ತುಮಕೂರು


ದೇಶ ವಿದೇಶ ಸೇರಿದಂತೆ ನಾಡಿನಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು ಇಡೀ ಭಾರತ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದು ಅಂಬೇಡ್ಕರ್ ಅವರು ಡಿಸೆಂಬರ್ 6.ರಂದು ದೇಹ ತ್ಯಜಿಸಿ ಹೋದ ಕಾರಣಕ್ಕಾಗಿ ಪರಿನಿರ್ವಣ ದಿನಾಚರಣೆಯನ್ನು ಆಚರಿಸುತ್ತಿದ್ದು ಇಂತಹ ಪುಣ್ಯಪುರುಷ ನಾಡಿಗೆ ಕೊಟ್ಟ ಕೊಡುಗೆ ಅಪಾರವಾದದ್ದು ಮತ್ತು ಅವಿಸ್ಮರಣೀಯವಾದದ್ದು ಎಂದು ತುಮಕೂರು ಉಪವಿಭಾಗಾಧಿಕಾರಿ ಅಜಯ್ ಅವರು ತಿಳಿಸಿದರು.
ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಯೋಜನೆ ಮಾಡಲಾಗಿದ್ದ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಗೆ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡಿ ಬೃಹದಕಾರದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪರಿನಿರ್ವಾಣ ದಿನಾಚರಣೆ ಆಚರಿಸಿ ನಂತರ ಮಾತನಾಡಿದರು.
ತುಮಕೂರು ಬೆಳಗಾವಿಯ ನಂತರ ಎರಡನೆಯ ದೊಡ್ಡ ಜಿಲ್ಲೆಯಾಗಿದ್ದು ಇಂತಹ ಜಿಲ್ಲೆಯಲ್ಲಿ ಅದು ಡಿಸಿ ಕಚೇರಿಯ ಮುಂದೆ ಅಥವಾ ಬೇರೆ ಕಡೆಗಳಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂಬುದು ನನ್ನ ಆಶಯವು ಆಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಬದುಕುತ್ತಿದ್ದು ಪ್ರಭುದ್ಧವಾದ ಭಾರತದ ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರನ್ನು ಪ್ರತಿದಿನವೂ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವುದು ನಮ್ಮಗಳ ಕರ್ತವ್ಯವೆಂದು ತಿಳಿಸಿದರು.
ಪ್ರತಿಯೊಬ್ಬ ಮನುಷ್ಯನು ಅಂಬೇಡ್ಕರ್ ಅವರ ಭಾವಚಿತ್ರವನ್ನು ನೋಡಿದರೆ ಸಾಕು ಅವರ ಸಮಸ್ಯೆ ಬಗೆಹರಿಯುತ್ತದೆ ಯಾವ ಸಮಾಜ ಅಂದು ತುಳಿತ ಕೊಳಗಾಗಿತ್ತು ಅಂತಹ ಸಮಾಜವನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದವರು ಬಾಬಾ ಸಾಹೇಬ ಅಂಬೇಡ್ಕರ್ ಅವರು ನಮ್ಮ ಸಮಾಜದ ಎಲ್ಲಾ ಗ್ರಂಥಗಳನ್ನು ಒಂದು ಕಡೆ ತೂಗಿದರು ಬಾಬಾ ಸಾಹೇಬ್ ಅವರ ಸಂವಿಧಾನ ಒಂದೆಡೆ ನಿಲ್ಲುತ್ತದೆ ಎಂದರು.
ಕರ್ನಾಟಕ ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬಂಡೇ ಕುಮಾರ್ ಅವರು ಮಾತನಾಡಿ 66ನೇ ಅಂಬೇಡ್ಕರ್ ಅವರ ಪರಿನಿರ್ವಾಣ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು
ಮಹದ್ವಾರವನ್ನು ಸ್ಥಾಪನೆ ಮಾಡಲು ಉದ್ದೇಶ ಮಾಡಲಾಗಿದೆ ನಮ್ಮ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿದ ಬಾಬಾ ಸಾಹೇಬರ ಹೆಸರನ್ನು ರಸ್ತೆ ಉದ್ಯಾನವನ ಸರ್ಕಾರಿ ಕಟ್ಟಡಗಳಿಗೆ ಇಡಬೇಕು ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಇರುವ ಅಸ್ಪೃಶ್ಯತೆಯ ನಿರ್ಮೂಲನೆಗೆ ಸರ್ಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಳ್ಳಿ ಭಾಗದಲ್ಲಿರುವ ಅಸ್ಪೃಶ್ಯರ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ವಾಡ ಡಿವೈಎಸ್ಪಿ ಶ್ರೀನಿವಾಸ್ ಕರುನಾಡ ವಿಜಯ ಸೇನೆ ರಾಜ್ಯ ಅಧ್ಯಕ್ಷ ದೀಪಕ್ ಸೋಮಶೇಖರ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು ರೇಣುಕಾ ಪ್ರಸಾದ್ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್ ದಲಿತ ಮುಖಂಡರಾದ ಕೊಟ್ಟಾಶಂಕರ್ ರಂಗನಾಥ್ ನವೀನ್ ಉಮೇಶ್ ತಿಪ್ಪೇಸ್ವಾಮಿ ಗಣೇಶ್ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.

(Visited 1 times, 1 visits today)