ಕೊರಟಗೆರೆ

ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆ ಶತಮಾನದ ಅಂಚಿನಲ್ಲಿರುವ ಶಾಲೆ 1932ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆ ನಿರ್ಮಾಣವಾಗಿ 92 ವರ್ಷ ಕಳೆದರೂ ಒಂದು ಪ್ರೌಢಶಾಲೆ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಶಾಲೆಯಲ್ಲಿ ಓದಿ ಕಲಿತ ನೂರಾರು ವಿಧ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕಾರಿಸಿದ್ದಾರೆ, ಇಂದಿಗೂ ಈ ಶಾಲೆಯಿಂದ ಬೆಳೆಯುತ್ತಿರುವ ಮಕ್ಕಳು ಉನ್ನತ್ತ ಮಟ್ಟದ ಹುದ್ದೆ ಅಲಂಕಾರಿಸಲಿದ್ದಾರೆ ಇಲ್ಲಿಯವರೆವಿಗೂ ಈ ಶಾಲೆಗೆ ಪ್ರೌಢಶಾಲೆ ಇಲ್ಲ ಎಂಬುದು ದುರ್ದೈವದ ಸಂಗತಿ.
1ರಿಂದ 8ನೇ ತರಗತಿ ಓದಿದ ನಂತರದ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ ಇಲ್ಲದೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗೀ ಶಾಲೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಧ್ಯಾರ್ಥಿಗಳು ತನ್ನ ಮುಂದಿನ ವಿಧ್ಯಾಭ್ಯಾಸಕ್ಕೆ ಖಾಸಗಿ ಶಾಲೆ ಅವಲಂಬಿಸಬೇಕಾಗಿದೆ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶಾಸಗಿಶಾಲೆಯಲ್ಲಿ ಓದಲು ಸಾಧ್ಯವಿಲ್ಲ, ಖಾಸಗಿ ಶಾಲೆಯಲ್ಲಿ ಡೋನೇಷನ್, ಫೀಜ್, ಇನ್ನು ಇತರೆ ಹಣ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅ ಮಕ್ಕಳು ರೈತ ಮಕ್ಕಳು, ಮಧ್ಯಮ ವರ್ಗಕ್ಕಿಂತ ಕೆಳಮಟ್ಟದ ಕುಟುಂಬದ ಮಕ್ಕಳು. ಅರ್ನಿವಾಯವಾಗಿ ಕೊರಟಗೆರೆ ಅಥವಾ ತುಮಕೂರಿನ ಶಾಲೆಗಳಿಗೆ ದಾವಿಸುತ್ತಿದ್ದಾರೆ.
ಒಂದರಿಂದ ಎಂಟನೇ ತರಗತಿ ಪ್ರಾಥಮಿಕ ಶಿಕ್ಷಣದ ಪರಿಧಿ ಎಂದು ಪರಿಗಣಿಸಿದಾಗ ಏಳನೇ ತರಗತಿಯಿಂದ ಮೇಲ್ದರ್ಜೆ ಎಂಟನೇ ತರಗತಿಯನ್ನು ಸರ್ಕಾರ ಮಂಜೂರು ಮಾಡಿದೆ. ತೋವಿನಕೆರೆ ಸುತ್ತಲಿನ 50 ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ನಾಲ್ಕುನೂರಕ್ಕೂ ಅಧಿಕವಿದೆ. ಒಂಭತ್ತನೇ ಮತ್ತು ಹತ್ತನೇ ತರಗತಿಯನ್ನೂ ಮಂಜೂರು ಮಾಡಿದ್ದರೆ ಅಷ್ಟೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಸಾಕಷ್ಟು ಮಕ್ಕಳು ರವೀಂದ್ರ ಭಾರತಿ, ಕಣ್ವ, ಕಿಡ್ಸ್, ಸೆಂಟ್ ಮೆರಿಸ್, ಜೈನ್ ಶಾಲೆಗಳಿಗೆ ಹೋಗುತ್ತಿದ್ದು, ಕೆಳ ಮಧ್ಯಮ ವರ್ಗದ ತಂದೆ ತಾಯಿಗಳು ಸ್ತ್ರೀಶಕ್ತಿ ಸಂಘ ಹಾಗೂ ಧರ್ಮಸ್ಥಳ ಸಂಘಗಳಲ್ಲಿ ಸಾಲ ತೆಗೆದು ಖಾಸಗೀ ಶಾಲೆಗಳ ಡೊನೇಶನ್ ಕಟ್ಟುತ್ತಿದ್ದಾರೆ. ಅಲ್ಲದೇ ಒಂದು ಸಾವಿರಕ್ಕೂ ಅಧಿಕ ದಲಿತ ಕುಟುಂಬಗಳು ಇಲ್ಲಿ ವಾಸವಿದ್ದು, ಅವರ ಮಕ್ಕಳು ದುಬಾರಿಯಾದ ಶಿಕ್ಷಣದ ಕಾರಣಕ್ಕೆ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ.
