ತುಮಕೂರು :  

       ನಗರದ ಅಮರಜ್ಯೋತಿ ನಗರದ ಬಾಲಕಿಯರ ಬಾಲಮಂದಿರದಿಂದ ಬಾಲಕಿಯೊಬ್ಬಳು ಭಾನುವಾರ ರಾತ್ರಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

     ತಿಪಟೂರು ಮೂಲದ ಈ ಬಾಲಕಿಗೆ ತಂದೆ-ತಾಯಿ ಯಾರೂ ಇಲ್ಲ ಎಂದು ತಿಳಿದುಬಂದಿದೆ. ಪರಾರಿಯಾಗಿರುವ ಬಾಲಕಿಯು ಗೌರಿ ಎಂದು ತಿಳಿದು ಬಂದಿರುತ್ತದೆ. ಈ ಹಿಂದೆಯೂ ಸಹ ಇದೇ ಬಾಲಕಿಯರ ಬಾಲಮಂದಿರದಿಂದ ಬಾಲಕಿಯರು ಪರಾರಿಯಾಗಿದ್ದಂತಹ ಪ್ರಕರಣಗಳು ಕಂಡು ಬಂದಿರುತ್ತವೆ.

        ಗೌರಿ ಸುಮಾರು 15 ವರ್ಷದ ಬಾಲಕಿ ಯಾಗಿದ್ದು ಈ ಬಾಲಕಿ ಪರಾರಿಯಾಗಲು ಅಲ್ಲಿನ ಇತರೇ ಬಾಲಕಿಯರು ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

      ನಿನ್ನೆ ಮಧ್ಯರಾತ್ರಿ ವೇಳೆ ಪರಾರಿಯಾಗಿರುವ ಬಾಲಕಿ ಇದುವರೆಗೂ ಸಿಕ್ಕಿಲ್ಲ ಎಂಬ ಮಾಹಿತಿ ಇದ್ದು, ಈ ಬಾಲಕಿ ಗುಬ್ಬಿ ರೈಲ್ವೆ ಸ್ಟೇಷನ್ ಬಳಿ ಬಿಕ್ಷೆ ಬೇಡುವಾಗ ಮಕ್ಕಳ ಸಹಾಯವಾಣಿಯವರು ರಕ್ಷಣೆ ಮಾಡಿ ಬಾಲಮಂದಿರಕ್ಕೆ ಬಿಟ್ಟಿದರು ಎನ್ನಲಾಗಿದೆ.

      ತುಮಕೂರು ಬಾಲಮಂದಿರದಿಂದ ಬಾಲಕಿಯರು ಪರಾರಿಯಾಗುತ್ತಿರುವ ಪ್ರಕರಣದ ಹಿಂದೆ ಬಾಲಮಂದಿರದ ಅಧೀಕ್ಷಕರು ಹಾಗೂ ಸಿಬ್ಬಂದಿಯವರ ನಿರ್ಲಕ್ಷತನ ಎದ್ದುಕಾಣುತ್ತದೆ.

      ಈ ಬಗ್ಗೆ ಅಧೀಕ್ಷಕರನ್ನು ಮಾತನಾಡಿಸಿದಾಗ ಬಾಲಕಿಯು ಬಾಲಮಂದಿರದಿಂದ ರಾತ್ರಿ ಪರಾರಿಯಾಗಿಲ್ಲ ನಿನ್ನೆ ಬೆಳಗ್ಗೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಿದ್ದೇವೆ ಎಂಬ ಹಾರಿಕೆಯ ಉತ್ತರವನ್ನು ನೀಡುತ್ತಾರೆ.

       ತುಮಕೂರು ಬಾಲಮಂದಿರದಿಂದ ಬಾಲಕಿಯರು ಪರಾರಿಯಾಗುತ್ತಿರುವ ಪ್ರಕರಣಗಳು ಹೊಸತಲ್ಲವಾದರೂ ರಕ್ಷಣೆ ಮಾಡಬೇಕಾದಂತಹ ಇಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯತನವನ್ನು ಪ್ರಶ್ನಿಸಬೇಕಾಗಿದೆ ಹಾಗೂ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಬಾಲ ಮಂದಿರದ ಅಧೀಕ್ಷಕರು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. 

(Visited 32 times, 1 visits today)