ತುಮಕೂರು


ಪಾಲಿಕೆ ವ್ಯಾಪ್ತಿಯಲ್ಲಿ ೪೦೦ ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ನಗರಸಭಾ ಸದಸ್ಯರನ್ನು ತೊಡಗಿಸಿಕೊಂಡು ಹೆಚ್ಚಾಗಿ ಕಸ ಬಿದ್ದಿರುವ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗಿದೆ ಎಂದು ಮಹಾನಗರಪಾಲಿಕೆಯ ಆಯುಕ್ತೆ ಬಿ.ವಿ. ಅಶ್ವಿಜಾ ಅವರು ತಿಳಿಸಿದರು.
ನಗರದ ಎಂಪ್ರೆಸ್ ಕಾಲೇಜಿನಲ್ಲಿಂದು ಏರ್ಪಡಿಸಲಾಗಿದ್ದ “ಯೋಗ ಶಿಬಿರದ ಮೂಲಕ ಸ್ವಚ್ಛತಾ ಅರಿವು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ ಮಾಹೆಯ ೧೬ ರಿಂದ “ಸ್ವಚ್ಛತಾ ಹೀ ಸೇವಾ ಆಂದೋಲನ” ಕಾರ್ಯಕ್ರಮದಡಿ ನಗರದಾದ್ಯಂತ ರಸ್ತೆ, ಶೌಚಾಲಯ, ಬಸ್ ನಿಲ್ದಾಣ, ಶಾಲೆ, ಅಂಗನವಾಡಿ, ಕೆರೆ, ಉದ್ಯಾನವನ ಸೇರಿದಂತೆ ಮತ್ತಿತರ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.
ಎಲೆಕ್ಟಾçನಿಕ್ ಉಪಕರಣಗಳಿಂದ ಉತ್ಪತ್ತಿಯಾಗುವ ಇ-ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ಅದರಲ್ಲಿರುವ ರಾಸಾಯನಿಕ ವಸ್ತುಗಳಿಂದ ಆರೋಗ್ಯದ ದುಷ್ಪರಿಣಾಮ ಉಂಟಾಗುತ್ತದೆ ಹಾಗೂ ಎಲೆಕ್ಟಿçಕ್ ವೈರ್, ಲೆಡ್, ಎ.ಸಿ, ಟಿವಿ, ಫ್ರಿಡ್ಜ್ಗಳಂತಹ ಎಲೆಕ್ಟಾçನಿಕ್ ಉಪಕರಣಗಳಲ್ಲಿ ಬಳಸಿರುವ ರಾಸಾಯನಿಕ ವಸ್ತುಗಳು ವಾತಾವರಣದಲ್ಲಿ ಬೆರೆತು ಪರಿಸರವೂ ಕಲುಷಿತವಾಗುತ್ತದೆ. ಈ ನಿಟ್ಟಿನಲ್ಲಿ ಮನೆ-ಮನೆಗೂ ಭೇಟಿ ನೀಡಿ ಇ-ತ್ಯಾಜ್ಯವನ್ನು ವಿಲೇವಾರಿ ಮಾಡುವ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತಲ್ಲದೆ, ಏಕ ಬಳಕೆ (siಟಿgಟe use)ಪ್ಲಾಸ್ಟಿಕ್ ಅನ್ನು ಬಳಸದಿರುವ ಬಗ್ಗೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.
ನಗರದ ಆಯ್ದ ೧೦ ಕಾಲೇಜಿನ ಸುಮಾರು ೧೦೦೦ ಮಕ್ಕಳಿಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆಗಳನ್ನು ಸ್ವಚ್ಛತೆ ಮಾಡಲು ಗುರಿ ನೀಡಲಾಗಿತ್ತು. ಅದರಂತೆ ಮಕ್ಕಳು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗ ತರಬೇತುದಾರ ರಾಮಕೃಷ್ಣ ಮತ್ತು ಪತಂಜಲಿ ತಂಡ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಗಂಗಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

(Visited 1 times, 1 visits today)