BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ
  • ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ
  • ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ
  • ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ
  • ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ
  • ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ
  • ರೌಡಿಶೀಟರ್ ಮಲ್ಲ ಭೀಕರ ಹತ್ಯೆ
  • ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರೊನಾ ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಕ್ರಿಯ : ಸಚಿವ
Trending

ಕೊರೊನಾ ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಕ್ರಿಯ : ಸಚಿವ

By News Desk BenkiyabaleUpdated:July 15, 2020 6:31 pm

ಪಾವಗಡ:

      ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಟ್ರಿಯವಾಗಿದೆ. ನೀವು ನಿಮ್ಮ ಕೆಲಸಕ್ಕೆ ನಾಲಾಯಕ್, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ಲದ ಕಾರಣದಿಂದ ತಾಲೂಕಿ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ಇಂತಹ ದುರ್ಘಟನೆಗೆ ನೇರವಾಗಿ ನೀವುಗಳೇ ಕಾರಣವೆಂದು ತಾಲೂಕು ಆಡಳಿತದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕೆಂಡಕಾರಿದರು.

      ಪಾವಗಡ ಪಟ್ಟಣದ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹ್ಮ ಸ್ವಾಮಿ ದೇವಾಲಯದ ಬಳಿಯ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಅವರು, ತಹಶೀಲ್ದರ್, ತಾಪಂ ಇಒ ಹಾಗೂ ಪೊಲೀಸ್ ಇಲಾಖೆಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ಮುಂದೆ ತಲೆದಂಡ ತಪ್ಪಿದಲ್ಲ ಉಷಾರ್ ಎಂದು ಎಚ್ಚರಿಕೆ ನೀಡಿದರು.

      ಪಾವಗಡ ಒಂದು ಗಡಿ ತಾಲೂಕು ಆಗಿದ್ದು ಇಲ್ಲಿ ನಿರಂತರವಾದ ತಪಾಸಣಿ ನಡೆಸಬೇಕು. ಈ ಕೆಲಸ ನೀವು ಸರಿಯಾಗಿ ನಿಭಾಯಿಸದ ಕಾರಣ ಸುತ್ತಲಿನ ಆಂಧ್ರದವರ ಒಡಾಟದಿಂದ ಇಲ್ಲಿನ ಪ್ರಕರಣಗಳು ಏರಿಕೆಯಾಗುತಿವೆ. ಹಾಗೂ ಗ್ರಾಮ ಪಂಚಾಯ್ತಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಆಶಾಕಾರ್ಯಕರ್ತೆಯರು ಯಾವುದೇ ಗ್ರಾಮಕ್ಕೆ ಹೊಸಬರು ಬಂದ ಕೂಡಲೇ ಮಾಹಿತಿ ಪಡೆದು ಕ್ವಾರಂಟೈನ್ ಮಾಡದೇ ಬೀದಿಗೆ ಬಿಟ್ಟ ಕಾರಣ ಎಲ್ಲರೂ ಇಂದು ಕೊರೊನಾ ಭೀತಿಯನ್ನು ಅನುಭವಿಸುವಂತಾಗಿದೆ ಎಂದರು.

      ತಾಲೂಕು ಆಡಳಿತದ ಕಾರ್ಯವೈಕರಿ ಸಂಪೂರ್ಣ ವಿಫಲವಾಗಿದೆ, ನೀವು ಕೆಲಸಗಳು ಮಾಡಲು ನಾಲಾಯಕ್ ನಿಮಗೆ ಕೆಲಸ ಮಾಡುವ ಇಲ್ಲವೇ ಮಾಡಿಸುವ ವಿಧಾನ ಗೊತ್ತಿಲ್ಲದಿದ್ದರೆ ಏನು ಮಾಡುವುದು. ಆಗಾಗಿ ಮೊದಲು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ತಿಳಿದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು. ಹೀಗೆ ಮುಂದುವರೆದರೆ ಕೊರೊನಾ ಮಹಾಮಾರಿಯ ವಿರುದ್ಧ ಜನರನ್ನು ರಕ್ಷಿಸುವುದು ಹೇಗೆ ಎಂದು ತಹಶೀಲ್ದರ್ ವರದರಾಜು, ತಾಪಂ ಇಒ ತಾಲೂಕು ವೈದ್ಯಾಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು.

