ಗುಬ್ಬಿ


ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರರ ಕಾರ್ತಿಕ ಮಾಸದ ಹೂವಿನ ವಾಹನವು ವಿಜೃಂಭಣೆಯಿಂದ ನೆಡೆಯಲು ಹಿಂದಿನಿಂದಲೂ 18 ಕೋಮಿನ ಮುಖಂಡರುಗಳ ಸಭೆ ಕರೆದು ರಾತ್ರಿಯೆಲ್ಲಾ ನೆಡೆಯುವ ಈ ಉತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ವರೆಗೆ ಯಾವ ಯಾವ ರೀತಿ ಸೌಲಭ್ಯಗಳನ್ನು ಒದಗಿಸಲು ಹದಿನೆಂಟು ಕೋಮಿನ ಮುಖಂಡರನ್ನು ಸಭೆ ಕರೆದು ಚರ್ಚಿಸುತ್ತಿದ್ದು ಹಿಂದಿನಿಂದ ಬಂದ ಪದ್ಧತಿ ಕಳೆದ 2ವರ್ಷಗಳಿಂದ ದೇವಾಲಯಕ್ಕೆ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿರುವ ಹೆಚ್ ಜೆ ಶ್ವೇತಾರವರ ಏಕ ಚಕ್ರಾಧಿಪತ್ಯದ ನಿರ್ಣಯದಿಂದ ಮುಖಂಡರುಗಳು ಬೇಸತ್ತಿದ್ದಾರೆ.
ಈ ಬಗ್ಗೆ ದೇವಾಲಯದ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ವಿ ಅಜಯ್ ರವರಿಗೆ ಸಾಕಷ್ಟು ಬಾರಿ ದೇವಾಲಯದ ನ್ಯೂನ್ಯತೆ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿದ ಕಾರಣ ಗುಬ್ಬಿಯ ಹದಿನೆಂಟು ಕೋಮಿನ ಜನ ಇಂದು ಕಿಡಿಕಾರಲು ಕಾರಣವಾಗಿದೆ
ಗುಬ್ಬಿ ಪ್ರವಾಸಿ ಮಂದಿರದಲ್ಲಿ ಹದಿನೆಂಟು ಕೋಮಿನ ಮುಖಂಡರ ಗಳು ಸಭೆ ಸೇರಿ ಪತ್ರಿಕಾಗೋಷ್ಠಿಯನ್ನು ನಡೆಸಿ ಉಪವಿಭಾಗಾಧಿಕಾರಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು ಕಾರಣ ಹೂವಿನ ಉತ್ಸವದ ಪೂರ್ವಭಾವಿ ಸಭೆಯನ್ನು ಕರೆಯದೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಕ್ಷೇತ್ರದ ಸಂಸದ ಹಾಗೂ ಶಾಸಕರ ಹೆಸರುಗಳನ್ನು ಕೈಬಿಟ್ಟು ಸುಮಾರು 2ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಮುದ್ರಿಸಿದ್ದು ಈ ಬಗ್ಗೆ ಮುಖಂಡರುಗಳು ಪ್ರಶ್ನಿಸಿದಾಗ ಬೇಜವಾಬ್ದಾರಿ ಉತ್ತರವನ್ನು ನೀಡಿರುತ್ತಾರೆ ಎಂದು ದೂರಿದರು
