ಗುಬ್ಬಿ:
ಬಗರ್ ಹುಕ್ಕುಂ ಸಾಗುವಳಿದಾರರ ಹೋರಾಟ ಸಮಿತಿಗಳು ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಭೂ ಸಮಾವೇಶವನ್ನು ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರದಲ್ಲಿ ನಡೆಸಲಾಯಿತು.
ಸಮಾವೇಶವನ್ನು ಉದ್ಘಾಟಿಸಿದ ಕೆ.ಪಿ.ಆರ್.ಎಸ್ ನ ರಾಜ್ಯ ಕಾರ್ಯದರ್ಶಿ ಯಶವಂತ್ ಮತನಾಡಿ ರೈತ ಹೋರಾಟಗಳನ್ನು ರಾಜ್ಯ ಸರ್ಕಾರ ಗುರುತಿಸಬೇಕು ಬರಿ ಬಾಯಿಮಾತಿನಿ ರೈತ ಪರ ಕಾಳಜಿ ಬಿಟ್ಟು ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿದರು.
ಪ್ರಸ್ತಾವಿಕ ಮತನಾಡಿದ ಜಿಲ್ಲಾ ಸಂಚಾಲಕ ಅಜ್ಜಪ್ಪ ಮತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರ ಕಿರುಕುಳ ನೀಡುವದನ್ನು ನಿಲ್ಲಿಸಬೇಕು ಹಿಂದಿನ ಉಸ್ತುವಾರಿ ಸಚಿವರ ಬರವಸೆಯೆಂತೆ ರೈತ ಮತ್ತು ಅರಣ್ಯ ಇಲಾಖೆಯ ನಡುವೆ ಇರುವ ಭುವಿವಾದ ಪರಿಹಾರಕ್ಕೆ ಸರ್ವೆ ಮೂಲಕ ಪರಿಹಾರ ಮಾಡಬೇಕೆಂದರು. ಕೆ.ಪಿ.ಆರ್ ಎಸ್‍ನ ರಾಜ್ಯಧ್ಯಕ್ಷ ಜಿ.ಸಿ ಬಯ್ಯರೆಡ್ಡಿ ರವರು ಮತನಾಡಿ ಹಿಂದಿನ ಕಂಧಾಯ ಸಚಿವ ಕಾಗೋಡು ತಿಮ್ಮಪ್ಪನವರು ರೈತ ಹೊರಾಟ ಪರಿಗಣಿಸಿ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕ ಸಲ್ಲಿಸಲಾಗಿದೆ. ಅದರೆ ಸರ್ಕಾರ ಮೀನ ಮೇಷ ಎಣಿಸುವ ಬದಲು ಹಕ್ಕು ಪತ್ರ ದುರಸ್ಥಿ ಕಾರ್ಯವನ್ನು ಮಾಡಿ ರೈತರಿಗೆ ಭೂಮಿ ಸಿಗುವಂತೆ ಮಾಡಬೇಕು. ಜೂನ್ 8 2022 ರಿಂದ ಭೂಮಿ, ವಸತಿ, ಬೆಂಬಲ ಬೆಲೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಅನಿರ್ಧಿಷ್ಟ ಪ್ರತಿಭಟನೆಗೆ ಕರೆ ನೀಡಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ ಬಿ.ಉಮೇಶ ಮತನಾಡಿ ಜಿಲ್ಲೆಯ ನಾಡಿ ಮಿಡಿತ ಇರುವವರನ್ನು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು.ಹಲಾವರು ಸಮಸ್ಯೆಗಳು ಜಿಲ್ಲೆಯನ್ನಯ ಕಾಡುತ್ತಿವೆ. ಆಧಿಕಾರಿಗಳ ಗ್ರಾಮವಾಸ್ತವ್ಯ ದಿಂದ ಹೆಚಿನ ಸಮಸ್ಯಗಳಿಗೆ ಪರಿಹಾರ ಸಿಗುತ್ತಿಲ್ಲ ಅದಕ್ಕೆ ಬದಲಾಗಿ ಮುಖ್ಯ ಮಂತ್ರಿಗಳ ಕಾರ್ಯವೈಕರಿ ಬದಲು ಮಾಡಿಕೂಂಡುರೆ ಹಲಾವರು ಸಮಸ್ಯೆಗಳಿಗೆ ಪರಿಹಾರ ಕಾಣಲು ಸಧ್ಯಾವಾಗುತ್ತದೆ ಎಂದರು.ತಿಪಟೂರಿನ ಮುಖಂಡ ಆರ್.ಎಸ್.ಚನ್ನಬಸವಣ್ಣ, ಗುಬ್ಬಿಯ ದೂಡ್ಡನಂಜಯ್ಯ, ಕಾರ್ಮಿಕ ಮುಖಂಡ ಎನ್,ಕೆ.ಸುಬ್ರಮಣ್ಯ ಸಮಾವೇಶದಲ್ಲಿ ಮತನಾಡಿದರು. ವೇದಿಕೆಯಲ್ಲಿ ಗುಬ್ಬಿ ತಾಲ್ಲೂಕಿನ ರೈತ ಮುಖಂಡ ನರಸಿಂಹಮೂರ್ತಿ, ಚಿ.ನಾ .ಹಳ್ಳಿಯ ತಾಲ್ಲೂಕಿನ ಶಿವಣ್ಣ,ಲೋಕೆಶ್, ಶಿರಾ ತಾಲ್ಲೂಕಿನ ಕರಿಬಸಪ್ಪ,ರಾಚಪ್ಪ, ಕೋದಂಡಪ್ಪ ,ವೀರಣ್ಣ ಉಪಸ್ಥಿತರಿದ್ದರು.

(Visited 6 times, 1 visits today)