ಕೊರಟಗೆರೆ:


ಅಕ್ರಮವಾಗಿ ಗೋವುಗಳ ಮಾಂಸ ಮಾರಾಟ ಮಾಡುತ್ತೀದ್ದ ಕಸಾಯಿ ಖಾನೆಯ ಅಂಗಡಿಯ ಮೇಲೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ 4ಜನ ಆರೋಪಿಗಳ ಜೊತೆ 6ಜಾನುವಾರು ರಕ್ಷಣೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನ ಚಿಕ್ಕಮಸೀದಿ ಬಳಿಯಲ್ಲಿ ಅಕ್ರಮವಾಗಿ ಗೋವಿನ ಮಾಂಸ ಮಾರಾಟ ಮಾಡುತ್ತೀದ್ದ ವೇಳೆ ದಿಡೀರ್ ದಾಳಿ ನಡೆಸಿರುವ ಪೊಲೀಸರ ತಂಡ 4ಜನ ಆರೋಪಿಗಳ ಜೊತೆಯಲ್ಲಿ ಟಾಟಾಎಸಿ ಮತ್ತು ಹತ್ತಾರು ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಕುಣಿಗಲ್‍ನ ಗೌಗ್ಯಾನ್ ಪೌಂಡೇಷನ್ ಸ್ವಯಂ ಸೇವಕ ಮಂಜುನಾಥ ಎಂಬಾತನ ದೂರಿನ ಅನ್ವಯ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ದಿಡೀರ್ ನಡೆಸಿದೆ. ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 1ಟನ್‍ಗೂ ಅಧಿಕ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೌಗ್ಯಾನ್ ಪೌಂಡೇಷನ್‍ನ ಸ್ವಯಂ ಸೇವಕ ಮಂಜುನಾಥ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಅಕ್ರಮ ಕಸಾಯಿ ಖಾನೆಯಲ್ಲಿ ಎಗ್ಗಿಲ್ಲದೇ ಜಾನುವಾರುಗಳ ಹತ್ಯೆ ನಡೆಯುತ್ತೀದೆ. ಗೌಗ್ಯಾನ್ ಪೌಂಡೇಷನ್ ನೇತೃತ್ವದಲ್ಲಿ ಇಂದು ದಾಳಿ ನಡೆಸಿ 4ಅಂಗಡಿಗಳ ಜೊತೆ 4ಜನ ಆರೋಪಿಗಳನ್ನು ಬಂಧಿಸಿ 6ಜಾನುವಾರು ರಕ್ಷಣೆ ಮಾಡಿದ್ದಾರೆ. ಅನಧಿಕೃತ ಜಾಗವನ್ನು ಮುಟ್ಟುಗೋಳು ಹಾಕಿಕೊಳ್ಳಬೇಕಿದೆ ಎಂದು ಆಗ್ರಹ ಮಾಡಿದರು.
ದಾಳಿಯ ವೇಳೆಯಲ್ಲಿ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುಳ, ಗೌಗ್ಯಾನ್ ಪೌಂಡೇಷನ್‍ನ ಮಂಜುನಾಥ, ತಿಮ್ಮರಾಜು, ಸಂಜಯ್ ಸೇರಿದಂತೆ ಇತರರು ಇದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 25 times, 1 visits today)