ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ಕುಡಿಯುವ ನೀರು

ತುಮಕೂರು:

      ತುಮಕೂರು ನಗರದ ಜನಸಂಖ್ಯೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕವಾದ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿರವರ ಸಹಯೋಗದೊಂದಿಗೆ ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರನ್ನು ತುಂಬಿಸಿ, ನಂತರ ತುಂಬಿದ ನೀರನ್ನು ಪಿ.ಎನ್.ಪಾಳ್ಯದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ (WಖಿP) ಹಾಯಿಸಿ ಶುದ್ಧೀಕರಣ ನಂತರ ಕುಡಿಯುವ ನೀರಿಗೆ ನೀರು ಸರಬರಾಜು ಮಾಡಲು ಯೋಜನೆಯನ್ನು ತಯಾರಿಸಲಾಗಿದೆ. ಈ ಯೋಜನೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅನುದಾನದಲ್ಲಿ ಎರಡು ಹಂತದಲ್ಲಿ ರೂ.32 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಯೋಜನೆಗಳು ಅನುಷ್ಟಾನ ಹಂತದಲ್ಲಿದೆ.

      ಈ ಯೋಜನೆಯ ಮೊದಲ ಹಂತವಾದ ಬುಗುಡನಹಳ್ಳಿ ಕೆರೆಯಿಂದ ತುಮಕೂರು ಅಮಾನಿಕೆರೆಗೆ ನೀರು ತುಂಬುವ ಕಾಮಗಾರಿಯು ಮುಕ್ತಾಯಗೊಂಡಿದ್ದು, ದಿ:11.07.2020 ರಂದು ಪ್ರಾಯೋಗಿಕವಾಗಿ ನೀರನ್ನು ತುಂಬಿಸುವ ಪ್ರಕ್ರಿಯೆಯನ್ನು ಪರೀಕ್ಷಿಸಲಾಯಿತು. ಈ ಸುಸಂದರ್ಭದಲ್ಲಿ ಮಾನ್ಯ ಸಂಸದರಾದ ಶ್ರೀ ಜಿ.ಎಸ್.ಬಸವರಾಜು, ಮಾನ್ಯ ಶಾಸಕರಾದ ಶ್ರೀ ಜ್ಯೋತಿ ಗಣೇಶ್, ಮಾನ್ಯ ಜಿಲ್ಲಾಧಿಕಾರಿಗಳಾದ ಡಾ|| ರಾಕೇಶ್ ಕುಮಾರ್ ಕೆ ರವರು, ಶ್ರೀ ಬಿ.ಟಿ ರಂಗಸ್ವಾಮಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ರವರು ಮತ್ತು ಶ್ರೀ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತುಮಕೂರು ವಿಭಾಗ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      ನರೇಂದ್ರ ಮೋದಿಜೀ, ಸನ್ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಕನಸಿನ ಕೂಸು ಮತ್ತು ಮಹತ್ವಾಕಾಂಕ್ಷಿ ಯೋಜನೆಯಾದ “ಸ್ಮಾರ್ಟ್ ಸಿಟಿ ಮಿಷನ್’’ ಹಾಗೂ ಸನ್ಮಾನ್ಯ ಶೀ ಬಿ.ಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ರವರ ದೂರದೃಷ್ಟಿಯಿಂದ ಮತ್ತು ಶ್ರೀ ಜೆ.ಸಿ ಮಾಧುಸ್ವಾಮಿ, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಶ್ರೀ ಜಿ.ಎಸ್ ಬಸವರಾಜ್, ಮಾನ್ಯ ಸಂಸದರು, ತುಮಕೂರು ಲೋಕಸಭಾ ಕ್ಷೇತ್ರ ರವರು ತಿಳಿಸಿದರು.

      ತುಮಕೂರು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಅಮಾನಿಕೆರೆಗೆ ನೀರು ತುಂಬಿಸುವುದರಿಂದ ನಗರದಲ್ಲಿರುವ ಕೊಳವೆ ಬಾವಿಗಳು ಪುನರುಜ್ಜೀವಗೊಳ್ಳುತ್ತವೆ ಮತ್ತು ತುಮಕೂರು ನಗರದ ನೀರಿನ ಸಮಸ್ಯೆಯನ್ನು ಒಂದು ವರ್ಷದೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ತಿಳಿಸಿದರು.

      ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ರವರ ಈ ಯೋಜನೆಯ ಸಫಲತೆಯ ಬಗ್ಗೆ ಹರ್ಷ ವ್ಯಕ್ತ ಪಡಿಸುತ್ತಾ ಈಗ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುವ (ಖಿesಣ ಖuಟಿ) ಸಲುವಾಗಿ ನೀರನ್ನು ಹರಿಸಿದ್ದು, ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಲು ಪ್ರಾರಂಭಿಸಿದ ನಂತರ ನೀರು ಹರಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಮತ್ತು ಈ ಯೋಜನೆಯ ಎರಡನೇ ಹಂತವು ಸಹ ಅನುಷ್ಟಾನದಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಜೊತೆಗೆ ಇದೇ ರೀತಿ ಮರಳೂರು ಅಮಾನಿಕೆರೆಗೆ ನೀರು ತುಂಬುವ ಯೋಜನೆಯನ್ನು ಸಹ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾನ್ಯ ವಿಧಾನಸಭಾ ಸದಸ್ಯರು ತಿಳಿಸಿದರು.

      ಈ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿರವರು ಅನುಷ್ಟಾನಗೊಳಿಸುತ್ತಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಿದ ಶ್ರೀ ರಾಕೇಶ್ ಸಿಂಗ್, ಭಾ.ಆ.ಸೇ, ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಜಲಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆ ಹಾಗೂ ಅಧ್ಯಕ್ಷರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಾ. ಶಾಲಿನಿ ರಜನೀಶ್, ಭಾ.ಆ.ಸೇ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಹಿಂದಿನ ಅಧ್ಯಕ್ಷರು ಮತ್ತು ಡಾ. ಕೆ ರಾಕೇಶ್ ಕುಮಾರ್ ಭಾ.ಆ.ಸೇ, ಮಾನ್ಯ ಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆ ರವರಿಗೆ ಈ ಸಂದರ್ಭದಲ್ಲಿ ಮಾನ್ಯ ವಿಧಾನಸಭಾ ಸದಸ್ಯರು ಧನ್ಯವಾದಗಳನ್ನು ತಿಳಿಸಿದರು.

(Visited 5 times, 1 visits today)

Related posts

Leave a Comment