1932ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆ ನಿರ್ಮಾಣವಾಗಿ 92 ವರ್ಷ ಕಳೆದರೂ ಒಂದು ಪ್ರೌಢಶಾಲೆ ನಿರ್ಮಿಸಲು ಸಾಧ್ಯವಾಗಿಲ್ಲ. ಪ್ರತೀ ವರ್ಷ ನೂರಾರು ಮಕ್ಕಳು ಎಂಟನೇ ತರಗತಿ ಪೂರ್ಣಗೊಳಿಸುತ್ತಿದ್ದಾರೆ. ಅವರ ಮುಂದೆನ ಆಯ್ಕೆ ಸರ್ಕಾರಿ ಶಾಲೆಯಲ್ಲ, ಬದಲಿಗೆ ಖಾಸಗೀ ಶಾಲೆ. ಬಡವರ, ರೈತರ ಮಕ್ಕಳು ದುಬಾರಿ ವೆಚ್ಚದಲ್ಲು ವಿದ್ಯಾಭ್ಯಾಸ ಪೂರೈಸಲು ಸಾಧ್ಯವಿದೆಯಾ? ಗ್ರಾಮಸ್ಥರು ಎಷ್ಟು ಬಾರಿ ಮನವಿ ಮಾಡಿಕೊಂಡರೂ ಸರ್ಕಾರವಂತೂ ಇತ್ತ ಗಮನ ಹರಿಸಿಲ್ಲ. ಸರ್ಕಾರದ ಬಡವರ ಮಕ್ಕಳ ಮೇಲಿನ ಈ ಮಲತಾಯಿ ಧೋರಣೆ ಸರಿಯಲ್ಲ.
ಸರ್ಕಾರಿ ಶಾಲೆಗಳು ಕರ್ನಾಟಕದಲ್ಲಿ ನಿರ್ಗತಿಕ ಸ್ಥಾನಕ್ಕೆ ತಲುಪಿರುವುದರಲ್ಲಿ ಬಂಡವಾಳಶಾಹಿ ರಾಜಕಾರಣಿಗಳ ಪಾತ್ರ ದೊಡ್ಡದು. ಇಷ್ಟೆಲ್ಲ ಅಡೆ ತಡೆಗಳ ನಡುವೆಯೂ ಬಡವರ, ರೈತರ ಮಕ್ಕಳು ಹೆಣಾಗಡಿಯಾದರೂ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಅವರ ಶೈಕ್ಷಣಿಕ ಪ್ರಗತಿಗೆ ಹೆಗಲು ಕೊಡುವ ಉದಾರತೆ ಈಗಿನ ಸರ್ಕಾರಗಳಿಗಿಲ್ಲ ಎಂಬುದು ಸರ್ಕಾರಿ ಶಾಲೆಗಳ ದುಸ್ಥಿತಿಯಿಂದ ಸಾಭೀತಾಗಿದೆ. ಆದರೆ ತೋವಿನಕೆರೆ ಹಾಗೂ ಸುತ್ತಮುತ್ತಲಿನ

(Visited 1 times, 1 visits today)