ತುಮಕೂರು:

      ವಿಶ್ವದಾದ್ಯಂತ ಹರಡುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೋನಾ ಸೋಂಕಿತರು, ಶಂಕಿತರು, ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸುವಂತೆ ತುಮಕೂರು ಸ್ಪಿರುಲಿನಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಮಹೇಶ್ ಆರ್.ವಿ. ಅವರು ಸಲಹೆ ನೀಡಿದರು.
ಸ್ಪಿರುಲಿನಾ ಫೌಂಡೇಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿಂದು 350 ಚಿಕ್ಕಿ ಪ್ಯಾಕೆಟ್ ಹಾಗೂ 150 ಬಾಕ್ಸ್ ಸ್ಪಿರುಲಿನಾ ಮಾತ್ರೆಗಳನ್ನು ವಿತರಿಸಿ ಅವರು ಮಾತನಾಡಿದರು.

      ಸ್ಪಿರುಲಿನಾ ಒಂದು ಸೂಕ್ಷ್ಮಾಣು ಜೀವಿಯಾಗಿದ್ದು, ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹದಲ್ಲಿ ಬೇರೆಲ್ಲಾ ಆಹಾರಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೀರಲ್ಪಟ್ಟು ಇದರ ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಯಾವುದೇ ವೈರಾಣು ಸೋಂಕನ್ನು ಪ್ರತಿರೋಧಿಸುವಲ್ಲಿ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.

      ತುಮಕೂರಿನ ಸ್ಪಿರುಲಿನಾ ಫೌಂಡೇಷನ್ ಸಂಸ್ಥೆಯು 2010ರಲ್ಲಿ ಸ್ಪಿರುಲಿನಾ ಕುರಿತು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದು, 2019 ರಿಂದ ಸ್ಪಿರುಲಿನಾ ನ್ಯೂಟ್ರಾ ಚಿಕ್ಕಿ ತಯಾರಿಸುವ ಕುರಿತು ಸಿಎಫ್‍ಟಿಆರ್‍ಐ ಮೈಸೂರು ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದ ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ತರಬೇತಿಯನ್ನು ನೀಡಲು ಸಿದ್ದರಿರುತ್ತಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಆಸ್ಪತ್ರೆಯ ಮೇಟ್ರನ್, ಸಿಬ್ಬಂದಿ ವರ್ಗದವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಎಸ್. ಉಪಸ್ಥಿತರಿದ್ದರು.

(Visited 20 times, 1 visits today)