ತುಮಕೂರು


ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆಯು ರಾಜ್ಯಮಟ್ಟದ ಶಾಲಾ ಬಾಲಕ ಹಾಗೂ ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಜನವರಿ 1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಪಂದ್ಯಾವಳಿಯು 7, 9, 11, 13, 15 ಹಾಗೂ 17 ವರ್ಷದೊಳಗಿನ ಬಾಲಕ –
ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಆಯೋಜಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಟಿ.ಎನ್ ಮಧುಕರ್ ತಿಳಿಸಿದ್ದಾರೆ. ಮೊದಲ ಸ್ಥಾನ ಗಳಿಸಿದ ಎಲ್ಲಾ ವಿಭಾಗದ ಸ್ಪರ್ಧಿಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಚೆಸ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಗೆ ನೋಂದಾಯಿಸಲು ಡಿ. 29 ಕಡೆಯ ದಿನವಾಗಿದ್ದು, ಮೊದಲ ಹತ್ತು ಸ್ಥಾನ ಪಡೆದ ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿ, ಬಹುಮಾನವಿರುತ್ತದೆ.ಪಂದ್ಯಾವಳಿಯ ಸಮಗ್ರ ಮಾಹಿತಿಯು ವೆಬ್ ಸೈಟ್: ತಿತಿತಿ.ಞಚಿಡಿಚಿಟಿಚಿಣಚಿಞಚಿಛಿhess.ಛಿom ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9036464600 ಅಥವಾ 8050244338 ಸಂಪರ್ಕಿಸುವಂತೆ ಕೋರಲಾಗಿದೆ.

(Visited 1 times, 1 visits today)