ದೇವಸ್ಥಾನವು ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದರೂ ಹದಿನೆಂಟು ಕೋಮಿನ ಜನಾಂಗದ ಸಹಕಾರವಿಲ್ಲದೆ ಯಾವುದೇ ಉತ್ಸವಗಳನ್ನು ಇದುವರೆಗೂ ನೆಡೆಸಿಕೊಂಡು ಬಂದಿರುವುದಿಲ್ಲ ಇಲ್ಲಿಯವರೆಗೆ ಯಾವುದೇ ತಾರತಮ್ಯವಿಲ್ಲದೆ ಒಗ್ಗಟ್ಟಾಗಿ ಆಯಾಯ ಜನಾಂಗದವರು ಅವರಿಗೆ ವಹಿಸಿದ ಕಾರ್ಯಗಳನ್ನು ಸಂಪ್ರದಾಯ ಭರಿತವಾಗಿ ವಂಶಪಾರಂಪರೆಯಾಗಿ ನಡೆಸಿಕೊಂಡು ಬಂದಿರುತ್ತಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರೇಣುಕಾ ಪ್ರಸಾದ್ ತಮ್ಮ ಅಭಿಪ್ರಾಯದಲ್ಲಿ ತಿಳಿಸದರು
ಈಗಾಗಲೇ 2ಸಾವಿರ ಕರಪತ್ರಗಳು ಮುದ್ರಿತವಾಗಿದ್ದು ಈ ಕರಪತ್ರದಲ್ಲಿ ಅಧಿಕಾರಿಗಳ ಹೆಸರಿದ್ದು ಇದು ದೇವಾಲಯದಿಂದ ಮುದ್ರಿತವಾದ ಕರಪತ್ರವಲ್ಲ ಎಂದು ಉಪವಿಭಾಗಾಧಿಕಾರಿಗಳು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿರುವುದು ಸರಿಯಲ್ಲ ಹಾಗೂ ಇವೆಲ್ಲಾ ಅವ್ಯವಸ್ಥೆಗೆ ದೇವಾಲಯದ ಆಡಳಿತಾಧಿಕಾರಿಗಳು ಆದ ಉಪವಿಭಾಗಾಧಿಕಾರಿಗಳೇ ನೇರ ಹೊಣೆಗಾರರು ಎಂದು ಕೋಮಿನ ಯಜಮಾನ ಕುಮಾರ್ ಆರೋಪಿಸಿದರು
ಎರಡು ವರ್ಷಗಳಿಂದ ಈಗಾಗಲೇ 3 ಜಾತ್ರೆಗಳನ್ನು ನಿರ್ವಹಿಸಿದರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ದೇವಾಲಯದ ಸಿಬ್ಬಂದಿ ಹಾಗೂ ಭಕ್ತರ ನಡುವೆ ಸಾಮರಸ್ಯ ಕಾಪಾಡದ ಕಾರ್ಯನಿರ್ವಾಹಣಾಧಿಕಾರಿಯ ಕಾರ್ಯ ವೈಫಲ್ಯ ವನ್ನು ಸರಿಪಡಿಸದಿದ್ದರೆ ಮುಂದಿನ ಸೋಮವಾರ 18 ಕೋಮಿನ ಜನ ಸಾವಿರಾರು ಸಂಖ್ಯೆಯಲ್ಲಿ ತಾಲೂಕು ಕಚೇರಿ ಮುಂದೆ ಮುಷ್ಕರ ಮಾಡಬೇಕಾದೀತು ಎಂದು ಎಚ್ಚರಿಕೆ ಯನ್ನು ಕೋಮಿನ ಪಟೇಲ ಕೆಂಪೇಗೌಡ ನೀಡಿದರು ಈ ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿಯ
ಸದಸ್ಯರಾದ ರೇಣುಕಪ್ರಸಾದ್ ಮತ್ತು ನಾಮಿನಿ ಸದಸ್ಯರಾದ ಬಸವರಾಜು,ಪ್ರಕಾಶ್
ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ಬಲರಾಮಯ್ಯ ಪಣಗಾರ್ ನಿಜಲಿಂಗಪ್ಪ,ಸೋಮಶೇಖರಯ್ಯ ಅರ್ಜುನ ಅನಿಲ್ ಅಗ್ನಿ ವಂಶದ ಸಿದ್ದರಾಜು ಹಾಗೂಇತರರು ಭಾಗವಹಿಸಿದ್ದರು.

(Visited 3 times, 1 visits today)