ಶಿರಾ ಉಪಚುನಾವಣೆಯ ಲೆಕ್ಕಾಚಾರ : ಟಿಕೆಟ್‍ಗಾಗಿ ಲಾಭಿ

ತುಮಕೂರು:

       ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾ ಯಣ್ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುವುದು ನಿಶ್ಚಿತ.

       ಈ ಉಪಚುನಾವಣೆಯಲ್ಲಿನ ಲೆಕ್ಕಾಚಾರಗಳು ನಿರೀಕ್ಷೆಗೂ ಮೀರಿದಂತೆ ನಡೆಯುತ್ತಿವೆ. ಸೂತಕದ ಮನೆಯಲ್ಲಿಯೇ ರಾಜಕಾರಣದ ರಂಗು ಬಳಿಯಲು ರಾಜಕೀಯ ಪಕ್ಷದ ನಾಯಕರು ಅವಣಿಸುತ್ತಿದ್ದು, ಸಾವಿನ ಮನೆಯ ಸೂತಕದ ಛಾಯೆ ಮರೆಯಾಗುವ ಮುನ್ನವೇ ದಿವಂಗತ ಸತ್ಯನಾರಾಯಣರವರ ಹೆಸರನ್ನ ಬಳಸಿಕೊಂಡು ಚುನಾವಣಾ ಅಕಾಡದಲ್ಲಿ ಸಿದ್ಧತೆಗೆ ರಾಜಕೀಯ ಕತ್ತಿ-ಗುರಾಣಿ ಹಿಡಿಯುವ ದಂಢನಾಯಕನ ಹುಡುಕಾಟದಲ್ಲಿ ಜೆಡಿಎಸ್ ಪಕ್ಷ ಆಲೋಚಿಸುತ್ತಿದೆಯಾದರೂ ಸೂತಕದ ಮನೆಯ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ನಾಯಕನ ಹಗಲಿಕೆಯಿಂದ ಕಂಗಾಲಾದ ಆ ಪಕ್ಷದ ಅನುಯಾಯಿಗಳು ಮತ್ತು ಮತದಾರರ ಮನಸ್ಸಿನಲ್ಲಿ ಕಣ್ಣೀರಿನ ಲೆಕ್ಕಾಚಾರವನ್ನ ಮುಂದಿಟ್ಟುಕೊಂಡು ಕುಟುಂಬದ ಸದಸ್ಯ ಸತ್ಯಪ್ರಕಾಶ್‍ನನ್ನ ಕಣಕ್ಕಿಳಿಸಿದರೆ ಕಳೆದುಕೊಂಡು ಪಕ್ಷದ ನಾಯಕನ ಸಾವಿಗೆ ನ್ಯಾಯ ದೊರಕಿಸಿಕೊಡುವ ನೆಪದಲ್ಲಿ ಪಕ್ಷದಲ್ಲಿ ಕಳೆದುಹೋದ ಒಂದಂಕಿ ಮತ್ತೆ ಒಗ್ಗೂಡಿಸಬಹುದೆಂಬ ಲೆಕ್ಕಾಚಾರ ಜೆಡಿಎಸ್‍ನ ವರಿಷ್ಠ ದೊಡ್ಡಗೌಡರ ಲೆಕ್ಕಾಚಾರದಂತಿದೆ.

      ಜೆಡಿಎಸ್ ಪಕ್ಷದಲ್ಲಿ ಸತ್ಯನಾರಾಯಣ್‍ರವರ ಆರೋಗ್ಯ ವ್ಯತ್ಯಯಗೊಂಡ ನಂತರ 2018 ರ ಚುನಾವಣೆಯಲ್ಲಿಯೇ ಹಿರಿಯ ನಾಯಕ ಸತ್ಯನಾರಾಯಣ್‍ರವರನ್ನ ಹಿಂದಿಕ್ಕಿ ಪಕ್ಷ ಟಿಕೇಟ್ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಸಿ.ಆರ್.ಉಮೇಶ್, ಕಲ್ಕೆರೆ ರವಿಕುಮಾರ್, ಚಿದಾನಂದ್ ಸೇರಿದಂತೆ ಹಲವರು ಪ್ರಯತ್ನಿಸಿದ್ದರು. ದೊಡ್ಡಗೌಡರ ಆ ಒಂದು ಮಾತು ಎಲ್ಲರನ್ನು ಬಾಯ್‍ಮುಚ್ಚಿಸಿತ್ತು. ಸತ್ಯನಾರಾಯಣ್‍ರವರನ್ನು ಹೊರತುಪಡಿಸಿ ಮತ್ತಿನ್ನಾರು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಲ್ಲ ಎಂಬುದು ದೊಡ್ಡಗೌಡರಿಂದ ರವಾನೆಯಾಗಿತ್ತು. ನಂತರ ಸತ್ಯನಾರಾಯಣ್ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು.

