ಪಾವಗಡ:

     ಪಾವಗಡ ತಾಲ್ಲೂಕು ಕಸಬಾ ಹೋಬಳಿ ಬ್ಯಾಡನೂರು ಗ್ರಾಮದ ಶ್ರೀ ಶಂಕರಲಿಂಗಕೆರೆಯನ್ನು ಬಹಿರಂಗ ಹರಾಜು ಹಾಕದೇ ಮೀನುಗಾರಿಕಾ ಇಲಾಖೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವ್ಯವಹಾರ ಎಸಗಿದ್ದಾರೆ ಎಂದು ಅರೋಪಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ಮೀನುಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ. 

      ಮುತ್ತಿಗೆಯ ನೇತೃತ್ವವನ್ನು ವಹಿಸಿದ್ದ ತಾಲ್ಲೂಕು ರೈತ ಮತ್ತು ಹಸಿರುಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬ್ಯಾಡನೂರು ಗ್ರಾಮದ ಶ್ರೀಶಂಕರಲಿಂಗನ ಕೆರೆಯನ್ನು 2014-15 ನೇ ಸಾಲಿನಲ್ಲಿ ಸಂಚಪ್ಪ ಎನ್ನುವರಿಗೆ ಮೀನು ಸಾಕಿ ಮಾರಾಟ ಮಾಡಲು ಟೆಂಡರ್ ನೀಡಿ ಇಲ್ಲಿಗೆ ಐದು ವರ್ಷವಾಗಿತ್ತು, 2019- ರಿಂದ 2020 ರವರೆಗೂ ಪುನಃ ಅವರಿಗೆ ರೀನಿವಲ್ ನೀಡಲಾಗಿತ್ತು. ಅದರೆ ಹೀಗ 2020-21 ನೇ ಸಾಲಿಗೆ ಮತ್ತೆ ಸಂಚಪ್ಪನಿಗೆ ರಿನೆವಲ್ ಮಾಡಲಾಗಿದೆ. ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲೂ ಸಂಚಪ್ಪ ಕೆ.ಜಿ ಮೀನು 300 ರೂಗಳಿಗೆ ಮಾರಾಟ ಮಾಡಿದ್ದಾರೆ ತಕ್ಷಣ ಸಂಚಪ್ಪನಿಗೆ ನೀಡಿದ ಟೆಂಡರ್‍ನ್ನು ರದ್ದುಪಡಿಸಿ ಪುನಃ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು.

      ಗ್ರಾಮದ ರೈತ ಮುಖಂಡ ಗುರುಮೂರ್ತಿ ಮಾತನಾಡಿ,ಈ ಕೆರೆಯು ಸುತ್ತಮುತ್ತಲಿನ ಏಳು ಗ್ರಾಮಗಳಿಗೆ ಸೇರುತ್ತದೆ, ಹೀಗ ಕೆರೆಯಲ್ಲಿ ನೀರು ಬರಿದಾಗುತ್ತಿದ್ದು, ಟೆಂಡರ್ ದಾರರು ಕೆರೆಯ ನೀರನ್ನು ಹೋರಹಾಕಿ ಮೀನು ಹಿಡಿಯುತ್ತಿದ್ದಾರೆ, ಇದರಿಂದ ಕೆರೆಯು ಖಾಲಿಯಾಗಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗುತ್ತದೆ, ಅದ್ದರಿಂದ ಮೀನುಗಾರಿಕಾ ಇಲಾಖೆಯು ಹೀಗ ನೀಡಿದ ಟೆಂಡರ್ ನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು ಇಲ್ಲವಾದಲ್ಲಿ 7 ಗ್ರಾಮಗಳ ರೈತರುಗಳು ಉಗ್ರಹೋರಾಟ ಮಾಡಲಾಗುವುದು ಎದು ಹೆಚ್ಚರಿಸಿದರು.

      ತಾಲ್ಲೂಕಿನ ಮೀನುಗಾರಿಕಾ ಇಲಾಖಾಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅದಿಕಾರಿಯೊಬ್ಬರು ನಿವೃತ್ತವಾಗಿ ಸುಮಾರು ಏಳೆಂಟು ವರ್ಷಗಳಾಗಿದ್ದು ಅಂದಿನಿಂದ ಇಲ್ಲಿಯವರೆಗೂ ಈ ಹುದ್ದೆ ಖಾಲಿ ಇದ್ದು, ಕನಿಷ್ಟ ಸಿಬ್ಬಂದಿಯೂ ಇಲ್ಲದೇ ಹೊರಗುತ್ತಿಗೆಯಲ್ಲಿ ನೌಕರೊಬ್ಬರು ಕೆಲಸಮಾಡುತ್ತಿದ್ದಾರೆ ಎಂದು ಸಂಘದ ರಾಮಲಿಂಗಪ್ಪ ಬೇಸರ ವ್ಯಕ್ತ ಪಡಿಸಿದರು.

      ಕಛೇರಿಯ ಸಿಬ್ಬಂದಿ ಪೋತನ್ನ ಎನ್ನುವರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಕರೋನಾದಿಮದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ 30-6-2020 ಟೆಂಡರ್ ಮುಕ್ತಾಯವಾಗಿದ್ದ ಕೆರೆಗಳನ್ನು ಗುತ್ತಿಗೆದಾರರಿಂದ ಶೇ5 ರಷ್ಟು ಹೆಚ್ಚುವರಿಯಾಗಿ ಗುತ್ತಿಗೆ ಮೊತ್ತವನ್ನು ಪಡೆದು ಕೊಂಡು 30-2021 ರವರೆಗೂ ಮೂಂದುವರೆಸಲಾಗಿದೆ ಎಂದು ತಿಳಿಸಿದರು.

(Visited 10 times, 1 visits today)