ಗುಬ್ಬಿ:

      ಉತ್ತರ ಪ್ರದೇಶ ರಾಜ್ಯದಲ್ಲಿ ವಾಲ್ಮೀಕಿ ಜನಾಂಗದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ನಾಲಿಗೆ ತಂಡರಿಸಿ ಬೆನ್ನುಮೂಳೆ ಮುರಿದು ವಿಕೃತಿ ಮೆರದ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಎನ್‍ಕೌಂಟರ್ ಮೂಲಕ ಉತ್ತರ ನೀಡಬೇಕು ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಸೋಮವಾರ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

       ಪಟ್ಟಣದ ಪ್ರವಾಸಿಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿ ಪ್ರತಿಭಟಿಸಿ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಧಿಕ್ಕರಿಸಿ ಘೊಷಣೆ ಕೂಗಿದರು. ನ್ಯಾಯಕ್ಕೆ ಆಗ್ರಹಿಸಿ ಮಾತನಾಡಿದ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಉತ್ತರ ಪ್ರದೇಶದ ಹತ್ರಾಸ್ ಎಂಬ ಗ್ರಾಮದಲ್ಲಿ ನಡೆದ ಅಮಾನುಷ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸಬೇಕಿದೆ. ಈ ಮಟ್ಟದ ಅಟ್ಟಹಾಸ ಮೆರದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಗೊಂದಲ ಮೂಡುತ್ತಿರುವ ಬಗ್ಗೆ ಸಮಾಜ ಖಂಡಿಸುತ್ತದೆ ಎಂದರು.

      ದೇಶದ ವಾಲ್ಮೀಕಿ ಜನಾಂಗದವರು ಆಯಾ ಪಟ್ಟಣ ನಗರ ಪ್ರದೇಶಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಎರಡೆರಡು ಪ್ರಕರಣ ನಡೆದಿರುವುದು ಅಮಾನವೀಯವಾದದು. ಈ ಬಗ್ಗೆ ವಾಲ್ಮೀಕಿ ಸಮುದಾಯ ಪ್ರತಿಭಟಿಸಿದೆ. ಯಾವುದೇ ಜನಾಂಗವಿರಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಬೇಕಿದೆ. ಎಲ್ಲಿಯೇ ಇಂತಹ ಘಟನೆ ನಡೆದಲ್ಲಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಸಮಾಜಮುಖಿಯಾಗಿ ವಾಲ್ಮೀಕಿ ಸಮಾಜ ಮುನ್ನುಗಲಿದೆ ಎಂದ ಅವರು ನರಕಯಾತನೆ ಅನುಭವಿಸಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 50 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

     ನಂತರ ಉಪತಹಸೀಲ್ದಾರ್ ಖಾನ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಎ.ನರಸಿಂಹಮೂರ್ತಿ, ಎಂ.ಲಕ್ಷ್ಮಣ್, ಸೋಮಲಾಪುರ ಕೃಷ್ಣಮೂರ್ತಿ, ವಕೀಲ ನಂದೀಶ್, ಹೇರೂರು ನಾಗರಾಜು, ನಿಟ್ಟೂರು ಕೃಷ್ಣಮೂರ್ತಿ, ಕರಿಯಣ್ಣ, ಲೋಕೇಶ್, ಮಂಜುನಾಥ್ ಇತರರು ಇದ್ದರು.

(Visited 4 times, 1 visits today)