ತುಮಕೂರು


ರಾಜ್ಯದಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿರುವುದು. ರಾಜ್ಯದ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದು ಜಿ. ಎಸ್. ಪರಮಶಿವಯ್ಯ ಅವರ ಕನಸಾಗಿತ್ತು. ಎಲ್ಲರ ಒಳಿತಿಗಾಗಿ ಸಿದ್ಧವಾದ ಯೋಜನೆಯಿದು ಎಂದು ಜಲ ಸಂಪನ್ಮೂಲ ಇಲಾಖೆಯ ಎತ್ತಿನಹೊಳೆ ಯೋಜನೆ ವಲಯದ ಮುಖ್ಯ ಅಭಿಯಂತರ ಮಾಧವ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಜಿ. ಎಸ್. ಪರಮಶಿವಯ್ಯ ಅಧ್ಯಯನ ಪೀಠ ಮತ್ತು ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳವಾರ ಆಯೋಜಿಸಿದ್ದ ‘ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು: ಅವಕಾಶಗಳು ಮತ್ತು ಸವಾಲುಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಈ ಎತ್ತಿನಹೊಳೆ ಯೋಜನೆಯನ್ನು ನಿರ್ಮಿಸಿದ್ದೇವೆ. ಇದರಲ್ಲಿ ಕಲುಷಿತ ನೀರನ್ನು ಶುದ್ಧಿಕರಿಸಿ ಬಳಸಲು ಮತ್ತು ನೀರನ್ನು ನೀರಾವರಿಯಲ್ಲಿ ಡ್ರಿಪ್ ಇರಿಗೆಷನ್ ಮೂಲಕ ಬಳಸಲು ಸೌಲಭ್ಯ ಒದಗಿಸುತ್ತಿದ್ದೇವೆ. ನೀರಾವರಿ ವ್ಯವಸ್ಥೆಯಲ್ಲಿ ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ, ಡ್ರಿಪ್ ನೀರಾವರಿ ವ್ಯವಸ್ಥೆ, ಟ್ಯಾಂಕ್ ವ್ಯವಸ್ಥೆ, ನೀರಿನ ಮರುಬಳಕೆ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ ಎಂದರು.
ಈ ಯೋಜನೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾನವನ ಅತಿಯಾದ ಆಸೆಯಿಂದ ಭೂಮಿ ಮೇಲೆ ಹೆಚ್ಚು ಹೆಚ್ಚು ಬೋರ್ವೆಲ್‍ಗಳನ್ನು ಕೊರೆಯುತ್ತಾ ಬಂದಿರುವುದರಿಂದ ಭೂಮಿಮೇಲೆ ಶುದ್ಧ ನೀರಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಆದ್ದರಿಂದ ಹೆಚ್ಚು ಬೋರ್ವೆಲ್‍ಗಳನ್ನು ಕೊರೆಯದೆ ನೀರನ್ನು ಮಿತವಾಗಿ ಬಳಸಬೇಕು. ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ವ್ಯವಸ್ಥೆಯನ್ನು ಎತ್ತಿನಹೊಳೆ ಯೋಜನೆಯಲ್ಲಿ ನಾವು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಜಿ. ಎಸ್. ಪರಮಶಿವಯ್ಯ ಅವರು ನೀರಾವರಿ ಯೋಜನೆಗಳ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸು ಕಂಡವರು. ನೀರನ್ನು ಮಿತವಾಗಿ ಬಳಕೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಜಲ ಸಂಪನ್ಮೂಲ ಖಾಲಿಯಾಗಬಹುದು. ಹಾಗಾಗಿ, ನೀರನ್ನು ಸದ್ಭಳಕೆ ಮಾಡಿಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಜಿ. ಎಸ್. ಪರಮಶಿವಯ್ಯ ಅಧ್ಯಯನ ಪೀಠದ ನಿರ್ದೇಶಕಿ ಡಾ. ಪಲ್ಲವಿ ಎಸ್. ಕುಸುಗಲ್ಲ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ವಿಲಾಸ್ ಎಂ. ಕಾದ್ರೋಳಕರ, ಪ್ರೊ. ರವೀಂದ್ರ ಕುಮಾರ್ ಬಿ., ಸಹಾಯಕ ಪ್ರಾಧ್ಯಾಪಕ ಡಾ. ನೀಲಕಂಠ ಎನ್. ಟಿ. ಭಾಗವಹಿಸಿದ್ದರು.

(Visited 1 times, 1 visits today)