ತುಮಕೂರು


ಇದೇ ಮಾರ್ಚ್ 26 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಸಾಪ ಹಾಗೂ ತುಮಕೂರು ಜಿಲ್ಲೆಯ ನೇಕಾರರ ಸಮುದಾಯಗಳಾದ ದೇವಾಂಗ, ಕುರುಹೀನ ಶೆಟ್ಟಿ,ಪದ್ಮಶಾಲಿ ಹಾಗೂ ತೊಗಟವೀರ ಸಮುದಾಯಗಳ ವತಿಯಿಂದ ಅದ್ಯ ವಚನಕಾರ ದೇವರ ದಾಸಿಮಯ್ಯ ಅವರ 1044ನೇ ಜಯಂತಿ ಆಚರಣೆ ಆರಂಭವಾಗಿ ಹೊರಪೇಟೆಯಲ್ಲಿರುವ ಶ್ರೀನೀಲಕಂಠೇಶ್ವರ ದೇವಾಲಯದ ಅವರಣದಲ್ಲಿ ಜಿಲ್ಲಾ ನೇಕಾರರ ಒಕ್ಕೂಟದ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್,ಉಪಾಧ್ಯಕ್ಷ ಎನ್.ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ,ಕಾರ್ಯದರ್ಶಿ ರೇವಣ್ಣಕುಮಾರ್,ನೇಕಾರರ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಮತಿ ಚಂದ್ರಕಲಾ ದೇವರಾಜು,ಸಂಘಟನಾ ಕಾರ್ಯದರ್ಶಿ ಅನಿಲ್‍ಕುಮಾರ್,ನಿರ್ದೇಶಕರಾದ ರಂಗಸ್ವಾಮಿ, ಜೈರಂಗಶೆಟ್ಟಿ ಅವರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಧನಿಯಕುಮಾರ್ ಮಾತನಾಡಿ,ನೇಕಾರರ ಸಮುದಾಯ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸಮುದಾಯ.ಈ ಸಮುದಾಯಕ್ಕೆ ಸೇರಿದ ಅದ್ಯ ವಚನಕಾರ ದೇವರ ದಾಸಿಮಯ್ಯ ಅನುಭವ ಮಂಟಪದ ಪ್ರಮುಖರಲ್ಲಿ ಒಬ್ಬರಾಗಿದ್ದು, ಬಸವಣ್ಣನವರಿಗಿಂತಲೂ ಹಿರಿಯರು.ಸುಮಾರು 176ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಅವುಗಳ ಮೂಲಕ ಸಮಾಜದ ಓರೆಕೋರೆ ತಿದ್ದುವ ಕೆಲಸ ಮಾಡಿದ್ದಾರೆ.ಇಂತಹ ವ್ಯಕ್ತಿಯನ್ನು ಗುರುತಿಸಿ ಸರಕಾರ ದೇವರದಾಸಿಮಯ್ಯ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಣೆಗೆ ಮುಂದಾಗಿ ರುವುದು ಇಡೀ ನೇಕಾರರ ಸಮುದಾಯ ಹೆಮ್ಮೆ ಪಡುವಂತಹ ವಿಚಾರವಾಗಿದೆ.ಇದಕ್ಕಾಗಿ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನೇಕಾರರ ಸಮುದಾಯ ಅರ್ಥಿಕವಾಗಿ, ಸಾಮಾಜಿಕವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಆಗಸ್ಟ್ 07 ದಿನಾಂಕವನ್ನು ನೇಕಾರರ ದಿವಸ್ ಎಂದು ಘೋಷಿಸಿದ ಪರಿಣಾಮ, ಸಮಾಜದಲ್ಲಿ ಮತ್ತಷ್ಟು ಘನತೆ ಪಡೆಯುವಂತಾಯಿತು.ಇದರ ಭಾಗವಾಗಿ ರಾಜ್ಯ ಸರಕಾರವೂ ಸ್ಪಂದಿಸಿ,ನೇಕಾರರಿಗೆ ವಿವಿಧ ಸವಲತ್ತುಗಳ ಜೊತೆಗೆ,ನೇಕಾರರ ಅಭಿವೃದ್ದಿ ನಿಗಮ ಸ್ಥಾಪಿಸಿದೆ.ಅಲ್ಲದೆ ನೇಕಾರರ ಸಮುದಾಯಕ್ಕೆ ಕೋವಿಡ್ ಪರಿಹಾರವಾಗಿ ನೀಡುತ್ತಿದ್ದ ಮಾಸಿಕ 2000 ರೂಗಳನ್ನು ಐದು ಸಾವಿರ ರೂಗಳಿಗೆ ಹೆಚ್ಚಳ ಮಾಡಿದೆ.ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ಎಲ್ಲಾ ನೇಕಾರ ಬಂಧುಗಳು ಹೃಪೂರ್ವಕವಾಗಿ ಅಭಿನಂದಿಸುವುದಾಗಿ ಧನಿಯಕುಮಾರ್ ತಿಳಿಸಿದರು.
