ಪಾವಗಡ


ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಶಾಸಕರು ಎರಡನೇ ಬಾರಿಗೆ ಕರೆಯುತ್ತಿರುವುದರಿಂದ ನಾನು ಸಿದ್ದನಾಗಿ ದಾಖಲೆಗಳೊಂದಿಗೆ ಬರುತ್ತೇನೆ ಎಂದು ಜೆಡಿಎಸ್ ಪಕ್ಷದ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪನವರು ತಿಳಿಸಿದರು.
ಪಟ್ಟಣದ ಬನಶಂಕರಿಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಕರೆದು ಮಾತನಾಡುತ್ತಾ, ಸಾರ್ವಜನಿಕ ಸಭೆಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾದ ವೆಂಕಟರಮಣಪ್ಪನವರು ಪದೇ ಪದೇ ನನ್ನನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದಾರೆ ನಾನು ಸಹ ಸಿದ್ದನಾಗಿದ್ದೇನೆ. ಸ್ಥಳ ಮತ್ತು ದಿನವನ್ನು ಅವರೇ ನಿರ್ಧರಿಸಲಿ.
2012ರಲ್ಲಿ ನೀರಿಗಾಗಿ ಹಲವು ಸಂಘ ಸಂಸ್ಥೆಗಳ ಜೊತೆ ಪಾದಯಾತ್ರೆ ಮತ್ತು ಹಲವು ಹೋರಾಟದ ಫಲವಾಗಿ ಇಂದು ಪ್ರಗತಿಯಲ್ಲಿದೆ. ಕುರುಬರಹಳ್ಳಿ ಗೇಟ್ ನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ 2005ರಲ್ಲಿ ನಾನು ಮೊದಲನೇ ಬಾರಿಗೆ ಶಾಸಕನಾದಾಗ 8 ಪ್ರೌಢಶಾಲೆಗಳನ್ನು ಹಾಗೂ ಕೆಟಿ ಹಳ್ಳಿ ಮತ್ತು ಮರಿದಾಸನಹಳ್ಳಿ ಗ್ರಾಮಗಳಲ್ಲಿ ಎರಡು ಜೂನಿಯರ್ ಕಾಲೇಜುಗಳನ್ನು , ಪಟ್ಟಣದ ಜೂನಿಯರ್ ಕಾಲೇಜಿಗೆ ಒಂದು 1.60 ಕೋಟಿ ನೀಡಲಾಗಿದೆ.
ಪರಿಶಿಷ್ಟ ಪಂಗಡಕ್ಕೆ 3 ಮತ್ತು ಪರಿಶಿಷ್ಟ ಜಾತಿಗೆ 07 ರಂತೆ ಒಂದು ಪಂಚಾಯತಿಗೆ 10 ಮನೆಗಳು ಒಟ್ಟು 340 ಮನೆಗಳು 34 ಪಂಚಾಯತಿಗಳಿಂದ ಈ ಬಾರಿ ಬಂದಿವೆ. ಆದರೆ ನನ್ನ ಅಧಿಕಾರ ಅವಧಿಯಲ್ಲಿ 6700 ಮನೆಗಳು ಮಂಜೂರಾಗಿದ್ದ ಮನೆಗಳು ನನ್ನ ಅಧಿಕಾರ ಮುಗಿದ ನಂತರ ಸರ್ಕಾರವು ಬದಲಾಯಿತು. ಈ ಮನೆಗಳನ್ನು ಸರಕಾರ ವಾಪಸ್ ಹಾಕಿದಾಗ ಈ ಮನೆಗಳ ಬಗ್ಗೆ ನಮ್ಮ ಶಾಸಕರಾದ ವೆಂಕಟರಮಣಪ್ಪನವರು ಚಕಾರಾರ ಎತ್ತಲಿಲ್ಲ.ಎಂಟು ಮೊರಾರ್ಜಿ ಶಾಲೆಗಳ ಕಟ್ಟಡಕ್ಕೆ ನನ್ನ ಕಾಲದಲ್ಲಿ ಹಣ ಮುಂಜೂರಾಗಿ ಕಟ್ಟಡ ಪೂರ್ತಿಯಾಗಿದೆ. ಬಸ್ ಡಿಪೆÇೀ ನನ್ನ ಅವಧಿಯಲ್ಲಿ ಆಗಿದೆ. ಮಾಜಿ ಪ್ರಧಾನಿ ದೇವೇಗೌಡರನ್ನು ಕುಟುಂಬ ರಾಜಕಾರಣವೆಂದು ಜೆರೆಯುತ್ತಿರುವುದು ಸರಿಯಲ್ಲ ತಾಲೂಕಿನಲ್ಲಿ ನೀವು ಕುಟುಂಬ ರಾಜಕಾರಣ ಮಾಡುತ್ತಿದ್ದೀರಿ ನಿಮ್ಮ ಮಗ ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದಿದ್ದಾರೆ ನೀವು ಶಾಸಕರಾಗಿ ಬಂಡಾಯ ಅಭ್ಯರ್ಥಿಯಾಗಿ ಗೆದ್ದು ಮಂತ್ರಿ ಗಿರಿಯನ್ನು ವಜಾ ಮಾಡಿಸಿಕೊಂಡು ಚೀಮಾರಿ ಹಾಕಿಸಿಕೊಂಡಿರುವ ದಿನಗಳು ಎಲ್ಲಾ ಸಾರ್ವಜನಿಕರಿಗೆ ತಿಳಿದಿದೆ. ನನ್ನ ಅವಧಿಯಲ್ಲಿ ಆದ ಹಲವು ಕಾಮಗಾರಿಗಳಿಗೆ ನೀವು ಗುದ್ದಲಿ ಪೂಜೆ ಮಾಡಿರುತ್ತೀರಿ ಮುಖಾಮುಖಿ ಚರ್ಚೆಗೆ ಬನ್ನಿ ನಾನು ಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಾಯರಾದ ತಿಮ್ಮಾರೆಡ್ಡಿ, ಜಿಲ್ಲಾಧ್ಯಕ್ಷರಾದ ಆರ್.ಸಿ.ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷರಾದ ಬಲರಾಮರೆಡ್ಡಿ, ಕೋಟಗುಡ್ಡ ಅಂಜಿನಪ್ಪ,ಎನ್ ಘ ಈರಣ್ಣ, ರಾಜಶೇಖರಪ್ಪ , ಅಕ್ಕಲಪ್ಪನಾಯ್ಡು, ಜಯರಾಮರಡ್ಡಿ, ಪಾಲಾನಾಯಕ, ರಾಜಶೇಖರ್ ರೆಡ್ಡಿ, ಕಾವಲಗೇರಿ ರಾಮಾಂಜಿ, ಅಂಜನ್, ಗಗನ್, ಗಂಗಾಧರನಾಯ್ಡು ಇನ್ನೂ ಇತರರು
ಉಪಸ್ಥಿತರಿದ್ದರು.

(Visited 21 times, 1 visits today)