ಕೊರಟಗೆರೆ


ಪಟ್ಟಣದಲ್ಲಿ ನ.27ರಂದು ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ವತಿಯಿಂದ ಗಾಯಕಿ ಡಾ.ಶಮಿತಾ ಮಲ್ಮಾಡ್ ರವರ ಸಂಗೀತ ರಸ ಸಂಜೆ ಕಾರ್ಯಕ್ರದಲ್ಲಿ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್ ರವರ ದ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿರುವುದಾಗಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷ ನಗುತರಂಗನಾಥ್ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಅಖಿಲ ಕರ್ನಾಟಕ ಡಾ.ಜಿ.;ಪರಮೇಶ್ವರ್ ಯುವ ಸೈನ್ಯ ವತಿಯಿಂದ ಡಾ.ಪುನೀತ್‍ರಾಜ್ ಕುಮಾರ್ ರವರ ಪುಣ್ಯಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನ.27ರಂದು ಭಾನುವಾರ ಸಂಜೆ 6 ಗಂಟೆಗೆ ಕೊರಟಗೆರೆ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಗಾಯಕಿ ಡಾ.ಶಮಿತಾಮಲ್ಮಾಡ್ ರವರ ತಂಡದಿಂದ ಲೈವ್ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದ ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಗಟೆರೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಮೇಲೆ ಸಂಗೀತ ನಿರ್ದೇಶಕ ರಾಜ ಮೌರ್ಯ ರಚಿಸಿದ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್ ರವರ ದ್ವನಿಸುರುಳಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು ಈ ದ್ವನಿಸುರುಳಿ ಕಾರ್ಯಕ್ರಮಕ್ಕೆ ಸಾಲುಮರದ ತಿಮ್ಮಕ್ಕ, ಕುಣಿಗಲ್ ಬಿದನಗೆರೆ ಶನಿಮಹಾತ್ಮ ಹಾಗೂ ವಿಶ್ವವಿಖ್ಯಾತ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಪೀಠಾಅಧ್ಯಕ್ಷ ಶ್ರೀ ಧನುಜಯ್‍ಸ್ವಾಮಿ, ರೇಮೊ ಚಲನಚಿತ್ರ ನಿರ್ದೆಶಕ ಪವನ್‍ಒಡೆಯರ್, ಚಲನ ಚಿತ್ರ ನಟರಾದ ಪ್ರಜ್ವಲ್ ದೇವರಾಜು, ನಟ ಶ್ರೀನಗರಕಿಟ್ಟಿ, ನಿರ್ಮಾಪಕ ಉಮಾಪತಿ, ರೇಮೊ ಚಿತ್ರ ತಂಡ ಸೇರಿದಂತೆ ಇನ್ನಿತರರು ಭಾಗವಹಿಸಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ.ಪಂ. ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಾಜಿ ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಕವಿತಾ, ಲಕ್ಷ್ಮೀದೇಮ್ಮ, ಮುಖಂಡರುಗಳಾದ ಅರವಿಂದ್, ರಂಗನಾಥ್, ಈಶಪ್ರಸಾದ್, ಜಯರಾಮಯ್ಯ, ರಾಘವೇಂದ್ರ, ಕಾರ್ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

(Visited 4 times, 1 visits today)