ಮಾ.26ರ ಭಾನುವಾರ ಸರಕಾರವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಅದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿ ಆಚರಿಸಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ನಿವೃತ್ತ ಕೆ.ಪಿ.ಟಿ.ಸಿ.ಎಲ್ ಇಂಜಿನಿಯರ್ ಕೆ.ಹೆಚ್.ರಾಮಸ್ವಾಮಿ, ತುರುವೇಕೆರೆಯ ರಾಘವ,ಎಸ್.ಬಿ.ಐ ನ ನಿವೃತ್ತ ಮುಖ್ಯ ಕ್ಯಾಷಿಯರ್ ಡಿ.ಪಿ.ಶಾಮಣ್ಣ, ಅಂತರರಾಷ್ಟ್ರೀಯ ವೇಗದ ನಡಿಗೆ ಕ್ರೀಡಾಪಟು ನರೇಶ್,ನೇಕಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಲಿಂಗರಾಜು ಅವರುಗಳನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಜಿ.ಜಿ.ಜೋತಿಗಣೇಶ್ ವಹಿಸಲಿದ್ದು,ಕೇಂದ್ರದ ಮಂತ್ರಿ ಎ.ನಾರಾಯಣಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ ಕಾರ್ಯಕ್ರಮ ಉದ್ಘಾಟಿಸುವರು.ಸಂಸದರಾದ ಜಿ.ಎಸ್.ಬಸವರಾಜು,ಜಿಲ್ಲೆಯ ಎಲ್ಲಾ ಸಚಿವರು, ಶಾಸಕರು,ವಿಧಾನಪರಿಷತ್ ಸದಸ್ಯರು, ಪಾಲಿಕೆಯ ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಸೇರಿದಂತೆ ಗಣ್ಯರು ಉಪಸ್ಥಿತರಿರುವರು ಎಂದರು.
ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ರಾಜಕೀಯ ಬಲ ನೀಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದ 224 ಸೀಟುಗಳಲ್ಲಿ ಕನಿಷ್ಠ 5 ಸೀಟುಗಳನ್ನು ನೇಕಾರರ ಸಮುದಾಯಕ್ಕೆ ಮೀಸಲಿಡಬೇಕು ಹಾಗೂ ಶೈಕ್ಷಣಿಕ ಅಭಿವೃದ್ದಿಗಾಗಿ ಹೆಣ್ಣು ಮಕ್ಕಳ ಹಾಸ್ಟಲ್ ನಿರ್ಮಿಸಬೇಕು,ರೈತರ ಸಾಲ ಮನ್ನಾ ರೀತಿ, ನೇಕಾರರ ಸಾಲಮನ್ನಾ ಮಾಡಬೇಕು, ರೈತ ಸನ್ಮಾನ್ ನಿಧಿಯಂತೆ ನೇಕಾರರ ಸನ್ಮಾನ್ ನಿಧಿಯನ್ನು ಪ್ರಾರಂಭಿಸಬೇಕೆಂಬುದು ರಾಜ್ಯ ನೇಕಾರರ ಒಕ್ಕೂಟದ ಒತ್ತಾಯವಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸೋಮಶೇಖರ್ ಅಧ್ಯಕ್ಷರಾಗಿ ನೇಮಕವಾದ ನಂತರ ಇಡೀ ರಾಜ್ಯ ತಿರುಗಿ ಸಂಘಟಿಸಿ, ಉತ್ತಮ ಕೆಲಸ ಮಾಡಲಾಗಿದೆ.ಜಿಲ್ಲೆಯ11 ತಾಲೂಕುಗಳ ನೇಕಾರ ಬಂಧುಗಳು ಮಾ.26 ರಂದು ತಮ್ಮ ಗ್ರಾಮ ಹಾಗೂ ತಾಲೂಕು ಕೇಂದ್ರದಲ್ಲಿ ನಡೆಯುವ ದೇವರ ದಾಸಿಮಯ್ಯ ಜಯಂತಿಯನ್ನು ಮುಗಿಸಿಕೊಂಡು ಬೆಳಗ್ಗೆ 11 ಗಂಟೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸುವಂತೆ ಧನಿಯಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲಾ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ ಮಾತನಾಡಿ,ಅನುಭವ ಮಂಟಪದ ಹಿರಿಯರಾಗಿ, ಅಣ್ಣ ಬಸವಣ್ಣನವರ ಸಮಕಾಲಿನರಾಗಿದ್ದ ದೇವರ ದಾಸಿಮಯ್ಯ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡಿದವರು.ಅಂತಹವರ ಜಯಂತಿ ಆಚರಿಸುವ ಮೂಲಕ ಸರಕಾರ ತಳ ಸಮುದಾಯಗಳಿಗೆ ಮನ್ನಣೆ ನೀಡಿದೆ.ಸರಕಾರ ರೈತರ ರೀತಿ ನೇಕಾರರಿಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಜಿಲ್ಲಾ ನೇಕಾರರ ಸಂಘದ ಉಪಾಧ್ಯಕ್ಷ ಎನ್.ವೆಂಕಟೇಶ್ ಮಾತನಾಡಿ,ಮಾರ್ಚ್ 6 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೇಕಾರ ಬಂಧುಗಳು ಕುಟುಂಬ ಸಮೇತ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ನೇಕಾರರ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಚಂದ್ರಕಲಾ ಮಾತನಾಡಿ,ಎಲ್ಲಾ ಸಮುದಾಯಗಳಲ್ಲಿಯೂ ಹೆಣ್ಣು ಮಕ್ಕಳು ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದು, ಈ ನಿಟ್ಟಿನಲ್ಲಿ ನೇಕಾರರ ಸಮುದಾಯದಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

(Visited 1 times, 1 visits today)