ತುಮಕೂರು


ಸರಕಾರ ಗ್ರಾಮಠಾಣಾ ಜಾಗವನ್ನು ವ್ಯಕ್ತಿಯೊಬ್ವರಿಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ಪತ್ತೆ ಹಚ್ಚಿ, ಆತನ ಹೆರಿಗೆ ಆಗಿರುವ ಖಾತೆಯನ್ನು ತಡೆ ಹಿಡಿದ ನಂತರವೂ ನಗರಪಾಲಿಕೆಯ ಅಧಿಕಾರಿಗಳು ಅಕ್ರಮ ಖಾತೆದಾರನ ಹೆಸರಿಗೆ ಸದರಿ ಜಮೀನನಲ್ಲಿ ಮನೆ ನಿರ್ಮಾಣ ಕ್ಕೆ ಪರವಾನಗಿ ನೀಡಲು ಹೊರಟಿರುವ ಪಾಲಿಕೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಗುರುವಾರ ಪಾಲಿಕೆಯ ವಾರ್ಡು ನಂಬರ್ 2 ಕ್ಕೆ ಸೇರಿದ ಅಂತರಸನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಅಂತರಸನಹಳ್ಳಿ ಗ್ರಾಮದ ಸರ್ವೆ ನಂಬರ್ ನಲ್ಲಿರುವ ಸುಮಾರು 1.10 ಎಕರೆ ಜಮೀನನ್ನು ದಾವಣಗೆರೆ ಮೂಲದ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಖಾತೆ ಮಾಡಲಾಗಿತ್ತು.ಸದರಿ ಜಾಗಕ್ಕೆ ಜಮೀನಿನ ಮಾಲೀಕರೆಂದು ಹೇಳುತ್ತಿರುವ ವ್ಯಕ್ತಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದರು. ಈ ವಿಚಾರವಾಗಿ 2005 ರಿಂದ 2013 ರವರೆಗು ಲೋಕಾಯುಕ್ತದಲ್ಲಿ ತನಿಖೆ ನಡೆದು,ಸದರಿ ವ್ಯಕ್ತಿಯ ಹೆಸರಿಗೆ ಮಾಡಿರುವ ಖಾತೆ ಅಕ್ರಮ ಎಂದು ಸಾಭೀತಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೀಡಿದ ದೂರಿನ ಅನ್ವಯ 2019 ರಲ್ಲಿ ಅಂದಿನ ನಗರಪಾಲಿಕೆ ಆಯುಕ್ತ ಭೂ ಬಾಲನ್ ಎರಡು ಕಡೆಯ ದಾಖಲೆಗಳನ್ನು ಪರಿಶೀಲಿಸಿ, ನಿರ್ಮಾಣ ವಾಗಿದ್ದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿ,ಸದರಿ ಜಮೀನನ ಖಾತೆಯನ್ನು ಅಮಾನತ್ತಿನಲ್ಲಿ ಇಟ್ಟಿದ್ದರು.
ವಿವಾದಿತ ಜಾಗದಲ್ಲಿ ನಿರ್ಮಾಣವಾಗಿದ್ದ ಕಾಂಪೌಂಡ್ ತೆರವಾದ ನಂತರ ಗ್ರಾಮಸ್ಥರು ವಿವಾದಿತ ಜಾಗಕ್ಕೆ ಮಾಡಿದ್ದ ಅಕ್ರಮ ಖಾತೆಯನ್ನು ರದ್ದುಗೊಳಿಸಿ, ಜಾಗವನ್ನು ಶಾಲಾ,ಕಾಲೇಜು,ಆಸ್ಪತ್ರೆ ಕಟ್ಟಲು ಮೀಸಲಿಡುವಂತೆ ಮನವಿ ಮಾಡಿದ್ದರು.ಆದರೆ ಗ್ರಾಮಸ್ಥರ ಮನವಿಗೆ ಸ್ಪಂದಿಸದ ಪಾಲಿಕೆಯ ಅಧಿಕಾರಿಗಳು ಅಮಾನತ್ತಿನಲ್ಲಿದ್ದ ಖಾತೆಯನ್ನು ಚಾಲ್ತಿಗೊಳಿಸಿ, ಸದರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ಹೊರಟಿದ್ದಾರೆ ಎಂಬುದು ಅಂತರಸನಹಳ್ಳಿ ಗ್ರಾಮಸ್ಥರ ಆರೋಪವಾಗಿದೆ.
ಈ ನಿಟ್ಟಿನಲ್ಲಿ ಇಂದು ವಿವಾದಿತ ಜಾಗದಲ್ಲಿ ಸಭೆ ನಡೆಸಿದ ಗ್ರಾಮಸ್ಥರು ವಿವಾದಿತ ಜಾಗ ಸರಕಾರಿ ಹಳ್ಳವಾಗಿದೆ.ಈ ಜಾಗವನ್ನು ಜನರು ಜಿಲ್ಲಾಡಳಿತ ಮತ್ತು ನಗರಪಾಲಿಕೆ ಕೂಡಲೇ ಇಸ್ಮಾಯಿಲ್ ಎಂಬುವವರ ಹೆರಿಗೆ ಆಗಿರುವ ಖಾತೆಯನ್ನು ರದ್ದುಗೊಳಿಸಿ,ಸದರಿ ಜಾಗದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಲು ಅನುಮತಿ ನೀಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

(Visited 3 times, 1 visits today)