       ತಾಲೂಕಿನಲ್ಲಿ ಕೊವಿಡ್ ಪ್ರಕರಣಗಳು ಬೆಳಕಿಗೆ ಬಂದು ಸೀಲ್‍ಡೌನ್ ಆದ ಪ್ರದೇಶಕ್ಕೆ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಬೇಕು, ಅಲ್ಲಿ ಹೊಂ ಕ್ವಾರಂಟೈನ್‍ನಲ್ಲಿರುವ ಜನತೆಗೆ ಪ್ರತಿದಿನದ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತದ ವತಿಯಿಂದಲೇ ಪೂರೈಕೆ ಮಾಡಬೇಕು. ಹಲವು ಪ್ರದೇಶಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಜನತೆಗೆ ದಿನಸಿ ಪದಾರ್ಥಗಳು ಸಿಗದೇ ಅವರು ಗೋಳಾಡಿದ್ದುಂಟು. ಏಕೆಂದರೆ ಅಲ್ಲಿ ತಾಲೂಕು ಆಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಆ ಘಟನೆಗಳು ನಡೆದಿವೆ. ಮತ್ತೆ ಎಲ್ಲೇ ಆಗಲಿ ಅಂತಹ ಘಟನೆಗಳು ಮರುಕಳಿಸಿದರೆ ಮುಂದಾಗುವ ಆನಾಹುತಕ್ಕೆ ನೀವೆ ಕಾರಣರೆಂದರು.
ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ಸಮುದಾಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಪ್ರಕರಣಗಳು ಹೆಚ್ಚಾಗದಂತೆ ಜಾಗೃತಿವಹಿಸಬೇಕು, ತಾಲೂಕಿನಲ್ಲಿ ಜಿಲ್ಲಾಡಳಿತದವತಿಯಿಂದ ಯಾವುದೇ ಸೂಚನೆ ಇಲ್ಲದಿದ್ದರು ಸಳೀಯವಾಗಿ ಜನತೆಯ ಒಮ್ಮತದಿಂದ ದಿನಬಿಟ್ಟು ದಿನ ಲಾಕ್‍ಡೌನ್ ಜಾರಿಯಾಗಿದ್ದು ಉತ್ತಮ ಬೆಳವಣಿಗೆಯಾಗಿದ್ದು, ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಿ ಕೊರೊನಾ ತಡೆಗಟ್ಟಲು ಆಗತ್ಯ ಕ್ರಮಕೈಗೊಳ್ಳಿ ಎಂದರು.=

     ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು ತಮ್ಮ ತಮ್ಮ ಗ್ರಾಮಗಳ ಪ್ರತಿ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಯಾವುದೇ ರೋಗ ಲಕ್ಷಣ ಕಂಡುಬಂದರೆ ತಕ್ಷಣವೇ ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಪಂ ಕಾರ್ಯನಿರ್ವಣಾಧಿಕಾರಿ ಶುಭಾಕಲ್ಯಾಣ್, ಡಿಹೆಚ್‍ಒ ನಾಗೇಂದ್ರಯ್ಯ, ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್, ತಾಲೂಕು ನೋಡಲ್ ಆಧಿಕಾರಿ ಮಹಿಮಾ, ತಹಶೀಲ್ದರ್ ವರದರಾಜು ಉಪಸ್ಥಿತರಿದ್ದರು.

(Visited 37 times, 1 visits today)
Previous Articleತುಮಕೂರು : ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಸೀಲ್ ಡೌನ್!!
Next Article ತಹಸೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ : ಸಿ.ಬಿ.ಐ ತನಿಖೆಗೆ ಆಗ್ರಹ!!
News Desk Benkiyabale

Related Posts

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm news

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm news

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm news
ತಾಜಾ ಸುದ್ಧಿಗಳು
news

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm
news

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm
news

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm
news

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm
news

ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ

July 27, 2026 5:07 pm
news

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ

July 27, 2026 5:06 pm
Our Youtube Channel
Our Picks

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm

ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ

July 27, 2026 5:07 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

By News Desk BenkiyabaleJuly 27, 2026 5:14 pm

ತುಮಕೂರು: ಎಐಸಿಸಿಯ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ…

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.