ಮಧುಗಿರಿ:

      ಮಧುಗಿರಿ ಪೊಲೀಸ್ ಇಲಾಖಾ ವತಿಯಿಂದ ಕೋವಿಡ್-19 ರ ಬಗ್ಗೆ ಎಚ್ಚರವಿರಲಿ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಲು ‘ಜನಾಂದೋಲನ ಕಾರ್ಯಕ್ರಮವನ್ನು’ ಪಟ್ಟಣದಲ್ಲಿ ಬುಧವಾರದಂದು ಜಾಥಾ ನಡೆಸುವ ಮೂಲಕ ಹಮ್ಮಿಕೊಳ್ಳಲಾಯಿತು.

      ಡಿವೈಎಸ್ಪಿ ಎಂ.ಪ್ರವೀಣ್ ಮಾತನಾಡಿ, ಕೇಂದ್ರ ಸರಕಾರದ ಎಸ್ ಎಂಎಸ್ ಆದೇಶದಂತೆ “ಸೋಷಿಯಲ್ ದಿಸ್ಟೆನ್ಸ್, ಮಾಸ್ಕ್, ಸ್ಯಾನಿಟ್ಯೆಸರ್’ ಖಡ್ಡಾಯವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲಿಸ್ ಇಲಾಖೆವತಿಯಿಂದ ಜಾಥ ನಡೆಸಿ, ಹಸ್ತಲಾಘವ ಮಾಡುವ ಬದಲು ನಮಸ್ಕರಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಿ ನೊವೆಲ್ ಕೊರೊನಾ ವೈರಸ್ ನಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಿ ಎಂದರು.

      ಜಾಥಾ ವೇಳೆ ಮಳೆಯ ಸಿಂಚನದ ನಡುವೆಯೂ ಪೊಲೀಸರು ಪಟ್ಟಣದಲ್ಲಿ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದ್ದು ವಿಶೇಷವಾಗಿತ್ತು .
ಈ ಜಾಥಾವು ಮಧುಗಿರಿ ಡಿವೈಎಸ್ಪಿ ಕಚೇರಿಯಿಂದ ಆರಂಭಗೊಂಡು ದ್ವಿಪಥ ರಸ್ತೆ, ಹೈಸ್ಕೂಲ್ ರಸ್ತೆ ,ಡೂಮ್ಲೈಟ್ ವೃತ್ತ, ಕೆಎಚ್ ರಸ್ತೆ, ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ ,ಪೊಲೀಸ್ ಠಾಣೆ ಮುಂಭಾಗ ಅರಣ್ಯ ಇಲಾಖೆ ರಸ್ತೆ ,ದಂಡೂರ ಬಾಗಿಲ ರಸ್ತೆ, ರಾಜಾ ಚಿಕ್ಕಪ್ಪಗೌಡ ವೃತ್ತ, ಡಾ. ಬಿ.ಆರ್ .ಅಂಬೇಡ್ಕರ್ ವೃತ್ತದ ಮೂಲಕ ಡಿವೈಎಸ್ಪಿ ಕಚೇರಿಯನ್ನು ತಲುಪಿತು.

      ಸಿಪಿಐ ಸರ್ದಾರ್ ,ಬಡವನಹಳ್ಳಿ ಪಿಐ ಹನುಮಂತರಾಯಪ್ಪ ಪಿಎಸ್‍ಐಗಳಾದ ಕಾಂತರಾಜು, ಮಂಗಳಗೌರಮ್ಮ ,ಡಿವೈಎಸ್ಪಿ ಕಚೇರಿ ಸಿಬ್ಬಂದಿಗಳಾದ ಗಣೇಶ್, ರಾಮಕೃಷ್ಣ, ರಾಘವೇಂದ್ರ ,ಶ್ರೀನಿವಾಸ್ ಹಾಗೂ ಪೆÇಲೀಸರು ಜಾಥಾದಲ್ಲಿ ಪಾಲ್ಗೊಂಡಿದ್ದರು.

(Visited 5 times, 1 visits today)