ಚಿಕ್ಕನಾಯಕನಹಳ್ಳಿ:


ದೇವಾಲಯ ಕಟ್ಟಡ ಕಾರ್ಯದಲ್ಲಿ ತನು-ಮನ-ಧನ ಎಲ್ಲವನ್ನೂ ಅರ್ಪಿಸುವ ಮೂಲಕ ನಾನು ಮಣ್ಣಿಗೆ ಹೋಗೋವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠಾಧೀಶ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು
ತಾಲೂಕಿನ ಹಂದನಕೆರೆ ಹೋಬಳಿ ಬೇವಿನಹಳ್ಳಿ ಗ್ರಾಮದಲ್ಲಿರುವ ಅಂತರಘಟ್ಟೆ ಕರಿಯಮ್ಮದೇವಿ ದೇವಾಲಯದ ಕಟ್ಟಡ ಕಾಮಗಾರಿಗೆ ರಸೀತಿ ವಿತರಿಸುವ ಕಾರ್ಯಕ್ರಮ ಹಾಗೂ ಎಸೆಸೆಲ್ಸಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಭಾಗವಹಿಸಿ ಮಾತನಾಡುತ್ತಾ, 36 ಹಳ್ಳಿಗಳ ಗ್ರಾಮದೇವತೆ ಜಗನ್ಮಾತೆಯ ಕಾರ್ಯ ಯಾರ್ಯಾರ ಕೈಯಲ್ಲಿ ಕಾರ್ಯ ಮಾಡಿಸುವವಳೋ ಈ ಕ್ಷೇತ್ರ ಎಲ್ಲರ ಸಹಕಾರದಿಂದ ಅಭಿವೃದ್ಧಿ ಆಗಬೇಕು ನಾವು ಸಹ ಕ್ಷೇತ್ರಕ್ಕೆ ಸಂದರ್ಭದಲ್ಲಿ ಸಹಕರಿಸುವ ಮೂಲಕ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು. ತುಮಕೂರು ಜಿಲ್ಲಾ ಪೆÇೀಲಿಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪುರ್ ವಾಡ್ ಇವರು ಮಾತನಾಡುತ್ತಾ ನಾನು ವಿರಕ್ತಮಠದ ಭಕ್ತನಾಗಿದ್ದು ನನ್ನ ನಂಬಿಕೆಗೆ ದೇವರು ಸತ್ಯವಾಗಿದ್ದರೆ ನನ್ನ ಕುಟುಂಬದೊಂದಿಗೆ ಇಲ್ಲಿಗೆ ಆಗಮಿಸಿ ಭಕ್ತಿ ಸಮರ್ಥಿಸಿದ್ದಾನೆ ಅದೇ ರೀತಿ ಅಂತರಘಟ್ಟೆ ಕರಿಯಮ್ಮದೇವಿ ಅಮ್ಮನವರ ನೂತನ ದೇವಾಲಯ ನಿರ್ಮಾಣ ಕಾರ್ಯ ಸಮಿತಿ ಅಮ್ಮಿ ಕೊಂಡಿರುವುದು ಸಂತೋಷದ ವಿಷಯ ಬಹಳ ದಿನದ ನಂತರ ಇಲ್ಲಿನ ದೇವಾಲಯದ ಕಮಿಟಿಯವರು ಹಾಗೂ ಪೂಜಾರರು ಸದ್ಭಕ್ತರು ಎಲ್ಲರೂ ಸೇರಿ ಈ ಈ ಕಾರ್ಯ ಕೈಗಿತ್ತು ಕೊಂಡಿದ್ದೀರಿ ಪೆÇಲೀಸ್ ಇಲಾಖೆ ಬಗ್ಗೆ ಮಾತನಾಡುವುದಿಲ್ಲ ನನ್ನ ವೈಯಕ್ತಿಕವಾಗಿ ಈ ದೇವಾಲಯಕ್ಕೆ ದೇಣಿಗೆ ನೀಡುವ ಮನಸ್ಸು ಮಾಡುತ್ತೇನೆ ಎಂದರು
ದೇವಾಲಯ ಕಮಿಟಿಯ ಕಾರ್ಯದರ್ಶಿ ಶಿವಣ್ಣ ಮಾತನಾಡುತ್ತಾ, ದೇವಾಲಯದ ಆವರಣದಲ್ಲಿ ಸಣ್ಣದೊಂದು ಕಾರ್ಯಕ್ರಮ ಇಂತಹ ಕಾರ್ಯಕ್ರಮಕ್ಕೆ ಜಿಲ್ಲೆಯ ಪೆÇಲೀಸ್ ಅಧೀಕ್ಷಕರು ಬಂದಿರುವುದು ನಮಗೆ ಬಹಳಷ್ಟು ಸಂತಸ ತಂದಿದೆ ಅಲ್ಲದೆ ಇಂತಹ ಕಾರ್ಯಕ್ಕೆ ಉನ್ನತ ಅಧಿಕಾರಿ ಬಂದಿರುವುದು ನೋಡಿದರೆ ತಾಯಿಯ ಕಾರ್ಯ ಅತ್ಯಂತ ಸುಗಮವಾಗಿ ನಡೆಯಲು ಸಾಧ್ಯ ಎನಿಸುತ್ತಿದೆ ಈ ಮೊದಲು ಕಳೆದ 20 ವರ್ಷಗಳಿಂದ ಕೆಲವು ವೈಯಕ್ತಿಕ ಹಿತಾಸಕ್ತಿ ಯಿಂದಾಗಿ ದೇವಾಲಯದ ಕಾರ್ಯ ನಿಂತುಹೋಗಿತ್ತು ಈಗ ಭಕ್ತರು ಕೂಡ ಇಲ್ಲಿ ಬಂದರೆ ನಿಲ್ಲಲು ಸ್ಥಳವಿಲ್ಲ ಎಂದು ದೇವಾಲಯಕ್ಕೆ ಸುಮಾರು ಎಂಟರಿಂದ 10 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡುವ ಕಾರ್ಯಕ್ಕೆ ಕಮಿಟಿಯವರು ಪೂಜಾರರು ಹಾಗೂ ಸದ್ಭಕ್ತರು ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದೇವಾಲಯದ ಕಮಿಟಿ ವತಿಯಿಂದ ಪುಸ್ತಕ ಬ್ಯಾಗು ಸೇರಿದಂತೆ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೇವಿನಹಳ್ಳಿ ಗ್ರಾಮದ ಗ್ರಾಮಸ್ಥರು ಗ್ರಾಮದಲ್ಲಿ ಹಾಗೂ ಗೇಟಿನಲ್ಲಿ ಮದ್ಯಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಇದನ್ನು ನಿಲ್ಲಿಸುವಂತೆ ಪೆÇಲೀಸ್ ಅಧೀಕ್ಷಕರಿಗೆ ಮನವಿ ಮಾಡಿದರು ಮನವಿಗೆ ಸ್ಪಂದಿಸಿದ ಎಸ್ಪಿಯವರು ಸಹಕರಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ದೇವಾಲಯದ ಕಮಿಟಿ ಹಾಗೂ ಪೂಜಾರ ರಾದ ಬಸವರಾಜು ಕೃಷ್ಣಮೂರ್ತಿ ಶಿವಣ್ಣ ಪರಮೇಶ್ವರಯ್ಯ ಮುನಿಸ್ವಾಮಿ ಚಂದ್ರಶೇಖರ ರಾದ್ಯ ಸೋಮಶೇಖರಯ್ಯ ಕೃಷ್ಣಪ್ಪ ಭಾಗವಹಿಸಿದ್ದರು.

(Visited 49 times, 1 visits today)