       ಕಳೆದ ಚುನಾವಣೆಯಲ್ಲಿ ಜೊತೆಯಲ್ಲಿದ್ದ ಜಿಲ್ಲಾಪಂಚಾಯ್ತಿ ಹಾಲಿ ಅಧ್ಯಕ್ಷರ ಪತಿ ಕಲ್ಕೆರೆ ರವಿಕುಮಾರ್ ಮತ್ತು ಸಿ.ಆರ್.ಉಮೇಶ್ ಸತ್ಯನಾರಾಯಣ್‍ರವರ ಜೊತೆಯಲ್ಲಿಯೇ ಚುನಾವಣೆ ಎದುರಿಸಿದ್ದರು. ದಿವಂಗತ ಸತ್ಯನಾರಾಯಣ್‍ರವರ ಪುತ್ರ ಸತ್ಯಪ್ರಕಾಶ್‍ರವರನ್ನ ಚುನಾವಣಾ ಕಣದಲ್ಲಿ ನೋಡಬೇಕು ಎನ್ನುವ ಮಹಾದಾಸೆಯಲ್ಲಿ ಸತ್ಯನಾರಾಯಣ್ ಬೆಂಬಲಿಗರಿದ್ದು, ಸತ್ಯಪ್ರಕಾಶ್ ಈಗಾಗಲೇ ತಾಲೂಕು ಪಂಚಾಯ್ತಿಯ ಅಧ್ಯಕ್ಷಗಾದೆಗೇರಿ ಅಧಿಕಾರ ನಡೆಸಿದ ಅನುಭವವಿದೆ ತಂದೆಯ ರಾಜಕಾರಣದ ಗರಡಿಯಲ್ಲಿ ಪಳಗಿರುವ ಇವರು ತಮ್ಮ ತಂದೆಯ ನಾಯಕತ್ವದ ಗುಣವನ್ನ ಮುನ್ನಡೆಸಿಕೊಂಡು ಹೋಗಬಹುದೆಂಬ ಮಹಾದಾಸೆ ಆ ಪಕ್ಷದ ಕೆಲ ಕಾರ್ಯಕರ್ತರು ಮತ್ತು ಸತ್ಯನಾರಾಯಣ್‍ರವರ ಅಭಿಮಾನಿ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

       ಬಹಳಷ್ಟು ವರ್ಷಗಳಿಂದ ಜೆಡಿಎಸ್ ಪಕ್ಷದ ಕಟ್ಟಾಳುವಿನಂತೆ ಗೆಲುವು ಸೋಲುಗಳ ನಂತರವು ಸತ್ಯನಾರಾಯಣ್‍ರವರ ಜೊತೆಯಲ್ಲಿಯೇ ಗುರುತಿಸಿಕೊಂಡಿದ್ದ ಮತ್ತು ಜಿಲ್ಲಾಪಂಚಾಯ್ತಿಯ ಸದಸ್ಯ ರಾಗಿರುವ ಸಿ.ಆರ್.ಉಮೇಶ್‍ರವರು ಸಹಾ ಕಳೆದ ಚುನಾವಣೆಯಲ್ಲಿಯೇ ಆಕಾಂಕ್ಷಿಯಾಗಿದ್ದವರು. ಇದೀಗ ಅವರು ಸಹ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಚುನಾವಣಾ ಆಖಾಡಕ್ಕೀಳಿಯುವ ಹುಮ್ಮಸ್ಸಿನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವ ಹೊಂಗನಿಸಿನಲ್ಲಿದ್ದಾರೆ.

