ಸ್ಮಾಟ್‍ಸಿಟಿ ಕಾಮಗಾರಿ : ಕಾಮಗಾರಿ ಪ್ರಗತಿ ಸಾಧಿಸದ 11 ಗುತ್ತಿಗೆದಾರರಿಗೆ 1.53ಕೋಟಿ ರೂ.ಗಳ ದಂಡ

 ತುಮಕೂರು:

      ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವ 11 ಗುತ್ತಿಗೆದಾರರಿಗೆ ಒಟ್ಟು 1.53 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.

      ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಕಾಮಗಾರಿ ಪ್ರಗತಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಗೆ ಈ ದಂಡವನ್ನು ವಿಧಿಸಲಾಗಿದೆ.
ಅಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ನಿಗಧಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಆದೇಶ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

      ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ 11 ಗುತ್ತಿಗೆದಾರರಿಗೆ ದಂಡವನ್ನು ವಿಧಿಸಲಾಗಿದ್ದು, ವಿವರ ಇಂತಿದೆ. ತುಮಕೂರು ನಗರದ ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಒ/s ಖಒಓ ಇನ್‍ಫ್ರಾಸ್ಟ್ರಕ್ಚರ್ಸ್‍ಗೆ 50,41,630 ರೂ.; ಅಶೋಕ ರಸ್ತೆ ಅಭಿವೃದ್ಧಿಯ ಕಾಮಗಾರಿ ಕೈಗೊಂಡಿರುವ ಸಿದ್ಧಾರ್ಥ ಸಿವಿಲ್ ವಕ್ರ್ಸ್ ಪ್ರೈ.ಲಿ.ಗೆ 26,97,720 ರೂ.; ಅಮಾನಿಕೆರೆ ಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿ- ಒ/s ಖಒಓ ಇನ್‍ಫ್ರಾಸ್ಟ್ರಕ್ಚರ್ಸ್‍ಗೆ 23,42,262 ರೂ.; ಡಾ.ರಾಧಕೃಷ್ಣ ರಸ್ತೆ ಅಭಿವೃದ್ಧಿ-ಶ್ರೀ ಶ್ರೀನಿವಾಸ ಕನ್‍ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ 16,42,295 ರೂ.; ಭಗವಾನ್ ಮಹಾವೀರ್ ರಸ್ತೆ ಅಭಿವೃದ್ಧಿ-ಶ್ರೀ ಸುಧಾಕರ ಪೆರಿಟಾಲ ಅವರಿಗೆ 10,31,460 ರೂ.; ಮಹಿಳಾ ಥೀಮ್ ಪಾರ್ಕ್- ಒ/s ರಾಜೇಗೌಡ & ಕೋ.ಗೆ 6,77,377 ರೂ.; ಟ್ರಾಮಾ ಸೆಂಟರ್- ಕೆ.ಬಿ.ಆರ್.ಇನ್‍ಫ್ರಾಟೆಕ್ ಲಿ.ಗೆ 5,28,000 ರೂ.; ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿ-ಶ್ರೀ ಶ್ರೀನಿವಾಸ ಕನ್‍ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ 5,65,119 ರೂ.; ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಲು ಆಲದ ಮರಗಳ ವಿಶಾಲ ರಾಜಮಾರ್ಗದ ನಿರ್ಮಾಣ ಮತ್ತು ಅಭಿವೃದ್ಧಿ-ಒ/s ಂ1 ಕನ್ಸ್‍ಟ್ರಕ್ಷನ್‍ಗೆ 4,19,625 ರೂ.; 03 ಪಾರ್ಕ್‍ಗಳ ಅಭಿವೃದ್ಧಿ- ಒ/s ಸಾಯಿತ್ರಿಷ ಇನ್‍ಫ್ರಾ ಇಂಜಿನಿಯರ್ಸ್ ಇವರಿಗೆ 1,26,200 ರೂ.; ಮಹಾತ್ಮ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿ (ಪಿಎಂಸಿ ವತಿಯಿಂದ ನಕ್ಷೆಗಳ ವಿಳಂಬಕ್ಕಾಗಿ)-ಬೆಂಗಳೂರಿನ CADD Forum ಗೆ 3,08,060 ರೂ. ಸೇರಿದಂತೆ ಒಟ್ಟು 1,53,80,748 ರೂ.ಗಳ ದಂಡ ವಿಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 13 times, 1 visits today)

Related posts

Leave a Comment