ತುಮಕೂರು


ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವ ಹಾಗೂ ಮೂಲಭೂತ ಹಕ್ಕುಗಳ ಜನಜಾಗೃತಿ ಕುರಿತು ಟೌನ್ ಹಾಲ್ ನಲ್ಲಿ ಕೆಆರ್ ಎಸ್ ಪಕ್ಷದಿಂದ ಜಾಗೃತಿ ಮೂಡಿಸಲಾಯಿತು.
ಡಾ. ಬಿ. ಆರ್ . ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕೆಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ, ಒಕ್ಕೂಟ ಸರ್ಕಾರದ ವ್ಯವಸ್ಥೆಯಿಂದ ಕರ್ನಾಟಕಕ್ಕೆ ಅನೇಕ ತಾರತಮ್ಯ ಅನ್ಯಾಯವಾಗುತ್ತಿದ್ದು, ಅವುಗಳನ್ನು ಪ್ರಶ್ನಿಸಿ ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಬಹುದೊಡ್ಡ ಅನ್ಯಾಯವಾಗಿದ್ದು, 14ನೇ ಹಣಕಾಸು ಆಯೋಗದಲ್ಲಿ ಶೇ 4.71 ಪಾಲು ಬರುತ್ತಿತ್ತು, ಆದರೆ, 15ನೇ ಹಣಕಾಸು ಆಯೋಗದಲ್ಲಿ ಶೇ.3.67 ಇರುವುದು ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ ಉತ್ತರ ಭಾರತದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಮೂಲಕ ಪ್ರಾದೇಶಿಕತೆಗೆ ದ್ರೋಹ ಬಗೆದಿದೆ. ಇಡೀ ದೇಶದಲ್ಲೇ ಕೇಂದ್ರಕ್ಕೆ ತೆರಿಗೆ ಕಟ್ಟುವ 2ನೇ ರಾಜ್ಯವಾದ ಕರ್ನಾಟಕಕ್ಕೆ ಎಲ್ಲ ರಾಜ್ಯಕ್ಕಿಂತಲೂ ಕಡಿಮೆ ಅನುದಾನ ನೀಡುತ್ತಿದೆ. ಆದ್ದರಿಂದ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಅನ್ಯಾಯದ ವಿರುದ್ಧ ಹೋರಾಡಲು ಜತೆಯಾಗಿ. ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯು ಸಕಾಲಕ್ಕೆ ರಾಜ್ಯಕ್ಕೆ ಮರುಪಾವತಿಯಾಗುತ್ತಿಲ್ಲ. ಇದರಿಂದ ಪ್ರತಿ ವರ್ಷವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಜತೆಗೆ ರಾಜ್ಯದ ಸಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೂ ಏಕರೀತಿಯ ಕಾನೂನು ಪಾಲನೆಯಾಗುತ್ತಿಲ್ಲ ಎಂದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣವು ಆಗ 2022ರ ಆಗಸ್ಟ್ ನಲ್ಲಿ ಶೇ.8.3 ರಷ್ಟು ಹೆಚ್ಚಳವಾಗಿದ್ದು, 39 ಕೋಟಿಯಷ್ಟು ಜನರು ನಿರುದ್ಯೋಗಕ್ಕೆ ಒಳಗಾಗಿದ್ದಾರೆ. ಅದರಲ್ಲಿ ಕರ್ನಾಟಕವು ಹೊರತಾಗಿಲ್ಲ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ 18 ವರ್ಷ ಮೇಲ್ಪಟ್ಟ ಎಲ್ಲ ಯುವಜನರಿಗೆ ಉದ್ಯೋಗ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಆದರೆ, ಒಕ್ಕೂಟ ಸರ್ಕಾರವು ಯುವಜನರಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದರು
ಕೆಆರ್ ಎಸ್ ಜಿಲ್ಲಾ ಅಧ್ಯಕ್ಷ ಗಜೇಂದ್ರಕುಮಾರ್ ಗೌಡ ಮಾತನಾಡಿ, ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೇಮಕಾತಿಗಳು ಹಾಗೂ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಕನ್ನಡಲ್ಲೂ ನಡೆಯುವಂತೆ ಕಾನೂನು ಜಾರಿ ಹಾಗೂ ಒಕ್ಕೂಟ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆಆರ್ ಎಸ್ ಪಕ್ಷದ,ಜಿಲ್ಲಾ ಕಾರ್ಯದರ್ಶಿ ಹಾಗೂ ಸಿರಾ ವಿಧಾನ ಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಪ್ರದೀಪ್ ಕುಮಾರ್ ದೊಡ್ಡಮುದ್ದೇಗೌಡ, ಸಿರಾ ತಾಲ್ಲೂಕು ಅಧ್ಯಕ್ಷ ನರಸಿಂಹರಾಜು ಸಿ.ಎನ್.ಎನ್, ತುರುವೇಕೆರೆ ಸಂಭಾವ್ಯ ಅಭ್ಯರ್ಥಿ ರಾಮ್ ಪ್ರಸಾದ್,ಕೃಷ್ಣ ಡಿ.ಎಸ್, ಕೊರಟಗೆರೆ ಸಂಭಾವ್ಯ ಅಭ್ಯರ್ಥಿ ರವಿಕುಮಾರ್, ಮಧುಗಿರಿ ಸಂಭಾವ್ಯ ಅಭ್ಯರ್ಥಿ ಜಯಂತ್ ಡಿ.ಸಿ., ಸಿರಾ ತಾಲ್ಲೂಕು ಸದಸ್ಯ ಅನೂಪ್ ಎಸ್.ಆರ್., ಇಮಾಮ್ ವಾಲಿ, ಚಿಕ್ಕನಾಯಕನಹಳ್ಳಿ ಶ್ರೀನಿವಾಸ ಸಬ್ಬೇನಹಳ್ಳಿ, ಪಾವಗಡ ಅಧ್ಯಕ್ಷ ಫಕ್ರುದ್ದೀನ್, ಕಾರ್ಮಿಕ ಘಟಕದ ಅಧ್ಯಕ್ಷ ಪ್ರಭಾಕರ್, ತುಮಕೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುನೀತ್ ಇತರರು ಇದ್ದರು

(Visited 1 times, 1 visits today)