ತುಮಕೂರು


ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು.,25 ಏಪ್ರೀಲ್ 2022 ರಂದು ಮಾನ್ಯ ಸುಪ್ರೀಂ ಕೋರ್ಟ್ 1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ‘ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು’ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು “ರಾಜ್ಯ ಸಚಿವ ಸಂಪುಟ” ಆದೇಶಿಸ ಬೇಕು.
ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠ ಪಡಿಸಬೇಕು. IಅಆS ಮಾರ್ಗದರ್ಶಿ ಸೂಚಿಗಳ ಪ್ರಕಾರ ಇರುವ 6 ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಬೇಕು. .ಪೂರಕ ಪೌಷ್ಠಿಕ ಆಹಾರ,
ರೋಗ ನಿರೋದಕ ಚುಚು ಮದ್ದು. ಆರೋಗ್ಯ ತಪಾಸಣೆ – ಮಾಹಿತಿ ಸೇವೆ. ಶಾಲಾ ಪೂರ್ವ ಶಿಕ್ಷಣ.=ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ (ಮಹಿಳೆಯರಿಗೆ)
ಆದರೆ ಇಂದು ಯೋಜನೇತರ ಕೆಲಸಗಳಾದ ಸರ್ವೆ, ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಮಾತೃವಂದನಾ,ಇಲಾಖೇತರ ಕೆಲಸಗಳಾದ ಚುನಾವಣೆ, ಸರ್ಕಾರದ ಸಾರ್ವಜನಿಕ ಹಬ್ಬಗಳು, ಕಾರ್ಯಕ್ರಮಗಳಲ್ಲಿ ತೊಡಗಿಸುವುದು ಹೆಚ್ಚಾಗುತ್ತಿದೆ. ಸ್ಕೌಟ್ಸ್ –ಗೈಡ್ಸ್ ಕಾರ್ಯಕ್ರಮ, ಕೋಟಿಕಂಠಗಾಯನ, ಮುಖ್ಯ ಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುವಿಕೆ, ಕೆಂಪೇಗೌಡರ ಪ್ರತಿಮೆಯ ಕಾರ್ಯಕ್ರಮಗಳಿಗೆ ಕುಂಬ ಕಲಶ ಗಳನ್ನು ಹೊರಿಸುವ ಕಾರ್ಯಕ್ರಮಗಳಿಗೆ ಮಹಿಳೆಯರು ಎಂದೂ ಪರಿಗಣಿಸದೇ ಉಪಯೋಗಿಸುವುದು ಕೂಡಲೇ ನಿಲ್ಲಬೇಕು.
“ಅಂಗನವಾಡಿ ಕಾರ್ಯಕರ್ತೆ ಒಂದು ಮಗುವನ್ನು ಪ್ರಜೆಯನ್ನಾಗಿ ಮಾಡುವ ಬೆಳಕಿನ ಶಕ್ತಿ” ಆ ಶಕ್ತಿಯನ್ನು ಅನುಚಿತವಾಗಿ ಬಳಸುವುದರ ಮುಖಾಂತರ IಅಆS ನ ಉದ್ದೇಶಕ್ಕೆ ಧಕ್ಕೆ ತರಬಾರದು.
ಅಂಗನವಾಡಿ ಕೇಂದ್ರದ ಕೆಲಸಗಳು ಕೇವಲ ಅಂಕಿ ಅಂಶಗಳಾಗಬಾರದು ಕಾರ್ಯಕರ್ತೆ & ಸಹಾಯಕಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳ ಮತ್ತು ಮಹಿಳೆಯರೊಂದಿಗೆ ಆತ್ಮೀಯತೆಯಿಂದ ಬದ್ಧತೆಯಿಂದ ಬೆರೆಯಲು ಅವಕಾಶ ವಾಗಬೇಕು ಆದ್ದರಿಂದ ಈ ಕೆಳಕಂಡ ಸೂಚನೆಗಳಂತೆ ಕ್ರಮಗಳನ್ನು ಕೈ ಗೊಳ್ಳಬೇಕು. ಎಂದು ಒತ್ತಾಯಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಿ ಸಿಐಟಯು ರಾಜ್ಯದ್ಯಂತ ಪ್ರತಿಭಟನೆ ನಡೆಸಲಿದೆ, ಇದರ ಭಾಗವಾಗಿ ತುಮಕೂರು ನಗರ ದಲ್ಲಿ ಸಹ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಿದೆ.
ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು.
ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ತನಕ ಪೂರ್ವಪ್ರಥಃಮಿಕ ಶಿಕ್ಷಣ ನೀಡಲು ಸಮಯ ನಿಗದಿ ಮಾಡಬೇಕು, ಆ ಸಮಯದಲ್ಲಿ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ಬೇಟಿ ಮಾಡಲು ಅವಕಾಶವಿಲ್ಲ ಎಂಬುದನ್ನು ಖಚಿತ ಪಡಿಸಬೇಕು.
ಇಲ್ಲದಿದ್ದರೆ ಬೆಳಗ್ಗೆನೆ ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಮಾತೃವಂದನಾ ಮತ್ತಿತರ ಕೆಲಸಗಳು ಬಂದರೆ ಕಾರ್ಯಕರ್ತೆ ಪಾಠ ಮಾಡವ ಏಕಾಗ್ರತೆಗೆ ತೊಂದರೆಯಾಗುತ್ತದೆ.
