ತುಮಕೂರು:


ದೇಶದಲ್ಲಿ ಇಂಜಿನಿಯರಿಂಗ್ ಪದವೀಧರರು ಉತ್ತಮ ಅಂಕಗಳಿಕೆಯಿದ್ದೂ, ಉತ್ತಮ ಉದ್ಯೋಗ ಪಡೆದುಕೊಳ್ಳುವುದು ಹಲವಾರು ಭಾರಿ ಕಷ್ಟಕರವಾಗಿ ಪರಿಣಮಿಸುವುದೇಕೆಂದರೆ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳ ಕೊರತೆಯಿಂದಲೇಯೆಂದು ಶ್ರೀವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎಸ್.ವಿದ್ಯಾಶಂಕರ್‍ರವರು ನುಡಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಇ. ತರಗತಿಗಳನ್ನು ಡಿ.12ರಂದು ಉದ್ಘಾಟಿಸಿ ಮಾತನಾಡುತ್ತಾ ಅವರು ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಪ್ರಥಮವಾಗಿ ರಾಜ್ಯ ಸರ್ಕಾರ ಹೆಚ್ಚಿನ ಅಸ್ಥೆಯಿಂದ ಜಾರಿಗೊಳಿಸುತ್ತಿದ್ದು, ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯಾಗಲಿದೆ ಮತ್ತು ಕೌಶಲ್ಯಾಧಾರಿತ ಕಲಿಕಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಉದ್ಯೋಗ ಲಭ್ಯತೆ ಮತ್ತು ಉದ್ಯಮ ಸ್ಥಾಪನಾ ಚಟುವಟಿಕೆಗಳು ಹೆಚ್ಚಾಗಿ ಅಭಿವೃದ್ಧಿಗೆ ಪೂರಕವಾಗಲಿದೆಯೆಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಉತ್ತಮ ಅಂಶಗಳನ್ನು ಎಳೆ ಎಳೆಯಾಗಿ ವಿವರಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.
ಮತ್ತೋರ್ವ ಮುಖ್ಯಅತಿಥಿಯಾಗಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಟಿ.ಮುದ್ದುಕುಮಾರ್‍ರವರು ಮಾತನಾಡುತ್ತಾ ತುಮಕೂರು ನಗರದ ಹೊರವಲಯದಲ್ಲಿ ವಸಂತ ನರಸಾಪುರ ಸೇರಿದಂತೆ ಸುಮಾರು 12 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ವಿಸ್ತರಿಸಿದ್ದು ಅಪಾರ ಪ್ರಮಾಣದ ವಿದೇಶಿ ಬಂಡವಾಳ ನೇರ ಹೂಡಿಕೆ ಆಕರ್ಷಣೆಯಾಗುತ್ತಿದ್ದು, ಉತ್ತಮ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಮಾತನಾಡುತ್ತಾ ಪ್ರಸ್ತುತದಲ್ಲಿ ಭಾರತದ ಆರ್ಥಿಕತೆ ಐದನೇ ಸ್ಥಾನದಲ್ಲಿದ್ದು 2030 ರ ವೇಳೆಗೆ ಮೂರನೇ ಸ್ಥಾನಕ್ಕೆ ಏರುವ ನಿರೀಕ್ಷೆಯಿದ್ದು, ಹೆಚ್ಚಿನ ಔದ್ಯಮಿಕ ಮತ್ತು ಉದ್ಯೋಗದ ಅವಕಾಶಗಳು ವಿದ್ಯಾರ್ಥಿಗಳಿಗೆ ಅಪಾರ ಅವಕಾಶದ ಬಾಗಿಲು ತೆರೆದಿರುವುದರಿಂದ ಉತ್ತಮ ಕಲಿಕೆ ಮತ್ತು ಕೌಶಲ್ಯಗಳೊಂದಿಗೆ ಸಜ್ಜಾಗಬೇಕಾದ ಅವಶ್ಯಕತೆಯಿಂದು ಮತ್ತು ಕಾಲೇಜಿನಿಂದ ಸಕಲ ಸೌಲಭ್ಯಗಳನ್ನು ಈ ನಿಟ್ಟಿನಲ್ಲಿ ಒದಗಿಸಲಾಗಿದ್ದು ವಿದ್ಯಾರ್ಥಿಗಳು ಈ ಪ್ರಯೋಜನ ಪಡೆದುಕೊಳ್ಳಲೆಂದರು.
2021-22 ನೇ ಸಾಲಿನ ವಿ.ಟಿ.ಯು. ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ 9 ಕ್ಕೂ ಹೆಚ್ಚಿನ ಎಸ್.ಜಿ.ಪಿ.ಎ. ಗ್ರೇಡ್ ಪಡೆದ ಸುಮಾರು 32 ವಿದ್ಯಾರ್ಥಿಗಳಿಗೆ ತಲಾ ಆರು ಸಾವಿರ ರೂಪಾಯಿಗಳ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿದರು, ಯಶವಂತ್ ಪ್ರಾರ್ಥಿಸಿದರು, ಪ್ರೊ.ಶೃತಿ ಮತ್ತು ಪ್ರೊ.ಮಂಜುಳಾ ನಿರ್ವಹಿಸಿದರು, ಡಾ.ಸಿ.ನಾಗರಾಜ್ ವಂದಿಸಿದರು. ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ಹಾಜರಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಡಾ.ಜಿ.ಮಹೇಶ್‍ಕುಮಾರ್, ಡಾ.ಬಸವೇಶ್, ಡಾ.ಸುಹಾಸ್, ಡಾ.ಚರಣ್, ಡಾ.ಕಿಶೋರ್‍ಕುಮಾರ್, ಪ್ರೊ.ಕೆ.ಪಿ.ಚಂದ್ರಯ್ಯ, ಡಾ.ಪಿ.ಜೆ.ಸದಾಶಿವಯ್ಯ, ಪ್ರೊ.ಐಜಾಜ್ ಅಹಮದ್ ಷರೀಫ್, ಪ್ರೊ.ಜಿ.ಹೆಚ್.ರವಿಕುಮಾರ್, ಪ್ರೊ.ಗಿರೀಶ್ ಹಾಗೂ ಇತರೆ ಉಪನ್ಯಾಸಕ ವರ್ಗದವರು ಹಾಜರಿದ್ದರು. ಸುಮಾರು 300 ಕ್ಕೂ ಹೆಚ್ಚು ಪ್ರಥಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 7 times, 1 visits today)