ತುಮಕೂರು


ನಗರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಹಣ ಕೊಟ್ಟು ಹೆಣ್ಣು ಮಕ್ಕಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ನಗರ ಘಟಕ ದೂರು ನೀಡಿದೆ.
ತುಮಕೂರು ವಿಧಾನ ಸಭಾ ಕ್ಷೇತ್ರದ ವಾರ್ಡ್‍ಗಳಿಂದ ತನ್ನ ಅನುಯಾಯಿಗಳಾದ ರೌಡಿಶೀಟರ್‍ಗಳನ್ನ ಮುಂದಿಟ್ಟುಕೊಂಡು ಪ್ರತೀ ದಿನ 5-10 ಬಸ್‍ಗಳಲ್ಲಿ ವಾರ್ಡ್‍ವಾರು ಬಡಕುಟುಂಬದ ಅಮಾಯಕ ಮುಗ್ದ ಹೆಣ್ಣು ಮಕ್ಕಳನ್ನ ಹಣದ ಅಮಿಷವೊಡ್ಡಿ ಬಸ್ ಗಳಲ್ಲಿ ಕೂರಿಸಿಕೊಂಡು ಎತ್ತೆನಹಳ್ಳಿ ಮಾರಮ್ಮನ ದೇವಸ್ಥಾನ ಮತ್ತು ಮಧುಗಿರಿಯ ದಂಡಿನ ಮಾರಮ್ಮನ ದೇವಸ್ಥಾನ ಹಾಗೂ ಇತರೆ ಕಡೆಗಳಲ್ಲಿ ಕರೆತಂದು ಪ್ರತಿವ್ಯಕ್ತಿಗೆ 1 ಸಾವಿರದಂತೆ ಹಣ ನೀಡುತಿದ್ದು, ಹಣ ನೀಡುವ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎನ್ ಗೊವಿಂದರಾಜುರವರಿಗೆ ಮತ ನೀಡುತ್ತೇನೆ ಎಂದು ಬಲವಂತವಾಗಿ ಪ್ರಮಾಣ ಮಾಡಿಸಿಕೊಂಡು ಹಣ ನೀಡುತಿದ್ದಾರೆ.
ಗರ್ಭಿಣಿ ಸ್ತ್ರೀಯರಿಗೆ ದೇವಸ್ಥಾನದ ಎದುರು ತನ್ನೊಡಲ ಹಸು ಗೂಸಿನ ಮೇಲೆ ಕೈಯಿಟ್ಟು ಹಾಣೆ ಪ್ರಮಾಣ ಮಾಡಿಸುತ್ತಿರುವುದು ದುರಂತ. ಈ ರೀತಿ ಆಣೆ ಪ್ರಮಾಣದ ಬಗ್ಗೆ ಬಿಜೆಪಿ ಈಗಾಗಲೆ ದೂರು ನೀಡಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳೇ ಧ್ವನಿ ಎತ್ತಿ ವಿರೊಧಿಸುತ್ತಿರುವುದು ಹೀನಾಯ ಸಂಗತಿ.
ಸಾರ್ವಜನಿಕವಾಗಿ ವಿರೋಧಗಳು, ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತಲೆ ತಗ್ಗಿಸುವಂತಹ ಹೀನಾಯ ಸ್ಥಿತಿ ತಲುಪಿದೆ ಎಂದು ಜೆಡಿಎಸ್ ಪಕ್ಷದವರೆ ಮಾತನಾಡಿಕೊಳ್ಳುತಿದ್ದಾರೆ.
ಇದೇ ರೀತಿಯ ವರ್ತನೆ ಮುಂದುವರಿದರೆ ಕಳೆದೆರಡು ಭಾರಿ ಇದ್ದಂತಹ ಜನಾಭಿಪ್ರಾಯ ಸಂಪೂರ್ಣವಾಗಿ ನಶಿಸಿ ಹೋಗಿ ಪಕ್ಷದ ಅಭ್ಯರ್ಥಿ ಹೀನಾಯ ಸೋಲು ಕಾಣುವ ಪರಿಸ್ಥಿತಿ ಎದುರಾಗುತ್ತದೆ ಎಂದು ಸ್ವ ಪಕ್ಷದವರೆ ಮನ ನೊಂದು ಮಾತನಾಡುತಿದ್ದಾರೆ. ಕಳೆದ ಭಾರಿ ಚುನಾವಣೆಗೂ ಮುನ್ನ ಇದೇ ರೀತಿಯ ಆಣೆ ಪ್ರಮಾಣಗಳು ನಡೆದಿತ್ತು, ಅಪಾರ ಹಣದ ಹೊಳೆ ಹರಿಸಿದ್ದ ಗೋವಿಂದರಾಜು ಕೊನೆಗೆ ಸೋಲುವ ಸ್ಥಿತಿ ತಲುಪಿದ್ದರು. ತನ್ನ ಸೋಲಿನ ನಂತರ ನಗರದ ಮತದಾರರಿಂದ ದೂರ ಉಳಿದಿದ್ದರು. ಸಾರ್ವಜನಿಕ ವಾಗಿಯೇ ಹಣ ಪಡೆದು ಮೋಸ ಮಾಡಿದರು ಎಂದು ಮತದಾರರನ್ನೇ ವಾಚಾಮ ಗೋಚರವಾಗಿ ನಿಂದಿಸುತ್ತಾ ಹಿಡೀ ಶಾಪ ಹಾಕುತಿದ್ದ ಗೋವಿಂದರಾಜು ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮುಂದೆ ಬೇಡುತ್ತಾ ಹಣ ಕೊಟ್ಟು ಮತ ಖರೀದಿಸುತ್ತಿರುವುದು ಮತ್ತು ದೇವರ ಮುಂದೆ ಆಣೆ ಪ್ರಮಾಣ ಮಡಿಸುತ್ತುರುವುದು ಸಂವಿಧಾನದ ವಿರೋಧವಾಗಿದ್ದು ಪ್ರಜಾತಂತ್ರ ವ್ಯವಸ್ಥೆಯ ಖಗ್ಗೊಲೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ.
ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ. ವಿರೋಧ ಪಕ್ಷಗಳ ನಿಲುವುಗಳೇನು..? ಎನ್ನುವುದು ಮತದಾರರ ನಿರೀಕ್ಷೆ.

(Visited 1 times, 1 visits today)