ಕೊರಟಗೆರೆ


ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ 4ವರ್ಷದಿಂದ ಜನಸೇವೆ ಮಾಡಿದ್ದಾರೆ. ಕೆ.ಎಂ.ಮುನಿಯಪ್ಪ ಪರವಾಗಿ ನನ್ನ ಬೆಂಬಲ ಇದ್ದೇ ಇರುತ್ತದೆ.. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಗೆ ಮುಂದಾಗಿ ಕೊರಟಗೆರೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಮಾಜಿ ಜಿಪಂ ಅಧ್ಯಕ್ಷ ಜಿ.ಮರೀಸ್ವಾಮಿ ಮನವಿ ಮಾಡಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಮತ್ತು ಟಿ.ಡಿ.ತಿಮ್ಮಜ್ಜ ನೇತೃತ್ವದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೋರೊನಾ ರೋಗ ಹರಡಿದಾಗ ಕೊರಟಗೆರೆ ಕ್ಷೇತ್ರದ ಜನರಿಗೆ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ 30ಸಾವಿರ ಆಹಾರದ ಕಿಟ್ ಮತ್ತು ವೈದ್ಯಕೀಯ ನೇರವು ನೀಡಿದ್ದಾರೆ. ಕೊರಟಗೆರೆ ಕ್ಷೇತ್ರದ ಜನರಿಂದ ಮುನಿಯಪ್ಪನಿಗೆ ಪ್ರೀತಿ ಮತ್ತು ವಾತ್ಸಲ್ಯ ದೊರೆತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ-ಸಾಧನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಕೆ.ಎಂ.ಮುನಿಯಪ್ಪ ಮಾತನಾಡಿ ನಾನು ಕಳೆದ 4ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ಅಪ್ಪಾಜಿಯ ಆರ್ಶಿವಾದ ನನ್ನ ಮೇಲಿದೆ. ಬಿಜೆಪಿ ಪಕ್ಷದ ಹಿರಿಯರ ತಿರ್ಮಾನಕ್ಕೆ ನಾನು ಬದ್ದನಿದ್ದೇನೆ. ಬಿಜೆಪಿ ಪಕ್ಷದ ಸಂಘಟನೆಯೇ ಕಾರ್ಯಕರ್ತರ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚೇತನ್, ಟಿ.ಎಸ್.ಕೃಷ್ಣಮೂರ್ತಿ, ತಿಮ್ಮಜ್ಜ, ಹನುಮಂತರಾಯಪ್ಪ, ಪ್ರಸನ್ನಕುಮಾರ್, ಪ್ರಕಾಶ್‍ಬಾಬು, ಚಂದ್ರಣ್ಣ, ದೊಡ್ಡಕಾಯಪ್ಪ, ಮೀಸೆ ಮಂಜುನಾಥ, ನಟರಾಜು, ಉಮೇಶ್‍ಚಂದ್ರ, ಗೋವಿಂದರೆಡ್ಡಿ, ಸುರೇಶ್, ಬಾಲರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

(Visited 1 times, 1 visits today)