ಮೊಬೈಲ್‍ನಲ್ಲಿ ದಾಖಲಿಸಬೇಕೆಂದರೆ ಹೊಸ ಮೊಬೈಲನ್ನು ಖರೀದಿಸಿ ಕೊಡಬೇಕು. ಈಗಾಗಲೇ 4 ವರ್ಷದ ಈ ಮೊಬೈಲ್‍ಗಳಲ್ಲಿ ಕೆಲಸ ಮಾಡಲು ಸಾದ್ಯವಿಲ್ಲ. ಹಳೇ ಮೊಬೈಲ್‍ನ್ನು ತಗೆದು ಕೊಂಡು ಹೊಸ ಮೊಬೈಲ್‍ನ್ನು ಸರ್ಕಾರ ಕೊಡುವ ತನಕ ಪುಸ್ತಕದಲ್ಲಿ ಬರೆಯುವುದನ್ನು ಮುಂದುವರೆಸ ಬಹುದು.
ಮಕ್ಕಳನ್ನು ಆಕರ್ಷಿಸಲು ಅಂಗನವಾಡಿ ಕೇಂದ್ರಗಳಿಗೆ ಈಗ ನೀಡುತ್ತಿರುವ 12 ಲಕ್ಷ ಅನುದಾನವನ್ನು 20 ಲಕ್ಷಕ್ಕೇರಿಸಿ ಅಂಗನವಾಡಿ ಕಟ್ಟಡಗಳನ್ನು ವ್ಯವಸ್ಥಿತಗೊಳಿಸಬೇಕು.
ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕಗಳು & ಬ್ಯಾಗನ್ನು ಸರ್ಕಾರ ಉಚಿತವಾಗಿ ಒದಗಿಸಬೇಕು.
ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು.
ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು.
1995 ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪಧವೀದರರು ಆಗಿರುವುದರಿಂದ ಅವರಿಗೆ ತರಭೇತಿಯನ್ನು ಕೊಟ್ಟು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ – ಯು.ಕೆ.ಜಿ ಯನ್ನು ಪ್ರಾರಂಭಿಸಬೇಕು.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಪ್ರಾರಂಭವಾಗುತ್ತಿರುವ ಎಲ್.ಕೆ.ಜಿ ಯು.ಕೆ.ಜಿ ಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೂಡಲೇ ವಹಿಸಬೇಕು.
ಉಚಿತ ಕೆಲಸ ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಿ.
ಇಂದಿಗೆ 3-4 ತಿಂಗಳ ಸಂಬಳ, ಮೊಟ್ಟೆ ಹಣ, ಬಾಡಿಗೆ ಹಣ, ನಿವೃತ್ತಿಯಾದವರಿಗೆಕೊಡಬೇಕಾದಇಡಗಂಟು, ಮರಣ ಪರಿಹಾರ ನಿಧಿ, ಆರೋಗ್ಯಕ್ಕೆಕೊಡುವ ಪರಿಹಾರಗಳು ಯಾವಗಲೂತಡ.
ಇಂದಿಗೆ 48 ವರ್ಷವಾಗಿದೆಯೋಜನೆಗೆ ಮತ್ತು ಇಲಾಖೆಗೆ. ಇನ್ನೆಷ್ಟು ವರ್ಷ ಬೇಕು ಸರಿಪಡಿಸಲು?
ಯಾವಗಲೂ ಬಜೆಟ್‍ಇಲ್ಲ, ಆಡಳಿತಾತ್ಮಕ ಸಮಸ್ಯೆಗಳು, ಕೇಂದ್ರಸ ಪಾಲಿನ ಅನುದಾನ ಬಿಡುಗಡೆಯಾಗಿಲ್ಲ. ಂPP ಸಭೆಯಲ್ಲಿಅನುಮೋದನೆ ಸಿಕ್ಕಿಲ್ಲ ಎಂಬ ವಾದಗಳನ್ನು ನಿಲ್ಲಿಸಿ. ನೌಕರರ ಹಕ್ಕು ತಿಂಗಳಿಗೆ ಸಂಬಳ ಪಡೆಯೋದು. ಇದನ್ನುಖಾತ್ರಿಪಡಿಸಲುಅಗತ್ಯಕ್ರಮ ತಗೆದುಕೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ
ನ್ಯಾಯಯುತ ಮುಂಬಡ್ತಿಗಳನ್ನು ಕೊಡಲು ಅಧಿಕಾರಿಗಳ ಮೇಲೆ ಸೂಕ್ತ ಕ್ರಮಜರುಗಿಸಬೇಕು. ಹಾಸನ, ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಸಹಾಯಕಿ, ಮಿನಿ ಕಾರ್ಯಕರ್ತೆ, ವರ್ಗಾವಣೆಗಳಿಗೆ ಅರ್ಹತೆಯಿದ್ದರೂ ಜನಪ್ರತಿನಿದಿಗಳ ಆಜ್ಞೆಯಂತೆ ನಡೆಯುವ ಅಧಿಕಾರಿಗಳ ಮೇಲೆ ಸೂಕ್ತಕ್ರಮಕೈಗೊಂಡು ನೌಕರರಿಗೆ ನ್ಯಾಯಒದಗಿಸಬೇಕು.
ಹೊಸದಾಗಿ ಪ್ರಾರಂಭವಾಗುತ್ತಿರುವಅಂಗನವಾಡಿ ಕೇಂದ್ರಗಳನ್ನು ಈಗಾಗಲೇ ಇರುವ ಮಿನಿ ಅಂಗನವಾಡಿ ಕೇಂದ್ರಗಳನ್ನಯ ಇದರಡಿಯಲ್ಲಿ ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕೆಂದೂ ಈ ಮೂಲಕ ವಿನಂತಿಸುತ್ತೇವೆ.
1 ಡಿಸೆಂಬರ್ 2022 ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮೂಲಕ ಒತ್ತಾಯಿಸುತ್ತೀದ್ದೇವೆ.

(Visited 4 times, 1 visits today)