ತುಮಕೂರು

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಹಂತದ 124 ಮಂದಿ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಯಾಗಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ 8 ಕ್ಷೇತ್ರ ಕ್ಕೆ ಮಾತ್ರ ಅಭ್ಯರ್ಥಿ ಗಳ ಹೆಸರು ಘೋಷಣೆ ಯಾಗಿದೆ.ಟಿಕೆಟ್ ಗೊಂದಲವಿರುವ ತುಮಕೂರು ನಗರ ಸೇರಿ ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಯಾಗುವ ನಿರೀಕ್ಷೆ ಯಿದೆ.
ಪಾವಗಡದ ಹಾಲಿ ಶಾಸಕ ವೆಂಕಟರವಣಪ್ಪ ಬದಲಾಗಿ ಅವರ ಪುತ್ರ ಎಚ್. ವಿ. ವೆಂಕಟೇಶ್ ಅವರಿಗೆ ಈ ಬಾರಿ ಟಿಕೆಟ್ ಕೊಡಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿ ಅಭ್ಯರ್ಥಿ ಯಾದವರು, ಶಾಸಕರಾದ ವರಿಗೆ ಟಿಕೆಟ್ ಹಂಚಿಕೆ ಯಲ್ಲಿ ಮನ್ನಣೆ ನೀಡಲಾಗಿದೆ.
ಕ್ಷೇತ್ರ- ಟಿಕೆಟ್ ಪಡೆದ ಅಭ್ಯರ್ಥಿಗಳು
ಕೊರಟಗೆರೆ (ಎಸ್ಸಿ ಮೀಸಲು) -ಡಾ. ಜಿ ಪರಮೇಶ್ವರ್, ಮಧುಗಿರಿ- ಕೆ. ಎನ್. ರಾಜಣ್ಣ, ಸಿರಾ-ಟಿ.ಬಿ.ಜಯಚಂದ್ರ, ತಿಪಟೂರು – ಷಡಾಕ್ಷರಿ, ಕುಣಿಗಲ್ – ಡಾ.ಎಚ್.ಡಿ.ರಂಗನಾಥ್, ಚಿಕ್ಕ ನಾಯಕನಹಳ್ಳಿ- ಕೆ.ಎಸ್.ಕಿರಣ್ ಕುಮಾರ್, ತುರುವೇಕೆರೆ ಬೆಮೆಲ್ ಕಾಂತರಾಜ್, ಪಾವಗಡ ಎಸ್ ಸಿ ಮೀಸಲು – ಎಚ್.ವಿ.ವೆಂಕಟೇಶ್.
ಸಿರಾ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾಸಲು ಸತೀಶ್ ಗೆ ಟಿಕೆಟ್ ಕೈ ತಪ್ಪಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ತುಮಕೂರು ನಗರ ಟಿಕೆಟ್ ಘೋಷಣೆ ಯಾಗದಿರುವುದು ಟಿಕೆಟ್ ಯಾರಿಗೆ ಎಂಬ ತೀವ್ರ ಕುತೂಹಲ ಕೆರಳಿಸಿದ್ದು ಟಿಕೆಟ್ ಗೆ ತೀವ್ರಲಾಭಿ ನಡೆಸಿರುವ ಮುಸ್ಲಿಂ, ಇತರೆ ಆಕಾಂಕ್ಷಿಗಳಲ್ಲಿ ಯಾರಿಗೆ ಸಿಗಲಿದೆ ಎಂಬ ಜಿಜ್ಞಾಸೆ ಸೃಷ್ಟಿ ಸಿದೆ.

(Visited 2 times, 1 visits today)