      ಇದೀಗ ತೆರವಾದ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಅಧಿಕೃತ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಸುತ್ತಾಡುತ್ತಿರುವ ಕಲ್ಕೆರೆ ರವಿಕುಮಾರ್ ಜೆಡಿಎಸ್ ಪಕ್ಷದ ಮುಖಂಡರೆನ್ನುವುದು ಎಷ್ಟು ಸತ್ಯವೋ ಈತ ಪಕ್ಕ ವ್ಯವಹಾರಸ್ಥ ಎನ್ನುವುದು ಅಷ್ಟೇ ನಗ್ನ ಸತ್ಯ. ಎಲ್ಲವನ್ನೂ ಲೆಕ್ಕಾಚಾರ ಹಾಕಿ ನೋಡುವ ರವಿಕುಮಾರ್ ಇತ್ತೀಚೆಗೆ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಹಣವನ್ನ ವ್ಯಯಿಸುತ್ತಿದ್ದರೂ ಎನ್ನುತ್ತಿದ್ದಾರೆ ಎಂದರೆ ಅದು ಮುಂದಿನ ಚುನಾವಣೆಯ ಲೆಕ್ಕಾಚಾರ ಎನ್ನುವುದು.

       ಆದರೆ, ಇವರ ಬಗ್ಗೆ ಜಿಲ್ಲಾ ಜೆಡಿಎಸ್‍ನ ನಾಯಕರಲ್ಲಿ ಅಂತಹ ಯಾವುದೇ ನಂಬಿಕೆಯ ಮಾತುಗಳು ಕೇಳಿ ಬರುತ್ತಿಲ್ಲ. ಕಾರಣ ತನ್ನ ಪತ್ನಿ ಲತಾರವರನ್ನ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷಗಾದೆಗೇರಿಸುವ ಸಂದರ್ಭದಲ್ಲಿ ಪಕ್ಷದ ವರಿಷ್ಠರಿಗೆ ಕೊಟ್ಟ ಮಾತನ್ನ ನೆರವೇರಿಸುವಲ್ಲಿ ವಿಫಲವಾಗಿದ್ದು, ಅಧಿಕಾರದ ಲಾಲಾಸೆಗಾಗಿ ಪಟ್ಟುಬಿಡದೆ ಅಧ್ಯಕ್ಷಗಾದಿಯನ್ನು ಕೊಟ್ಟ ಮಾತಿನಂತೆ ಬಿಟ್ಟು ಕೊಡದೆ ಹಣದ ಪ್ರಾಬಲ್ಯದಲ್ಲಿ ಅಧಿಕಾರವನ್ನ ಉಳಿಸಿಕೊಳ್ಳುವ ಮುಖೇನ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

     ಲಾಕ್‍ಡೌನ್ ಸಂದರ್ಭದಲ್ಲಿ ಪುಡ್‍ಕಿಟ್ ಹಂಚುವ ಸಂದರ್ಭಗಳಲ್ಲಿ ಕಾಂಗ್ರೆಸ್‍ನ ಪ್ರಭಾವಿ ಮಾಜಿ ಸಚಿವ ಟಿ.ಬಿ.ಜಯಚಂದ್ರರವರ ಜೊತೆಯಲ್ಲಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸಿತ್ತು. ಆಂತರಿಕವಾಗಿ ಮಾಜಿ ಸಚಿವ ಜಯಚಂದ್ರರವರ ಬಗ್ಗೆ ವ್ಯಾಮೋಹವುಳ್ಳವರಾಗಿ ಜಯಚಂದ್ರ ಮುಂದಿನ ಶಾಸಕರು ಈ ಕ್ಷೇತ್ರದ ಎಂಎಲ್‍ಎ ಅವರೇ ಎಂಬ ಮಾತುಗಳನ್ನ ಹೆಚ್ಚು ಆಡುತ್ತಿರುವ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.

      ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಜೆಡಿಎಸ್‍ನ ಅಧಿಕೃತ ಅಭ್ಯರ್ಥಿ ನಾನೇ. ನನ್ನನ್ನ ಹೊರತುಪಡಿಸಿದರೆ ಕಾಂಗ್ರೆಸ್‍ನ ಜಯಚಂದ್ರ ಈ ಕ್ಷೇತ್ರದ ಶಾಸಕರಾಗುತ್ತಾರೆ ಎನ್ನುವ ಮಾತುಗಳು ನಿಷ್ಠಾವಂತ ಜೆಡಿಎಸ್ಸಿಗರ ಮನಸ್ಸನ್ನು ಕೆರಳಿಸುತ್ತಿದೆ.

   ಟಿ.ಬಿ.ಜೆ ಅಧಿಕೃತ ಅಭ್ಯರ್ಥಿ :

      ಒಕ್ಕಲಿಗರ ಪ್ರಭಾವಿ ನಾಯಕರಲ್ಲೊಬ್ಬರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಚಿವರಾಗಿದ್ದುಕೊಂಡೇ ಸೋಲಿನ ಸುಳಿಯಲ್ಲಿ ಸಿಲುಕಿದವರು ತನ್ನವದಿಯ ಅಭಿವೃದ್ಧಿಯೇ ತನ್ನ ಮತಬ್ಯಾಂಕ್ ಎಂದು ನಂಬಿಕೊಂಡಿರುವ ಇವರು ಪ್ರಶ್ನಾತೀತ ನಾಯಕ ಈ ಕ್ಷೇತ್ರದಲ್ಲಿ ಇವರನ್ನ ಹೊರತುಪಡಿಸಿದರೆ ಮತ್ತಿನ್ಯಾರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕನಸನ್ನು ಕಾಣುವಂತಿಲ್ಲ. ಇವರ ಅವಧಿಯಲ್ಲಿ ಹರಿದ ಹೇಮೆ, ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇವರನ್ನ ಕೈಹಿಡಿಯಲಿವೇ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸಿಗರು ಇದ್ದಾರೆ.

      ರಾಜೇಶ್‍ಗೌಡರ ಚಿತ್ತ ಜೆಡಿಎಸ್‍ನತ್ತ : ಮಾಜಿ ಸಂಸದ ಮೂಡಲಗಿರಿಯಪ್ಪನವರ ಮಗನಾದ ಡಾ.ರಾಜೇಶ್‍ಗೌಡ ಕೂಡ ಈ ಕ್ಷೇತ್ರದ ಶಾಸಕರಾಗುವ ಕನಸು ಹೊತ್ತವರು ಇತ್ತೀಚೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಹೆಚ್ಚು ಗುರುತಿಸಿಕೊಂಡಿದ್ದು, ಈ ಉಪಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯಾವ ಪಕ್ಷದಿಂದ ಚುನಾವಣಾ ಕಣಕ್ಕೆ ದುಮುಕುವುದು ಎನ್ನುವ ಸ್ಪಷ್ಟ ನಿರ್ಧಾರವನ್ನ ಇನ್ನೂ ಕೈಗೊಂಡಿಲ್ಲ.

      ಕಾಂಗ್ರೆಸ್‍ನಲ್ಲಿ ಹೆಚ್ಚು ಕಂಡುಬರುತ್ತಿದ್ದ ರಾಜೇಶ್‍ಗೌಡರ ಚಿತ್ತ ಜೆಡಿಎಸ್‍ನತ್ತ ನೆಟ್ಟಿದೆ. ಜೆಡಿಎಸ್‍ನಿಂದ ಸ್ಪರ್ಧಿಸಿದರೆ ಅನಾಯಾಸವಾಗಿ ಗೆಲುವು ಸಾದಿಸಬಹುದೆಂಬ ಲೆಕ್ಕಾಚಾರ ಒಂದು ಕಡೆಯಾದರೆ ಜೆಡಿಎಸ್ ತಮ್ಮ ಮಾತಿಗೆ ಮನ್ನಣೆ ನೀಡದಿದ್ದರೆ ಬಿಜೆಪಿಯಿಂದ ಟಿಕೇಟ್ ಪಡೆದು ಸ್ಪರ್ಧಿಸುವ ಲೆಕ್ಕಾಚಾರವೂ ಅವರದ್ದಾಗಿದೆ. ಜೆಡಿಎಸ್ ಪಕ್ಷದಲ್ಲಿ ಟಿಕೇಟ್‍ಗಾಗಿ ದೊಡ್ಡ ಲಾಭಿಯೇ ನಡೆಯುತ್ತಿದ್ದು, ಅದರಲ್ಲಿ ರಾಜೇಶ್‍ಗೌಡರ ಹೆಸರು ಹೆಚ್ಚು ಕೇಳುಬರುತ್ತಿದೆ ಎನ್ನುವುದು ರಾಜೇಶ್ ವಲಯದ ಅಭಿಮಾನಿಗಳ ಲೆಚ್ಚಾಚಾರ.

