ತುಮಕೂರು:

       ತುಮಕೂರು ಶೈಕ್ಷಣಿಕ ಜಿಲ್ಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿ 18ನೇ ಸ್ಥಾನ ಪಡೆದುಕೊಂಡಿದೆ ಎಂದು ಡಿಡಿಪಿಐ ಎಂ.ಆರ್. ಕಾಮಾಕ್ಷಿ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಕಳೆದ 2019ರ ಮಾರ್ಚ್ ಮಾಹೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೋಂದಣಿಯಾದ 21126(ಬಾಲಕರು-11253, ಬಾಲಕಿಯರು-9873) ವಿದ್ಯಾರ್ಥಿಗಳ ಪೈಕಿ 16947(ಬಾಲಕರು-8718, ಬಾಲಕಿಯರು-8229) ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ.80.21 ಫಲಿತಾಂಶ ಲಭಿಸಿದೆ. ತೇರ್ಗಡೆಯಾದ ಒಟ್ಟು 16947 ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮದ 9160, ಆಂಗ್ಲ ಮಾಧ್ಯಮದ 7754, ಉರ್ದು ಮಾಧ್ಯಮದ 33 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಶಾಲೆಗಳ 5356, ಅನುದಾನಿತ ಶಾಲೆಗಳ 6594, ಅನುದಾನಿತ ರಹಿತ ಶಾಲೆಗಳ 4997 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2712 ಪರಿಶಿಷ್ಟ ಜಾತಿ, 974 ಪ.ಪಂಗಡ, 1697 ಪ್ರವರ್ಗ-1, 3655 ಪ್ರವರ್ಗ-2ಎ, 1598 ಪ್ರವರ್ಗ-2ಬಿ, 3474 ಪ್ರವರ್ಗ 3ಎ, 2479 ಪ್ರವರ್ಗ 3ಬಿ ಹಾಗೂ 358 ಇತರೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

      ತಾಲ್ಲೂಕುವಾರು ಫಲಿತಾಂಶ :-

      ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದ, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ 23047 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 17522 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ತಾಲ್ಲೂಕುವಾರು ತೇರ್ಗಡೆಯಾದವರ ವಿವರ ಇಂತಿದ್ದು, ಆವರಣದಲ್ಲಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ವಿವರ ನೀಡಲಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು-1902(2463), ಗುಬ್ಬಿ-2559 (3280), ಕುಣಿಗಲ್-2242(3017), ತಿಪಟೂರು-1831(2690), ತುಮಕೂರು-7385(9415), ತುರುವೇಕೆರೆ-1603(2182).

 ಶೇ.100 ಫಲಿತಾಂಶ ಪಡೆದ ಶಾಲೆಗಳು:

      ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ 20 ಸರ್ಕಾರಿ, 2 ಅನುದಾನಿತ ಹಾಗೂ 24 ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು 46 ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ದೊರೆತಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ತಿಪಟೂರು ತಾಲ್ಲೂಕಿನ ಹೊಂಗೆಲಕ್ಷ್ಮಿಕ್ಷೇತ್ರ ಹಾಗೂ ತಡಸೂರು; ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ, ಕಲ್ಲರದಗೆರೆ, ನೇರಳೆಕೆರೆ, ಕೊಂಡ್ಲಿ, ಶಿವಪುರ; ತುಮಕೂರು ನಗರದ ಹನುಮಂತಪುರ; ತುಮಕೂರು ತಾಲ್ಲೂಕಿನ ಬ್ಯಾತ, ದುರ್ಗದಹಳ್ಳಿ; ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು; ಕುಣಿಗಲ್ ತಾಲ್ಲೂಕಿನ ಹಿತ್ತಲಹಳ್ಳಿ ಮಠ, ಇಪ್ಪಾಡಿ, ಡಿ.ಹೊಸಹಳ್ಳಿ; ತುರುವೇಕೆರೆ ತಾಲ್ಲೂಕಿನ ಹುಲಿಕೆರೆ ಸರ್ಕಾರಿ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿಕೊಂಡಿವೆ.

     ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿ ಹಾಗೂ ತುರುವೇಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತುಮಕೂರು ತಾಲ್ಲೂಕಿನ ದೊಡ್ಡವೀರನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಗೆ ಈ ಬಾರಿ ಶೇ.100ರಷ್ಟು ಫಲಿತಾಂಶ ದೊರೆತಿದೆ.

      ತುಮಕೂರು ತಾಲ್ಲೂಕಿನ ಅನುದಾನಿತ ಶಾಲೆಗಳಾದ ಹಿರೇದೊಡ್ಡವಾಡಿಯ ಉಮಾಪ್ರಗತಿ ಪ್ರೌಢಶಾಲೆ ಹಾಗೂ ಗಂಟಗಾನಹಳ್ಳಿಯ ಬೊಮ್ಮಲಿಂಗೇಶ್ವರ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ.

