ತುಮಕೂರು :

      ಪಶು ಸಂಗೋಪನೆ ಇಲಾಖೆಯಡಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದ ಹನುಮಂತಪುರದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಇಂದು ಚಾಲನೆ ನೀಡಿದರು.

      ನಂತರ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಮಾಂಸವನ್ನು ನೇರವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು ಹೇಳುವಂತೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಹಕ್ಕೆ ಪ್ರೋಟಿನ್ ಅಂಶ ಅಗತ್ಯವಿರುವುದರಿಂದ ಆರೋಗ್ಯಕರ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟ ಮಾಂಸವನ್ನು ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

      ಪಾಲಿಕೆ ಮೇಯರ್ ಫರೀದಾ ಬೇಗಂ ಅವರು ಮಾತನಾಡಿ, ಕೋವಿಡ್-19ರ ನಿಯಂತ್ರಣದ ಹಿನ್ನಲೆಯಲ್ಲಿ ಲಾಕ್‍ಡೌನ್ ಆಗಿರುವುದರಿಂದ ಮನೆ ಬಾಗಿಲಿಗೆ ಮಾಂಸವನ್ನು ತಲುಪಿಸುವ ಉದ್ದೇಶದಿಂದ ಮಾಂಸ ಮಾರಾಟದ ಸಂಚಾರಿ ಮಳಿಗೆ ತೆರೆಯಲಾಗಿದೆ. ಜನರು ಸ್ಮಾರ್ಟ್ ಆಗಿ ಮನೆಯಿಂದ ಫೋನ್ ಮಾಡಿ ಮನೆ ಬಾಗಿಲಿಗೆ ಮಾಂಸವನ್ನು ತಲುಪಿಸುತ್ತಾರೆ. ಇದರಿಂದ ಸಾರ್ವಜನಿಕರು ಅಗತ್ಯವಾಗಿ ಓಡಾಡದೇ ಮನೆಯಲ್ಲಿ ಸುರಕ್ಷಿತವಾಗಿದ್ದು, ಲಾಕ್‍ಡೌನ್‍ಗೆ ಸಹಕಾರ ನೀಡಬೇಕು ಎಂದರು.

      ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ|| ನಂದೀಶ್ ಮಾತನಾಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಸಾರ್ವಜನಿಕರಿಗೆ ಗುಣಮಟ್ಟದ ಮಾಂಸವನ್ನು ಪೂರೈಕೆ ಮಾಡುತ್ತಿದ್ದೇವೆ. ಮಾಂಸ ತಿನ್ನುವವರಿಗೆ ಮನೆ-ಮನೆಗೆ ಮಾಂಸವನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ಕೆ.ಜಿ. ಮಾಂಸಕ್ಕೆ 650 ರೂ. ನಿಗಧಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

      ಈ ಸಂದರ್ಭದಲ್ಲಿ ಕುರಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ|| ನಾಗಣ್ಣ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ|| ರುದ್ರಪ್ರಸಾದ್, ಸಹಾಯಕ ನಿರ್ದೇಶಕ ಡಾ|| ರೇ.ಮ ನಾಗಭೂಷಣ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 10 times, 1 visits today)