ಕಾರ್ಮಿಕ ಸಚಿವ ವೆಂಕಟರಮಣಪ್ಪ ಪತ್ನಿ ನಿಧನ

ಪಾವಗಡ :

       ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಸಚಿವ ವೆಂಕಟರಮಣಪ್ಪರ ಪತ್ನಿ ಬುಧವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ.

      ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ರವರ ಪತ್ನಿ ಶಾರದಮ್ಮ(65) ವರ್ಷ ಬುಧವಾರ ಮದ್ಯಾಹ್ನ 2.10 ನಿಮಿಷಕ್ಕೆ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ವಿಧಿವಷರಾಗಿದ್ದಾರೆ.

      ಕಳೆದು ಒಂದು ತಿಂಗಳಿನಿಂದ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಂಗಳೂರಿನ ಮಗಳ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು, ಆರೋಗ್ಯ ಹದಗೆಟ್ಟ ಕಾರಣದಿಂದ ವಾರದ ಹಿಂದೆ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ.

(Visited 7 times, 1 visits today)

Related posts

Leave a Comment