ತುಮಕೂರು


ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಶ್ರೀ ಸಿದ್ಧಾರ್ಥ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‍ಎಸ್‍ಐಟಿ ಕ್ಯಾಂಪಸ್‍ನ ರೈಸ್ ಸೆಂಟರ್ ಆಫ್ ಎಕ್ಸಲೈನ್ಸ್ ಮತ್ತು ಎಂಐಟಿ ಸ್ಕ್ವೇರ್ ಗ್ರೂಪ್‍ಗಳ ಸಹಯೋಗದೊಂದಿಗೆ ಪಿಂಕ್ ಫಿಟ್ ವಾಕ್-2022 ಮಾಸಿಕ ಸ್ತನ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.
ನಗರದ ಭಾರತೀಯ ವೈದ್ಯಕೀಯ ಸಂಘ ಕಚೇರಿ ಮುಂಭಾಗ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಸಾಹೇ ವಿಶ್ವ ವಿದ್ಯಾಲಯದ ರಿಜಿಸ್ಟಾರ್ ಡಾ. ಎಂ ಝಡ್ ಕುರಿಯನ್ ಚಾಲನೆ ನೀಡಿದರು.
ಆಧುನಿಕ ಜೀವನ ಶೈಲಿಯು ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂದಿನ ದಿನದಲ್ಲಿ ಮಹಿಳೆಯರು ಸ್ತನಕ್ಯಾನ್ಸರ್‍ಗೆ ಒಳಗಾಗುತಿದ್ದಾರೆ. ಇತ್ತಿಚಿನ ದಿನದಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಈ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸ್ತನ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವನ್ನು ಅನುಸರಿಸುವಂತೆ ಸಾರ್ವಜನಿಕರ ಗಮನ ಸೆಳೆದರು.
ಉಚಿತ ತಪಾಸಣೆ : ಮಹಿಳೆಯರಿಗಾಗಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ಸಂಬಂಧಿ ಉಚಿತ ತಪಾಸಣೆಯನ್ನು ಏರ್ಪಡಿಸಲಾಗಿತ್ತು.
ಜಾಥಾದ ನಂತರ ನಡೆದ ಸಂವಾದದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಮತ್ತು ಡಾ.ದಿವ್ಯಾ ಅವರು ಕ್ಯಾನ್ಸರ್ ತಪಾಸಣೆಯ ಮಹತ್ವದ ಕುರಿತು ಮಾತನಾಡಿದರು.
ಜಾಥಾದಲ್ಲಿ ಯುಕೆಯ ಎಂಐಟಿ ಸೆಕ್ಟರ್‍ನ ಡಾ.ಮಿಥಿಲೇಶ್ ಸತ್ಯನಾರಾಯಣನ್ ಮತ್ತು ಬೆಂಗಳೂರಿನ ಎಂಐಟಿ ಸೆಕ್ಟರ್‍ನ ಎಂ.ಎಸ್.ಭುವನೇಶ್ವರಿ ಲೋಗನಾಥನ್, ಸಿದ್ಧಾರ್ಥ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ, ಶ್ರೀ ಸಿದ್ಧಾರ್ಥ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

(Visited 9 times, 1 visits today)