ತುಮಕೂರು:


ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವ 100 ಸ್ಮಾರ್ಟ್‍ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ದೇಶದಲ್ಲಿಯೇ 7ನೇ ಶ್ರೇಣಿಯಲ್ಲಿದ್ದು, ಕರ್ನಾಟಕದ 7 ಸ್ಮಾರ್ಟ್‍ಸಿಟಿಗಳ ಪೈಕಿ ಒಂದನೇ ಸ್ಥಾನದಲ್ಲಿದೆ. ಒಟ್ಟು 178 ಕಾಮಗಾರಿಗಳ ಪೈಕಿ 132 ಕಾಮಗಾರಿಗಳನ್ನು ಸುಮಾರು 462 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಗತಿಯ ಹಂತದಲ್ಲಿರುವ 50 ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಗೆ ಸಂಬಂಧಿಸಿದಂತೆ ಕರೆಯಲಾದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗುಂಬ ಮತ್ತು ಚಾಮುಂಡಿ ರಸ್ತೆಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಕಟ್ಟಡ ತೆರವುಗೊಳಿಸಬೇಕಾಗಿರುವುದರಿಂದ, ತುಮಕೂರು ಮಹನಾಗರಪಾಲಿಕೆ ವತಿಯಿಂದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಅಡಚಣೆಗಳ ನಿವಾರಣೆ ಹಾಗೂ ಭೂ-ಸ್ವಾಧೀನದ ಬಗ್ಗೆ ಪಾಲಿಕೆ ವತಿಯಿಂದ ನಿರ್ಣಯ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಅವರಿಗೆ ತಿಳಿಸಲು ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತರಾದ ರೇಣುಕ ಅವರಿಗೆ ಸೂಚಿಸಿದರು.
ಗಾರ್ಡನ್ ರಸ್ತೆ(ದಿಬ್ಬೂರು ಜಂಕ್ಷನ್‍ನಿಂದ ಬಿ.ಹೆಚ್ ರಸ್ತೆ) ಹಾಗೂ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ವರ್ತುಲ ರಸ್ತೆಯಲ್ಲಿರುವ ಕೆಸರುಮಡು ಜಂಕ್ಷನ್‍ನಲ್ಲಿ ಎರಡು ಜಾಗಗಳಲ್ಲಿ ಹಾಗೂ ಮಹೇಂದ್ರ ಶೋರೂಂ ಹತ್ತಿರದ ಒಂದು ಜಾಗದಲ್ಲಿ ಅಗತ್ಯವಿರುವ ಸ್ಥಳದ ಸಮಸ್ಯೆ ಬಗ್ಗೆ ಚರ್ಚಿಸಲಾಗಿ, ಭೂ-ಸ್ವಾಧೀüನದ ಪರಿಹಾರ ಮೊತ್ತ ದೊರೆತಿಲ್ಲವಾದ್ದರಿಂದ ಸಮಸ್ಯೆಯಾಗಿದ್ದು, ಒಂದು ವಾರದೊಳಗಾಗಿ ಜಮೀನು ಮಾಲೀಕರಿಂದ ಭೂಮಿಯನ್ನು ಹಸ್ತಾಂತರಿಸುವ ಸಂಬಂಧ ಸೂಕ್ತ ಕ್ರಮ ಜರುಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ವಿ. ಅಜಯ್ ಅವರಿಗೆ ಸೂಚಿಸಲಾಯಿತು.
ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಠಾನಗೊಂಡಿರುವ ವೆಂಡಿಂಗ್ ಜೋನ್‍ಗಳು ಮುಕ್ತಾಯದ ಹಂತದಲ್ಲಿದ್ದು, ತುಮಕೂರು ಮಹಾನಗರಪಾಲಿಕೆಗೆ ಹಸ್ತಾಂತರಿಸಿಕೊಂಡು ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಮತ್ತು ಪೂರ್ಣಗೊಂಡಿರುವ ವೆಂಡಿಂಗ್ ಜೋನ್‍ಗಳನ್ನು ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟಿಸಲು ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಯಿತು.
ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಕನ್ಸರ್ವೆನ್ಸಿ ಜಾಗವನ್ನು ಬಳಸಿಕೊಳ್ಳುವ ಸಂಬಂಧ ಪಾಲಿಕೆ ವತಿಯಿಂದ ಶುಲ್ಕವನ್ನು ನಿಗಧಿಪಡಿಸಿ ಗುತ್ತಿಗೆ ನೀಡಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಣಯಿಸಲಾಗಿದ್ದು, ಅವಶ್ಯಕತೆ ಇರುವ ರಸ್ತೆಗಳಲ್ಲಿ ಕನ್ಸರ್ವೆನ್ಸಿ ಪಾರ್ಕಿಂಗ್ ಜಾಗಗಳನ್ನು ಬಳಸಿಕೊಳ್ಳಲು ದರಗಳನ್ನು ನಿಗಧಿಪಡಿಸಿ ಒಂದೇ ಪ್ಯಾಕೇಜಿನಂತೆ ಟೆಂಡರ್ ಕರೆಯಲು ಮಾನ್ಯ ಶಾಸಕರು ಸೂಚಿಸಿದರು.
ಸ್ಮಾರ್ಟ್ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳಲ್ಲಿ ಅಂಗಡಿ ಸಾಮಾನುಗಳನ್ನು ಜೋಡಿಸಿಕೊಳ್ಳುವುದರಿಂದ ಪಾದಚಾರಿಗಳಿಗೆ ಆಗುವ ಸಮಸ್ಯೆಗಳನ್ನು ಬಗೆಹರಿಸುವಂತೆ ಪಾಲಿಕೆಯ ಆಯುಕ್ತರಿಗೆ ಸೂಚಿಸಲಾಯಿತು.
ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಸಂಘ-ಸಂಸ್ಥಗೆಳು, ವಿವಿಧ ಕಂಪನಿಗಳಿಂದ ಸಿಎಸ್‍ಆರ್ ಅನುದಾನದಲ್ಲಿ ನಿರ್ವಹಿಸಲು ಹಾಗೂ ವಿವಿಧ ಶಾಲಾ-ಕಾಲೇಜುಗಳೊಂದಿಗೆ ಮಾತನಾಡಿ, ‘ಸ್ಟೂಡೆಂಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ’ ಕಾರ್ಯಕ್ರಮದಡಿ ನಿರ್ವಹಣೆಗೆ ಅವಕಾಶ ಕಲ್ಪಿಸಕೊಡಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಶಾಸಕರು ಸೂಚಿಸಿದರು.
ಪಿಪಿಪಿ ಮಾಧರಿಯಡಿ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುತ್ತಿರುವ ಸೋಲಾರ್ ರೂಫ್‍ಟಾಪ್ ಕಾಮಗಾರಿಯನ್ನು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುವುದು ಸೂಕ್ತವಲ್ಲ. ಕೆಲವೊಂದು ಕಟ್ಟಡಗಳು ಹಳೆಯದಾಗಿದ್ದು, ಸದರಿ ವ್ಯವಸ್ಥೆಯನ್ನು ಅಳವಡಿಸುವುದರಿಂದ ಕಟ್ಟಡದ ಮೇಲ್ಛಾವಣಿಗಳು ಹಾಳಾಗಬಹುದಾಗಿದ್ದು, ಕಟ್ಟಡಗಳ ವಾಸ್ತವಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಕೈಗೊಳ್ಳುವಂತೆ ಮತ್ತು ಸೋಲಾರ್ ರೂಫ್‍ಟಾಪ್ ಅಳವಡಿಸಿರುವ ಕಟ್ಟಡಗಳಲ್ಲಿ ನೀರು ಹರಿದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದಂತಹ ಸಂಸದ ಜಿ.ಎಸ್. ಬಸವಾರಾಜು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಎಂಎಸ್‍ಎಂಇ ವತಿಯಿಂದ ಇನ್‍ಕ್ಯೂಬೇಷನ್ ಸೆಂಟರ್ ಸ್ಥಾಪಿಸುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಬಂದ ನಂತರ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಂಸದರು ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, Sಣuಜeಟಿಣ Soಛಿiಚಿಟ ಖesಠಿoಟಿsibiಣಥಿ ಕಾರ್ಯಕ್ರಮದಡಿ ಉದ್ಯಾನವನ ನಿರ್ವಹಣೆಯನ್ನು ನೀಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದ್ದು, ಸಾಮಾಜಿಕ ಜವಾಬ್ದಾರಿ ತಿಳಿಸಿದಂತಾಗುತ್ತದೆ. ಶಿಕ್ಷಣ ಇಲಾಖೆಯ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

(Visited 10 times, 1 visits today)