      ಅಲ್ಲದೆ ಅನುದಾನ ರಹಿತ ಶಾಲೆಗಳಾದ ತುರುವೇಕೆರೆ ತಾಲ್ಲೂಕಿನ ಪ್ರಿಯ ಆಂಗ್ಲಮಾಧ್ಯಮ ಶಾಲೆ, ತಿಪಟೂರು ತಾಲ್ಲೂಕಿನ ಶ್ರೀಬಾಳೆಕಟ್ಟೆ ಸಂಸ್ಥಾನ ಶ್ರೀ ಮಠದ ಪ್ರೌಢಶಾಲೆ, ತುಮಕೂರು ನಗರದ ಶ್ರೀದೇವಿ ವಿದ್ಯಾಮಂದಿರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ವಾಸವಿ ಪ್ರೌಢಶಾಲೆ, ತುರುವೇಕೆರೆ ತಾಲ್ಲೂಕು ಶ್ರೀ ಆದಿ ಚುಂಚನಗಿರಿ ಮಯೂರ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ತಾಲ್ಲೂಕು ಮಲ್ಲಸಂದ್ರದ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ನಗರ ಮರಳೂರು ರಸ್ತೆಯ ಅಂಕಿತ್ ಆಂಗ್ಲ ಮಾಧ್ಯಮ ಶಾಲೆ, ಗೂಳರವೆ ರಸ್ತೆಯ ಸೆಕ್ರೇಡ್ ಹಾರ್ಟ್ ಶಾಲೆ, ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್‍ನ ಶ್ರೀಮದ್ ರಂಭಾಪುರಿ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ತಾಲ್ಲೂಕು ಕುಣಿಗಲ್ ರಸ್ತೆಯ ವರಿನ್ ಇಂಗ್ಲೀಷ್ ಆಂಗ್ಲ ಮಾಧ್ಯಮ ಶಾಲೆ, ಗುಬ್ಬಿ ತಾಲ್ಲೂಕು ಜ್ಞಾನವರ್ಧಕ ವಿದ್ಯಾಮಂದಿರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ನವೋದಯ ಶಾಲೆ, ತುಮಕೂರು ತಾಲ್ಲೂಕು ಎಸ್.ಎಸ್.ಪುರಂ ಸೆಕ್ರೇಡ್ ಹಾರ್ಟ್ ಶಾಲೆ, ಗುಬ್ಬಿ ತಾಲ್ಲೂಕು ಮಾರುತಿ ನಗರದ ಶುಭೋದಯ ಬಾಲಕಿಯರ ಪ್ರೌಢಶಾಲೆ, ಬಾಗೂರು ಗೇಟ್ ಶ್ರೀ ಗುರುಶ್ರೀ ಆಂಗ್ಲ ಮಾಧ್ಯಮ ಶಾಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಜಯನಗರ ಬಡಾವಣೆಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ತಾಲ್ಲೂಕಿನ ಕಿಡ್ಸ್ ಇಂಟರ್‍ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕುಣಿಗಲ್ ತಾಲ್ಲೂಕು ಕೆಹೆಚ್‍ಬಿ ಕಾಲೋನಿಯ ಸರ್ವೋದಯ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ನಗರ ರಿಂಗ್ ರಸ್ತೆಯ ಶ್ರೀ ಡಿಎಟಿ ಪಬ್ಲಿಕ್ ಶಾಲೆ, ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್‍ನ ಬೃಂದಾವನ್ ಆಂಗ್ಲ ಮಾಧ್ಯಮ ಶಾಲೆ, ತುಮಕೂರು ನಗರದ ಶ್ರೀ ಗುರುಕುಲ್ ಆಂಗ್ಲ ಮಾಧ್ಯಮ ಶಾಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೌಶಲ್ಯ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ, ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್‍ನ ಶ್ರೀ ಗುರು ಆಂಗ್ಲ ಮಾಧ್ಯಮ ಶಾಲೆ ಹಾಗೂ ಗುಬ್ಬಿ ತಾಲ್ಲೂಕು ಸಿ.ನಂದಿಹಳ್ಳಿ ಗೋಮ್ಜ್ ಆಂಗ್ಲ ಮಾಧ್ಯಮ ಶಾಲೆಗಳು ಶೇ. 100ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.

ಟಾಪ್ 10 ವಿದ್ಯಾರ್ಥಿಗಳು:-

      ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 625 ಗರಿಷ್ಠ ಅಂಕಗಳಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ 10 ವಿದ್ಯಾರ್ಥಿಗಳು ಟಾಪ್ 10 ಸ್ಥಾನ ಗಳಿಸಿಕೊಂಡಿದ್ದು, ವಿವರ ಇಂತಿದೆ.

      ನಗರದ ಶ್ರೀ ಸಿದ್ಧಗಂಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿ.ಹರ್ಷಿತ್ (624 ಅಂಕ), ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿ.ಎಂ.ಶರಧಿ (622), ತುಮಕೂರಿನ ಡಾನ್ ಬಾಸ್ಕೋ ಶಾಲೆಯ ಸಂದೀಪ್ ಎನ್.ಉತ್ತರಾಕರ್ (621), ಸರಸ್ವತಿ ಪುರಂನ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಎನ್.ಅನಘ (619), ಗುಬ್ಬಿ ತಾಲ್ಲೂಕಿನ ಜ್ಞಾನ ವರ್ಧಕ ವಿದ್ಯಾ ಮಂದಿರದ ಜಿ.ಪಿ. ಸಚಿನ್ (619), ತುಮಕೂರಿನ ಚೇತನ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿನಿ ಜಿ.ವರ್ಷ (618), ಡಾಫೋಡಿಲ್ಸ್ ಸ್ಕೂಲ್ ಫಾರ್ ಎಕ್ಸ್‍ಲೆನ್ಸ್ ಶಾಲೆಯ ಎಸ್. ಯಶ್ವಂತ್ (618), ಗುಬ್ಬಿ ತಾಲ್ಲೂಕು ಶುಭೋದಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಪಿ.ಭೂಮಿಕ (617), ತುಮಕೂರು ತಾಲ್ಲೂಕು ಕ್ಯಾತ್ಸಂದ್ರದ ಸುಮತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಸ್.ಶ್ರೀಲಕ್ಷ್ಮಿ(617) ಹಾಗೂ ಎಸ್.ಎಸ್.ಪುರಂನ ಮಾರುತಿ ವಿದ್ಯಾಕೇಂದ್ರ ಶಾಲೆಯ ವಿದ್ಯಾರ್ಥಿನಿ ಶರಣ್ಯಭಟ್ (617).
 

(Visited 136 times, 1 visits today)