ತುಮಕೂರು

ನಗರ ಬಾಲಭವನದಲ್ಲಿ ಭಾನುವಾರದಂದು ಎಎನ್‌ಕೆ ಅಕಾಡೆಮಿವತಿಯಿಂದ ಮಿಸ್ಟರ್, ಮಿಸಸ್, ಟೀನ್ಸ್ ಹಾಗೂ ಕಿಡ್ಸ್ ತುಮಕೂರು ೨೦೨೩ ಫ್ಯಾಷನ್ ಶೋ ಗ್ರಾಂಡ್ ಫಿನಾಲೆ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿಸೈನಿಕರಾದ ಜಿ.ಬಸಪ್ಪ ನೆರವೇರಿಸಿದರು. ತಮಿಳು ನಟ ವಿಜಯ್, ಅರ್ಪಿತ ದೇವ್, ಕವನ, ಅಕ್ಷಯ್, ಮಂಜು, ಜ್ಞಾನೇಶ್, ನಟ ಧರ್ಮಣ್ಣ ಕಡೂರ್, ಅರ್ಜುನ್ ಪಾಳೇಗಾರ್, ಜಗದೀಶ್ ಬಾಬು, ಗೌತಮ್, ದೀಕ್ಷಿತ್, ರಕ್ಷಿತ್, ಶಿವು ಹಾಗೂ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಕಿಡ್ಸ್ ಫ್ಯಾಷನ್ ಶೋನಲ್ಲಿ ಮಾನ್ವಿ, ತನಿಷ, ತರುಣ್, ಟೀನ್ಸ್ ಫ್ಯಾಷನ್ ಶೋ ನಲ್ಲಿ ಶ್ರಾವ್ಯ, ಮಿಸ್ಟರ್ ಫ್ಯಾಷನ್ ಶೋ ನಲ್ಲಿ ಕುಶಾಲ್ ಹಾಗೂ ಮಿಸಸ್ ಫ್ಯಾಷನ್ ಶೋನಲ್ಲಿ ಸುಮನ್ ಪ್ರತ್ವೀಕ್ ವಿಜೇತರಾಗಿದ್ದು ಎಲ್ಲರನ್ನು ಅಭಿನಂದಿಸಿದರು.

(Visited 30 times, 1 visits today)