ತುಮಕೂರು


ಇಂದಿನ ರಾಜಕಾರಣ ಮತ್ತು ಚದುರಂಗದಾಟ ಎರಡರಲ್ಲಿಯೂ ಯಾವುದೇ ವೆತ್ಯಾಸ ಕಾಣುತ್ತಿಲ್ಲ. ಪ್ರತಿ ಹಂತದಲ್ಲಿಯೂ ಒಂದಿಲೊಂದು ಸವಾಲುಗಳನ್ನು ರಾಜಕಾರಣಿಗಳು, ಹಾಗೆಯೇ ಚೆಸ್ ಪ್ಲೆಯರ್‍ಗಳು ಅನುಭವಿಸಿಕೊಂಡೇ ತಮ್ಮ ಸಾಧನೆಯನ್ನು ಜನತೆಯ ಮುಂದಿಟಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆವರಣದಲ್ಲಿ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್, ಕರ್ನಾಟಕ ಚೆಸ್ ಅಸೋಸಿಯೇಷನ್ ಹಾಗೂ ಸಿಎಫ್‍ಪಿಡಿ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ 3ನೇ ರಾಷ್ಟ್ರೀಯ ವಿಕಲ ಚೇತನರ ಚೆಸ್ ಟೂರ್ನಿಯ ಸಮಾರೋಪ ಸಮಾರಂಭ ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತಿದ್ದ ಅವರು,ವಿಕಲಚೇತನ ಮಕ್ಕಳು ಸಾಮಾನ್ಯರಿಗಿಂತ ಮತ್ತಷ್ಟು ಹೆಚ್ಚು ಸವಾಲುಗಳನ್ನು ಎದುರಿಸಿ, ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂಬುದಕ್ಕೆ ಈ ವಿಕಲಚೇತನರ ಟೂರ್ನಿಯಲ್ಲಿ ದೇಶದ 13ಕ್ಕೂ ಹೆಚ್ಚು ರಾಜ್ಯಗಳ ವಿಕಲಚೇತನ ಕ್ರೀಡಾಪಟುಗಳು ಮತ್ತು ಅವರ ಪೋಷಕರು ಪಾಲ್ಗೊಂಡಿರುವುದು ಸಾಕ್ಷಿ ಎಂದರು.
ವಿಶೇಷ ಚೇತನ ಮಕ್ಕಳು ಸಮಾಜದಿಂದ ಸಹಾಯಕ್ಕಿಂತ, ತಮ್ಮ ಪ್ರತಿಭೆಗೆ ಪ್ರೋತ್ಸಾಹವನ್ನು ಬಯಸುತ್ತವೆ.ಚೆಸ್ ಎಂಬುದು ಒಂದು ಮೈಂಡ್ ಗೇಮ್,ಅಂಗವೈಕಲ್ಯವನ್ನು ಮೆಟ್ಟಿನಿಲ್ಲುವಂತಹ ಆತ್ಮಸ್ಥೈರ್ಯ ಈ ಮಕ್ಕಳಲ್ಲಿದೆ.ಇವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಬೇಕಿದೆ.ಸಾಮಾನ್ಯರಿಗೆ ಹೊಲಿಕೆ ಮಾಡಿದರೆ ಇವರ ಬುದ್ದಿಮತ್ತೆ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಪಂಚದ ಆರೋಗ್ಯ ವಿಜ್ಞಾನಕ್ಕೆ ಹೊಲಿಕೆ ಮಾಡಿದರೆ ಭಾರತದ ಆರೋಗ್ಯಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಮೆರಿಕಾದಂತಹ ಮುಂದುವರೆದ ದೇಶಗಳಲ್ಲಿ ಒಂದು ಹೃದಯ ಸಂಬಂಧಿ ಖಾಯಿಲೆಯ ಶಸ್ತ್ರಚಿಕಿತ್ಸೆಗೆ 6 ತಿಂಗಳಿಂದ ವರ್ಷ ಕಾಯಬೇಕಿದೆ.ಜೊತೆಗೆ ಖರ್ಚು ಹೆಚ್ಚು.
