ಪಾವಗಡ:

      ಪಾವಗಡ ತಾಲ್ಲೂಕಿನಲ್ಲಿ ಯಾವುದೇ ಕರೋನಾ ಪಾಸಿಟಿವ್ ಕೇಸ್ ಇಲ್ಲದಿದ್ದರೂ ಸಹ ಪಕ್ಕದ ಆಂಧ್ರದಲ್ಲಿ ಹೆಚ್ಚಿನ ಕೇಸ್ ಗಳು ಕಂಡು ಬಂದಿರುವುದರಿಂದ ಆಂಧ್ರದಿಂದ ಯಾರೊಬ್ಬರೂ ನುಸುಳದಂತೆ ಗಡಿಗಳಲ್ಲಿ ಚೆಕ್ ಪೋಸ್ಟ್ ಹಾಕಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ತಿಳಿಸಿದರು.

      ಸೋಮವಾರ ಗಡಿಗ್ರಾಮವಾದ ಮುರರಾಯನಹಳ್ಳಿಯಲ್ಲಿ ಎಚ್.ಪಿ. ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಸ್ಥಳಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಘಟನೆಯ ವಿವರವನ್ನು ಪಡೆದುಕೊಂಡು, ನಂತರ ಹಿಂದೂಪುರ ಮಾರ್ಗದ ಗಡಿಗ್ರಾಮವಾದ ವಿರುಪಸಮುದ್ರ, ಅಕ್ಕಮ್ಮನಹಳ್ಳಿ, ಗುಮ್ಮಗಟ್ಟ, ಕೊಡಮಡಗು, ದೊಮ್ಮತಮರಿ, ಹಾಗೂ ಕಲ್ಯಾಣದುರ್ಗ ಮಾರ್ಗದ ನಾಗಲಾಪುರ ಗ್ರಾಮಗ ಗಡಿ ಚೆಕ್ ಪೋಸ್ಟ್ ಗೆ ಬೇಟಿ ನೀಡಿ ನಂತರ ವೆಂಕಟಾಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರೊಂದಗೆ ಕೋವಿಡ್ 19 ವಿರುದ್ದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ, ನಂತರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅರ್ಜಿದಾರರ ಸಾಮಾಜಿಕ ಅಂತರದ ಪೆಟ್ಟಿಗೆಯನ್ನು ಉದ್ಗಾಟಿಸಿ, ನೀರೀಕ್ಷಣಾ ಮಂದಿರದಲ್ಲಿ ಪತ್ರಿಕಾಘೋಷ್ಟಿ ನಡೆಸಿ ಮಾತನಾಡಿದರು.

      ಚೆಕ್ ಪೋಸ್ಟ್ ಗಳಲ್ಲಿ ಸಿ.ಸಿ. ಕ್ಯಾಮಾರಾ ಅಳವಡಿಸಲಾಗುವುದು, ಇದರಿಂದ ಬೇಕಾಬಿಟ್ಟಿ ಸಂಚರಿಸುವ ವಾಹನಗಳನ್ನು ಪತ್ತೆಹಚ್ಚಲಾಗುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ದಿನಸಿ ಅಂಗಡಿಗಳ ವಿರುದ್ದ ಪ್ರಕರಣ ದಾಖಲಿಸಿ ಎಂದು ತಹಶೀಲ್ದಾರ್ ಡಿ. ವರದರಾಜುಗೆ ಸೂಚಿಸಿ, ಪಾವಗಡದಲ್ಲಿ ಐದು ಮೋಬೈಲ್ ಸ್ಕಾಡ್ ಇದ್ದು ಈ ಬಗ್ಗೆ ನಿಗಾವಹಿಸಲು ಪೋಲೀಸರಿಗೆ ಸೂಚಿಸಿದರು.

      ಪಾವಗಡದಿಂದ ತುಮಕೂರು ಮಾರ್ಗವಾಗಿ ಸಂಚರಿಸುವಾಗ ಅರೋಗ್ಯ ಮತ್ತಿತರ ಅವಶ್ಯಕತೆ ಇರುವಾಗ ಅಂಬುಲೆನ್ಸ್ ಸಂಚರಿಸಲು ಮಡಕಶಿರಾದಲ್ಲಿ ಪೋಲಿಸರು ಪಾಸ್ ಇದ್ದರೂ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಈ ಬಗ್ಗೆ ಅನಂತಪುರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲಾಗುವುದು ಎಂದರು.

ರಂಜಾನ್ ಹಬ್ಬ ಮನೆಯಲ್ಲಿ ಅಚರಣೆ:

      ರಂಜಾನ್ ಹಬ್ಬವನ್ನು ಮನೆಯಲ್ಲಿ ಅಚರಿಸುವಂತೆ ಹೀಗಾಗಲೆ ಜಿಲ್ಲಾ ವಕ್ಪ್ ಬೋರ್ಡ ನಿಂದ ಮತ್ತು ನಾನು ಸಹ ಅದೇಶವನ್ನು ಹೊರಡಿಸಲಾಗಿದೆ, ಮಸೀದಿಗೆ ಹೋಗದಂತೆ ರಂಜಾನ್ ಹಬ್ಬವನ್ನು ಅಚರಿಸಬೇಕು ಎಂದು ತಿಳಿಸಿದರು.

 ಪಾವಗಡದಲ್ಲಿ ಕಳ್ಳಬಟ್ಟಿ ದಂದೆ ಹೆಚ್ಚಾಗಿದೆ:

      ಲಾಕ್‍ಡೌನ್ ಹಿನ್ನಲೆಯಲ್ಲಿ ಮದ್ಯಮಾರಾಟ ನಿಂತಿರುವುದರಿಂದ ಪಾವಗಡದಲ್ಲಿ ಕಳ್ಳಬಟ್ಟಿ ದಂದೆ ಹೆಚ್ಚಾಗಿದ್ದು ಇತ್ತೀಚೆಗೆ ಪಾವಗಡ ಪಟ್ಟಣದ ಇಬ್ಬರು ಯುವಕರು ಕಳ್ಳಬಟ್ಟಿ ಕುಡಿದು ಮರಣ ಹೊಂದಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತ ಪಡಿಸಿರುವುದಾಗಿ ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಈ ಬಗ್ಗೆ ಅಬಕಾರಿ ಮತ್ತು ಪೋಲೀಸ್ ಇಲಾಖೆಗೆ ಗಮನ ಹರಿಸಲು ಸೂಚಿಸುವುದಾಗಿ ತಿಳಿಸಿದರು.
ಜಿಲ್ಲಾ ಎಸ್.ಪಿ. ಡಾ,. ಕೋನವಂಶಿಕೃಷ್ಣ ಮಾತನಾಡಿದರು, ಮಧುಗಿರಿ ಉಪವಿಭಗಾಧಿಕಾರಿ ಡಾ. ನಂದಿನಿದೇವಿ, ಡಿ.ವೈ.ಎಸ್.ಪಿ. ಪ್ರವೀಣ್ ಕುಮಾರ್, ಪಾವಗಡ ಠಾಣಾ ಸಿ.ಪಿ.ಐ. ನಾಗರಾಜ್, ಎಸ್.ಐ. ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ, ಕಸಬಾ ಆರ್.ಐ. ರಾಜಗೋಪಾಲ್, ಗ್ರೇಡ್-2 ತಹಶೀಲ್ದಾರ್ ಶಿವಾನಂದರೆಡ್ಡಿ, ಸತ್ಯನಾರಾಯಣ ಹಾಜರಿದ್ದರು. 

(Visited 48 times, 1 visits today)