ತುಮಕೂರು


ದೇವರಾಯನ ದುರ್ಗ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿ ಊರ್ಡಿಗೆರೆ ಹೋಬಳಿ ಸರ್ವತ್ತೋಮುಖ ಅಭಿವೃದ್ಧಿ ನನ್ನ ಮುಂದಿನ ಗುರಿಯಾಗಿದೆ. ಊರ್ಡಿಗೆರೆ ಪದವಿ ಕಾಲೇಜು ಹಾಗೂ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಭರವಸೆ ನೀಡಿದರು.
ಊರ್ಡಿಗೆರೆ, ದೇವರಾಯನದುರ್ಗಕ್ಕೆ ಭೇಟಿ ನೀಡಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಮತದಾರರೊಂದಿಗೆ ಮಾತನಾಡಿದ ಅವರು, ಊರ್ಡಿಗೆರೆಗೆ ಪದವಿ ಕಾಲೇಜಿನ ಅಗತ್ಯವಿದೆ. ಇಲ್ಲಿಗೆ ವಸಂತನರಾಸಪುರ, ದಾಬಸಪೇಟೆ ಕೈಗಾರಿಕಾ ಪ್ರದೇಶ ಎರಡೂ ಹತ್ತಿರದಲ್ಲಿವೆ. ಇವುಗಳ ಪ್ರಯೋಜನ ಪಡೆಯಬೇಕಾದರೆ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಮನೆ ಬಾಗಿಲಲ್ಲೇ ಶಿಕ್ಷಣ ಸಿಗುವಂತಾಗಬೇಕಾಗಿದೆ ಎಂದರು.
ನಾನು ಶಾಸಕನಾಗಿ ಆಯ್ಕೆಯಾದರೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತೇನೆ. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಒದಗಿಸುತ್ತೇನೆ ಎಂದು ಪೆÇೀಷಕರಿಗೆ ಭರವಸೆ ನೀಡಿದರು.
ದೇವರಾಯನದುರ್ಗ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ರೋಪ್ ವೇ ಅಳವಡಿಸುವುದರಿಂದ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಇಲ್ಲಿ ಉದ್ಯೋಗದ ಜತೆಗೆ ಸ್ಥಳೀಯರಿಗೆ ಸ್ಥಳೀಯ ವಹಿವಾಟಿಗೂ ಅವಕಾಶವಾಗಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಚಾರದಲ್ಲಿ ಅನೇಕ ಮುಖಂಡರು ಹಾಜರಿದ್ದರು.

(Visited 2 times, 1 visits today)