ಬಿಜೆಪಿಯ ಲೆಕ್ಕಾಚಾರವೇನು ? :

       ಈ ಕ್ಷೇತ್ರದಲ್ಲಿ ಅಂತಹ ನೆಲಗಟ್ಟನ್ನ ಭದ್ರಪಡಿಸಿಕೊಳ್ಳದ ಬಿಜೆಪಿ ಪಕ್ಷ ಪ್ರಸ್ತತ ರಾಜ್ಯದಲ್ಲಿ ಆಡಳಿತ ಚುಕ್ಕಾಣಿಯನ್ನ ಹಿಡಿದಿರುವ ಕಾರಣ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಲೆಕ್ಕಾಚಾರ ಬಹು ಜೋರಾಗಿದೆ. ಪಕ್ಕದ ಕ್ಷೇತ್ರದ ಶಾಸಕರಾಗಿರುವ ಮಾಧುಸ್ವಾಮಿ ಹಾಲಿ ಸರ್ಕಾರದ ಸಚಿವರಿದ್ದಾರೆ. ಇವರು ಸತ್ಯನಾರಾಯಣ್‍ರವರ ನಿಧನದ ಅನುಕಂಪದ ಮತಬುಟ್ಟಿಗೆ ಕೈಹಾಕಲು ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್‍ರನ್ನ ಬಿಜೆಪಿಗೆ ಕರೆತಂದರೆ ಅನುಕಂಪದ ಲೆಕ್ಕಾಚಾರ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಿ ಅವರಿಗೂ ಕೂಡ ಬಿಜೆಪಿ ಮೇ ಹಾಕುವ ಪ್ರಯತ್ನದಲ್ಲಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದ ಎಸ್.ಆರ್.ಗೌಡರ ವರ್ಚಸ್ಸು ಗೆಲುವಿನ ಲೆಕ್ಕಾಚಾರದಲ್ಲಿಲ್ಲ ಎಂಬುದು ಪಕ್ಷದ ನಿರ್ಧಾರದಂತಿದೆ.

       ಹಾಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮಂಜುನಾಥ್ ಹಿಂದೊಮ್ಮೆ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ನೆಲಗಟ್ಟನ್ನ ಭದ್ರಪಡಿಸಿಕೊಳ್ಳು ಪ್ರಯತ್ನಪಟ್ಟಿದ್ದರು ಅದು ಸಫಲವಾಗಿಲ್ಲ. ಇದೀಗ ಉಪಸಮರದ ಹುರಿಯಾಳಾಗಿ ಅಖಾಡಕ್ಕಿಳಿಯುವ ಹುಮ್ಮಸ್ಸಿನಲ್ಲಿ ಕ್ಷೇತ್ರದ ಪ್ರಭಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಬಿಜೆಪಿಯ ಲೆಕ್ಕಾಚಾರವೇ ಬೇರೆಯಿದೆ ಎಂಬುದು ತಿಳಿದುಬರುತ್ತಿದೆ. ಅತ್ಯಂತ ಪ್ರಭಾಶಾಲಿ ಮತ್ತು ಆ ಕ್ಷೇತ್ರದಲ್ಲಿ ಹೆಚ್ಚು ಸ್ವಾಜಾತಿಯ ಬೆಂಬಲವುಳ್ಳ ಪ್ರಬಲ ವ್ಯಕ್ತಿಯನ್ನ ಕಣಕ್ಕಿಳಿಸಿದರೆ. ಬಿಜೆಪಿಯ ಸೌಧಕಟ್ಟಬಹುದೆಂಬ ಲೆಕ್ಕಾಚಾರವನ್ನ ರಾಜ್ಯ ವರಿಷ್ಠರು ಚರ್ಚೆ ಮಾಡುತ್ತಿದ್ದಾರೆ. ಅಂತಹ ಚರ್ಚೆಯ ಪ್ರಬಲ ನಾಯಕರಾಗಿ ರಾಜ್ಯ ಬಿಜೆಪಿಯ ವರಿಷ್ಠರ ಮಾತುಗಳಲ್ಲಿ ಕೇಳಿಬರುತ್ತಿರುವ ಹೆಸರು ಡಿ.ಟಿ.ಶ್ರೀನಿವಾಸ್.

