀದಿ ಬೀದಿಗಳಲ್ಲಿ ಸಾರಿ ಜನಮನಗಳಲ್ಲಿ ಜಾಗೃತಿ ಮೂಡಿಸೋಣ ಎಂದರು.
ಅತ್ಯಂತ ಶ್ರೀಮಂತರಾದ ಗಾಂಧೀಜೀಯವರು ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ದುಡಿದರು ಮತ್ತು ಮಡಿದರು. ಇವರ ತತ್ವಗಳು ನಮ್ಮ ಜೀವನದ ಆದರ್ಶವಾಗಲೀ ಎಂದು ಶುಭಕೋರಿದರು.

      ದಲಿತ ಮುಖಂಡರಾದ ನರಸೀಯಪ್ಪ ರವರು ಮಾತನಾಡುತ್ತಾ ಅಸ್ಪøಶ್ಯತೆ ಯನ್ನು ಹೋಗಲಾಡಿಸಲು ಜಾತಿಯತೆ ಅನುಸರಿಸುತ್ತಿದ್ದ ಪಟ್ಟ ಭದ್ರ ಹಿತಾಸಕ್ತಿಗಳ ವಿರುದ್ದ ಹೋರಾಟ ಮಾಡಿದ ಗಾಂಧಿಜಿಯವರಿಗೆ ನಮನಗಳನ್ನು ಸಲ್ಲಿಸಿದರು. ರಾಜ್ಯದಲ್ಲಿಂದು ಕಾಂಗ್ರೇಸ್ ಪಕ್ಷದ ಪ್ರಚಾರದ ಕೊರತೆಯಿದೆ ಇದನ್ನು ಸರಿಪಡಿಸಿಕೊಂಡು ಪಕ್ಷ ಕಟ್ಟೋಣ ಎಂದರು.

      ಈ ಸಮಾರಂಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತಾರುದ್ರೇಶ್ ರವರು, ಉಪಮೇಯರ್ ಶ್ರೀಮತಿ ರೂಪಾಶೆಟ್ಟಳಯ್ಯರವರು, ನಗರ ಪಾಲಿಕೆಯ ಕಾರ್ಪೋರೇಟರ್‍ಗಳು, ಮುಂಚೂಣಿ ಘಟಕದ ಅಧ್ಯಕ್ಷರುಗಳು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆಟೋರಾಜುರವರು ಮತ್ತು ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಶ್ರೀ ಜಯಮೂರ್ತಿರವರು, ಶ್ರೀ ಚಂದ್ರಯ್ಯನವರು ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
 

(Visited 75 times, 1 visits today)