ಆದರೆ ಭಾರತದಲ್ಲಿ ತುರ್ತು ಎಂದು ಕಂಡು ಬಂದರೆ ಅರ್ಧ ಗಂಟೆಯಲ್ಲಿ ಅಪರೇಷನ್ ಮಾಡುವಷ್ಟು ವೈದ್ಯಕೀಯ ಕ್ಷೇತ್ರ ಅಭಿವೃದ್ದಿ ಹೊಂದಿದೆ.ಹಾಗಾಗಿ ಮುಂದುವರೆದ ದೇಶಗಳಿಂದಲೂ ಭಾರತಕ್ಕೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ಈ ಅಂಶಗಳನ್ನು ಮುಂದಿಟ್ಟುಕೊಂಡೇ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ,ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದ ಕಾಲದಲ್ಲಿ ಹೆಲ್ತ್ ಟೂರಿಸಂ ಎಂಬ ಹೊಸ ಪರಿಕಲ್ಪನೆಯೊಂದಿಗೆ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಸೌಕರ್ಯ ಒದಗಿಸಲಾಯಿತು ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ,ಕಳೆದ ನಾಲ್ಕು
ದಿನಗಳಿಂದ ಇಲ್ಲಿ ನಡೆದ ವಿಕಲಚೇತನ ಮಕ್ಕಳ ಚೆಸ್ ಚಾಂಪಿಯನ್‍ಶಿಫ್‍ನಿಂದಾಗಿ ಅವರನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.ಅವರಿಗೆ ನಮ್ಮ ಸಹಾಯಕ್ಕಿಂತ ಪ್ರೋತ್ಸಾಹ ಬೇಕಿದೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ರೋಟರಿ ಪೀಣ್ಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್,ತೀರ್ಪುಗಾರರಾದ ಆನಂದಬಾಬು,ಕರ್ನಾಟಕ ಚೆಸ್ ಅಸೋಸಿಯೇನ್ ಅಧ್ಯಕ್ಷರಾದ ಡಿ.ಪಿ.ಆನಂತ್,ಡಾ.ರಮಣ್ ಸೇರಿದಂತೆ ಹಲವರು ಮಾತನಾಡಿದರು.
3ನೇ ರಾಷ್ಟ್ರೀಯ ವಿಕಲಚೇತನರ ಚೆಸ್ ಚಾಂಪಿಯನ್ ಶಿಫ್-2022ನ ಚಾಂಪಿಯನ್ ಆಗಿ ಕರ್ನಾಟಕದ ಸಮರ್ಥ ಜೆ.ರಾವ್ 25 ಸಾವಿರ ನಗದು ಬಹುಮಾನದ ಜೊತೆಗೆ, ಟ್ರೋಫಿಯನ್ನು ತನ್ನದಾಗಿಸಿಕೊಂಡರು.
ಆಂಧ್ರಪ್ರದೇಶದ ನವೀನ್ ಕುಮಾರ್ ಎ.ರನ್ನರ್ ಅಫ್ ಆಗಿ,ವೆಂಕಟ ಕೃಷ್ಣ ಕಾರ್ತಿಕ್ ಮೂರನೇ ಬಹುಮಾನ ಪಡೆದರು. ವಿವಿಧ ಹಂತದ
ಸುಮಾರು 63 ವಿವಿಧ ಹಂತದ ಪ್ರಶಸ್ತಿಗಳು ಹಾಗೂ ನಗದು ಬಹುಮಾನವನ್ನು ಪಡೆದರು.
ವೇದಿಕೆಯಲ್ಲಿ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್‍ನ ಅಧ್ಯಕ್ಷ ಟಿ.ಎನ್.ಮಧುಕರ್,ಉಪಾಧ್ಯಕ್ಷರಾದ ಕಿರನ್ ಮೌರ್ಯ, ಅಖಿಲಾನಂದ, ಕಾರ್ಯದರ್ಶಿ ಮಾಧುರಿ, ಖಜಾಂಚಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)