       ಯಾರು ಈ ಶ್ರೀನಿವಾಸ್ :

       ಹಿರಿಯೂರು ಶಾಸಕಿ ಪೂರ್ಣಿಮಾ ಕೃಷ್ಣಪ್ಪನವರ ಪತಿಯಾಗಿದ್ದು, ಯಾದವ ಸಮುದಾಯದ ಪ್ರಬಲ ನಾಯಕನ ಎ.ಕೃಷ್ಣಪ್ಪನವರ ಅಳಿಯ ರಾಜ್ಯ ಯಾದವ ಸಂಘದ ಹಾಲಿ ಅಧ್ಯಕ್ಷರಾಗಿರವು ಡಿ.ಟಿ.ಶ್ರೀನಿವಾಸ್ ಶಿರಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದರಿಂದ ಈ ಕ್ಷೇತ್ರದ ಎರಡನೇ ಪ್ರಬಲ ಸಮುದಾಯವಾದ ಯಾದವ ಜನಾಂಗದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರಿಂದ ಅಹಿಂದ ಮತಗಳು ಶ್ರೀನಿವಾಸ್ ಬೆಂಬಲಕ್ಕೆ ನಿಂತರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪಾಲಿಗೆ ಕಬ್ಬಿಣದ ಕಡಲೆಯಂತಾಗುತ್ತಾರೆ ಎನ್ನುವ ಲೆಕ್ಕಾಚಾರ ಕೆಲವು ಬಿಜೆಯ ವರಿಷ್ಠರ ಲೆಕ್ಕಾಚಾರದಲ್ಲಿ ಇರುವಂತಿದೆ. ಇದು ಈ ಕ್ಷೇತ್ರದ ಹಾಗೂ ಜಿಲ್ಲೆಯ ಯಾದವ ಸಮುದಾಯದ ಮಹಾದಾಸೆಯಾಗಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಅಳೆದು ತೂಗಿರುವ ಕೆಲ ಬಿಜೆಪಿಯ ಪ್ರಬಲ ರಾಜನಾಯಕರು ಡಿ.ಟಿ.ಶ್ರೀನಿವಾಸ್‍ರವರನ್ನ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

      ಈ ಎಲ್ಲಾ ಲೆಕ್ಕಾಚಾರಗಳನ್ನ ಅವಲೋಕಿಸಿದರೆ ಕಾಂಗ್ರೆಸ್‍ನ ಜಯಚಂದ್ರರವರಿಗೆ ಟಾಂಗ್ ಕೊಡಲು ಯಾದವ ಸಮುದಾಯದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಕಣಕ್ಕಿಳಿಸಿದರೆ ಟಿ.ಬಿ.ಜಯಚಂದ್ರರವರ ನಿದ್ದೆಗೆಡುತ್ತದೆ. ಜಯಚಂದ್ರ ಗೆಲುವಿಗೆ ಆಂತರಿಕವಾಗಿ ಮತ್ತು ಪರೋಕ್ಷವಾಗಿ ಅನುಮೋದಿಸಿರುವ ಕಲ್ಕೆರೆ ರವಿಕುಮಾರ್ ಟಿಕೇಟ್ ವಂಚಿತರಾದರೆ ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಬಂಡಾಯದ ಕಹಳೆ ಊದಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುಖೇನ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಬಹುದು

(Visited 11 times, 1 visits today)

Related posts

Leave a Comment