ಪಾವಗಡ :
 
     ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಸಹಿತ   ಮಳೆಗೆ ಬಹಳಷ್ಟು ಹಾನಿಉಂಟಾಗಿದೆ  ಪಟ್ಟಣದ ಕೇಲವಂದು ಕಡೆ ಮರಗಳು ಧರೆಗೆ ಉರುಳಿದ್ದು ಮರದ ಕೊಂಬೆ ಕಾರಿನ ಮೇಲೆ ಬಿದಗದು ಜಕಮ್ ಗೊಂಡಿದೆ.
       ಇನ್ನೊಂದು ಕಡೆ  ರಸ್ತೆಗಳಲ್ಲಿ ನೀರು ನಿಂತು ಅಂಗಡಿ ಮುಂಗಟ್ಟುಗಳಲ್ಲಿ ನೀರು ತುಂಬಿರುವ ಘಟನೆ ಹಾಗೂ ಪಟ್ಟಣದ ಬನಶಂಕರಿ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ವಿದ್ಯುತ್ ತಂತಿಗಳು ಹಾನಿಕರವಾಗಿದೆ. ಚಳಕೆರೆ ಮುಖ್ಯರಸ್ತೆ ಇದ್ದಂತಹ ರೈತ ಹರೀಶ್ ತೋಟದಲ್ಲಿ ಬೆಳೆದಂತಹ ಪಪ್ಪಾಯ ಬೆಳೆ ಮಳೆಗೆ ಕೊಚ್ಚಿಹೋಗಿದೆ ಇದರಿಂದ ಸುಮಾರು ಏಳು ಲಕ್ಷ ನಷ್ಟ ಉಂಟಾಗಿದ್ದು ದಿಕ್ಕುತೋಚದಂತಾಗಿದೆ ಎನ್ನುತ್ತಾರೆ ಹರೀಶ್ . 
      ಬಹಳ ದಿನಗಳ ನಂತರ ಸುರಿದ ಮಳೆಗೆ ಬೃಹತ್ ಚರಂಡಿಗಳು ತುಂಬಿ ಹರಿಯುತ್ತಿವೆ ಕೇಲವಂದ ಮನೆಗಳಿಗೆ ಮಳೆನೀರು ಸಂಗ್ರಹ ವಾಗಿ ಮನೆ ಮಂದಿ ಹೊರಹಾಕುವ ದೃಶ್ಯಗಳು ಕಂಡುಬಂದವು. ಇನ್ನೂ ಪ್ರಮುಖ ರಸ್ತೆಗಳು ಅವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಅಗಿರುವುದರಿಂದ ರಸ್ತೆಯ ಮೇಲೆ ನೀರು ನಿಂತಕಾರಣ ವಾಹನ ಸವಾರರು ಹಿಡಿ ಶಾಪ ಹಾಡುತ್ತಿದ್ದ ಸಂದರ್ಭಗಳು ಕಂಡುಬಂದವು.
        ಸತತ ಮೂರು ತಾಸು ಸುರಿದ ಮಳೆಯಿಂದ ಜನರು ಮನೆಯಿಂದಲೇ ಮಳೆಯ ಕಂಡು ಸಂಭ್ರಮಾಚರಣೆ ಪಟ್ಟಿದ್ದು ವಿಶೇಷವಾಗಿತ್ತು.
(Visited 16 times, 1 visits today)